ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬನ್ನಿ: ಖರ್ಗೆ ಸವಾಲು

By Kannadaprabha NewsFirst Published Aug 8, 2022, 11:49 AM IST
Highlights

ಭಾವನಾತ್ಮಕ ವಿಷಯ ಹೇಳಿ ಜನರಿಗೆ ಮೋಸ ಮಾಡುವ ಬಿಜೆಪಿಗರು ಎಷ್ಟುಜನ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಕಲಬುರಗಿ ಜಿಲ್ಲೆಗೆ, ಚಿತ್ತಾಪುರ ಮತಕ್ಷೇತ್ರಕ್ಕೆ ಎಷ್ಟುಅನುದಾನ ತಂದಿದ್ದಾರೆ. ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

 ಶಹಾಬಾದ್‌ (ಆ.8) : ಭಾವನಾತ್ಮಕ ವಿಷಯ ಹೇಳಿ ಜನರಿಗೆ ಮೋಸ ಮಾಡುವ ಬಿಜೆಪಿಗರು ಎಷ್ಟುಜನ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಕಲಬುರಗಿ ಜಿಲ್ಲೆಗೆ, ಚಿತ್ತಾಪುರ ಮತಕ್ಷೇತ್ರಕ್ಕೆ ಎಷ್ಟುಅನುದಾನ ತಂದಿದ್ದಾರೆ ಎಂದು ಪ್ರಶ್ನಿಸಿದ ಶಾಸಕ ಪ್ರಿಯಂಕ ಖರ್ಗೆ ಅವರು, ಈ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಬಿಜೆಪಿಗೆ ಸವಾಲು ಹಾಕಿದರು. ನಾಲವಾರ ವಲಯದ ಕೊಲ್ಲೂರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕೋಣೆ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ನನ್ನ ಎದುರು ಮಾತನಾಡಲು ಅಳುಕು ಇದ್ದರೆ, ನನ್ನ ಅನುಪಸ್ಥಿತಿಯಲ್ಲಿ ಬಹಿರಂಗ ಚರ್ಚೆ ನಡೆಸಲಿ. ಮೂರು ವರ್ಷದಲ್ಲಿ ಕಲಬುರಗಿ, ಚಿತ್ತಾಪುರದ ಎಷ್ಟುಯುವಕರಿಗೆ ಉದ್ಯೋಗ ನೀಡಿದ್ದಿರಿ, ಕಲ್ಯಾಣ ಕರ್ನಾಟಕ, ಸರ್ಕಾರದ ವಿವಿಧ ಇಲಾಖೆಗಳ ಅನುದಾನವೆಷ್ಟುಎಂಬುವುದನ್ನು ಬಹಿರಂಗಪಡಿಸಿ ಎಂದರು.

 

ಈವರೆಗಿನ ಎಲ್ಲ ಕೋಮುಗಲಭೆ, ಹತ್ಯೆ ನ್ಯಾಯಾಂಗ ತನಿಖೆ ನಡೆಸಿ: ಪ್ರಿಯಾಂಕ್‌ ಖರ್ಗೆ

ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಖುಷಿಯಲ್ಲಿರುವ ಕಲಬುರಗಿ ಜನರಿಗೆ ಬಿಜೆಪಿಗರು ಮಾಡಿದ ಒಳ್ಳೆಯ ಕೆಲಸವೇನು? ಖರ್ಗೆ ಅವರು ತಂದಿದ್ದ ಬೃಹತ್‌ ಯೋಜನೆಯೂ ವಾಪಸ್ಸು ಹೋಗಿವೆ, ಖರ್ಗೆ ಅವರನ್ನು ಕೈಬಿಟ್ಟು ಜನರು ಮರಗುತ್ತಿದ್ದಾರೆ. ಜನರಿಗೆ ಬೇಕಾಗಿರುವದು ಅಭಿವೃದ್ಧಿ, ಹಸಿದ ಹೊಟ್ಟೆಗೆ ಅನ್ನ, ಯುವಕರಿಗೆ ಉದ್ಯೊಗ, ಇದರ ಬಗ್ಗೆ ಮಾತನಾಡಿ ಎಂದರೆ ನೆರೆಯ ಪಾಕಿಸ್ತಾನ ಹಾಗೂ ರಾಮ ಮಂದಿರ ತೋರಿಸಿ ಭಾವನೆ ಕೆರಳಿಸುತ್ತಾರೆ ಎಂದು ಹೇಳಿದರು.

80 ದಾಟಿರುವ ಖರ್ಗೆಗೆ ಯಾರು ದುಃಖಿಸುವವರೇ ಇಲ್ಲ: ವ್ಯಂಗ್ಯವಾಡಿದ ಬಿಜೆಪಿ

ಕಾರ್ಯಕ್ರಮದಲ್ಲಿ ಚಿತ್ತಾಪುರ ಬಿಸಿಸಿ ಅಧ್ಯಕ್ಷ ಭೀಮಣ್ಣ ಸಾಲಿ, ಕೊಲ್ಲೂರ ಗ್ರಾಪಂ ಅಧ್ಯಕ್ಷ ಸಾಬಮ್ಮಾ ಹಳ್ಳಿ, ವೀರಣ್ಣಗೌಡ ಪರಸರೆಡ್ಡಿ, ಶ್ರೀನಿವಾಸ ಸಗರ, ಅಜೀಜ ಸೇಠ, ಪಾಶಾ ಪಟೇಲ, ರಮೇಶ ಮರಗೋಳ, ಶರಣು ಸಾಹು, ಕೃಷ್ಣಾರೆಡ್ಡಿ ಹಿರೆಡ್ಡಿ, ಸಾಬಣ್ಣ ಬನ್ನಟ್ಟಿ, ತಾಪಂ ಮಾಜಿ ಸದಸ್ಯ ಭಾಗಪ್ಪ, ಸಿದ್ದಣ್ಣ ಕೊಲಕುಂದಿ, ಕುಮಾರಗೌಡ ಪೊಲೀಸ್‌ ಪಾಟೀಲ, ಶರಣು ವಾರದ, ನಜೀರ ಖುರೇಷಿ, ಎಂ.ಡಿ.ಕರೀಮ, ಬಸವಂತರಾಯ ಪೊಲೀಸ್‌ ಪಾಟೀಲ, ಶ್ರೀಶೈಲ ನಾಟೀಕಾರ, ರಮೇಶ ಹಡಪದ. ಹಣಮಂತ ಕಡಬೂರ ಇದ್ದರು.

click me!