ಎಸ್‌ಐ ಅಕ್ರಮದಲ್ಲಿ ಸಚಿವ ಅಶ್ವತ್ಥ್ ಸಂಬಂಧಿಕರು ಭಾಗಿ ಎಂದ ಸಿದ್ಧರಾಮಯ್ಯ

Published : May 06, 2022, 02:55 AM IST
 ಎಸ್‌ಐ ಅಕ್ರಮದಲ್ಲಿ ಸಚಿವ ಅಶ್ವತ್ಥ್ ಸಂಬಂಧಿಕರು ಭಾಗಿ ಎಂದ ಸಿದ್ಧರಾಮಯ್ಯ

ಸಾರಾಂಶ

ಪ್ರಿಯಾಂಕ್‌ ಖರ್ಗೆಗೆ ಸಿಐಡಿ ನೋಟಿಸ್‌ ಕೊಟ್ಟಿದ್ದಕ್ಕೆ, ಅವರೇನು ಸಾಕ್ಷಿದಾರರಾ? ಅಪರಾಧಿನಾ? ಅವನ ಮೇಲೆ ಕ್ರಿಮಿನಲ್‌ ಮೊಕದ್ದಮೆ ಇದೆಯಾ? ಅವರು ನೋಟಿಸ್‌ ಕೊಟ್ಟತಕ್ಷಣ ಹೋಗುವುದಕ್ಕಾಗುತ್ತಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇದು ರಾಜಕೀಯ, ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದರು.  

ಮೈಸೂರು (ಮೇ.6): ಪಿಎಸೈ ಪರೀಕ್ಷೆ ಪ್ರಕರಣದಲ್ಲಿ ಸಚಿವ ಅಶ್ವತ್ಥ್ ನಾರಾಯಣ್‌ (CN Ashwath narayan) ಕಡೆಯವರು ಇಬ್ಬರಿದ್ದಾರೆ. ದರ್ಶನ್‌ಗೌಡ (Darshan Gowda) ಮತ್ತು ನಾಗೇಶ್‌ಗೌಡ (Nagesh Gowda), ಅವರಿಬ್ಬರೂ ಅಶ್ವತ್ಥನಾರಾಯಣ್‌ ಸಂಬಂಧಿಕರು. ಅವರನ್ನು ಕರೆದು ಬಿಟ್ಟು ಬಿಟ್ಟಿದ್ದಾರೆ. ಕೇಂದ್ರದ ನಾಯಕರು ಇವರನ್ನು ಸಮರ್ಥಿಸುತ್ತಿದ್ದಾರೆ. ಇವರ ಭ್ರಷ್ಟಾಚಾರದ (Corruption) ಪರ ಮುದ್ರೆ ಒತ್ತುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (opposition Leader Siddaramaiah)  ಆರೋಪಿಸಿದ್ದಾರೆ. 

ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ (PSI Recruitment Scam,) ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿದ್ದಾರೆ. ರಾಜಕಾರಣಿಗಳು ಇದ್ದಾರೆ, ಸರ್ಕಾರವೂ ಭಾಗಿಯಾಗಿದೆ. ಈ ಹಗರಣದಲ್ಲಿ ಸುಮಾರು .300 ಕೋಟಿ ಹಣ ಪಡೆಯಲಾಗಿದೆ ಎಂದರು. ಇನ್ನು ಪ್ರಿಯಾಂಕ್‌ ಖರ್ಗೆಗೆ ಸಿಐಡಿ ನೋಟಿಸ್‌ ಕೊಟ್ಟಿದ್ದಕ್ಕೆ, ಅವರೇನು ಸಾಕ್ಷಿದಾರರಾ? ಅಪರಾಧಿನಾ? ಅವನ ಮೇಲೆ ಕ್ರಿಮಿನಲ್‌ ಮೊಕದ್ದಮೆ ಇದೆಯಾ? ಅವರು ನೋಟಿಸ್‌ ಕೊಟ್ಟತಕ್ಷಣ ಹೋಗುವುದಕ್ಕಾಗುತ್ತಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇದು ರಾಜಕೀಯ, ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದರು.

ಒಬ್ಬೊಬ್ಬ ಅಭ್ಯರ್ಥಿಯಿಂದ 40 ಲಕ್ಷದಿಂದ 1 ಕೋಟಿವರೆಗೂ ವಸೂಲಿ ಮಾಡಲಾಗಿದೆ. ಇದು ಮಾತ್ರವಲ್ಲ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಅದಕ್ಕೆ ನ್ಯಾಯಾಂಗ ತನಿಖೆಯಾಗಬೇಕು. ಸತ್ಯ ಹೊರ ಬರಬೇಕಾದರೆ, ಕಳ್ಳರಿಗೆ ಶಿಕ್ಷೆಯಾಗಬೇಕಾದರೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಆಕ್ಷೇಪಾರ್ಹ ಅರ್ಧ ಪದ ಬಳಸಿ ಕ್ಷಮೆಯಾಚನೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವೇಳೆ ಆಕ್ಷೇಪಾರ್ಹ ಅರ್ಧ ಪದ ಬಳಸಿ, ತಕ್ಷಣವೇ ಎಚ್ಚೆತ್ತು ಕ್ಷಮೆಯಾಚಿಸಿದರು. ಆ ಪದ ಬಳಸಬಾರದಿತ್ತು ಎಂದು ತಕ್ಷಣವೇ ಕ್ಷಮೆಯಾಚಿಸಿದರು.


ಅಶ್ವತ್ಥ ನಾರಾಯಣ ನಮಗೆ ಗೊತ್ತಿಲ್ಲ: ಸಿದ್ದು ಆರೋಪಕ್ಕೆ ಸಬಗಯ್ಯಸ್ಪಷ್ಟನೆ
ಕುಣಿಗಲ್‌:
ಪಿಎಸ್‌ಐ ಪರೀಕ್ಷೆಯಲ್ಲಿ 10ನೇ ರಾರ‍ಯಂಕ್‌ನಲ್ಲಿ ಪಾಸ್‌ ಆಗಿರುವ ಕುಣಿಗಲ್‌ ತಾಲೂಕು ಚಿಕ್ಕಮಾವತ್ತೂರು ಗ್ರಾಮದ ನಾಗೇಶಗೌಡ ಸಚಿವ ಅಶ್ವತ್ಥನಾರಾಯಣ ಅವರ ಸಂಬಂಧಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. 

ಸಿಐಡಿಯಿಂದ 3ನೇ ನೋಟಿಸ್, ಸರ್ಕಾರಕ್ಕೆ ತಾಕತ್ತಿನ ಸವಾಲು ಹಾಕಿದ ಪ್ರಿಯಾಂಕ್ ಖರ್ಗೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗೇಶಗೌಡ ತಂದೆ ಸಬಗಯ್ಯ, ಅಶ್ವತ್ಥನಾರಾಯಣ ಯಾರೆಂಬುದು ನಮಗೆ ತಿಳಿದಿಲ್ಲ. ನಾನು ಅವರ ಮುಖವನ್ನೂ ನೋಡಿಲ್ಲ. ನಾವು ಮೂಲತಃ ರೈತ ಕುಟುಂಬದವರು. ನಾವು ಅಷ್ಟೊಂದು ಹಣ ನೀಡಿ ಪಿಎಸ್‌ಐ ಹುದ್ದೆ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಈ ಅಕ್ರಮ ನೇಮಕಾತಿಗೂ ನಮ್ಮ ಮಗನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸುಖಾ ಸುಮ್ಮನೆ ನಮ್ಮನ್ನು ಎಳೆದು ತರಲಾಗಿದ್ದು, ನನ್ನ ಮಗ ಕಳೆದ ಒಂದು ವರ್ಷದಿಂದ ಸರಿಯಾಗಿ ಊರಿಗೆ ಬಂದಿಲ್ಲ, ಕಷ್ಟಪಟ್ಟು ಓದಿ ಪಿಎಸ್‌ಐ ಪರೀಕ್ಷೆ ಬರೆದು ಪಾಸ್‌ ಆಗಿದ್ದಾನೆ. ಎಲ್ಲಾ ರೀತಿಯ ವಿಚಾರಣೆಗೂ ನನ್ನ ಮಗ ಸಿದ್ಧನಿದ್ದಾನೆ ಎಂದರು.

ಸರ್ಕಾರದ ಸ್ಪಷ್ಟ ಆದೇಶ, ಮೇಲುಗೈ ಸಾಧಿಸಿದ ಪ್ರೀತಂ ಗೌಡ, ರೇವಣ್ಣಗೆ ಹಿನ್ನಡೆ

ಬಿಜೆಪಿ ಶಾಸಕ ಎಂ.ಚಂದ್ರಪ್ಪ, ಪತ್ನಿ, ಪುತ್ರರ ವಿರುದ್ಧ ಎಫ್‌ಐಆರ್‌
ಹೊಳಲ್ಕೆರೆ:
ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ, ಪತ್ನಿ ಚಂದ್ರಕಲಾ ಹಾಗೂ ಪುತ್ರರಾದ ರಘುಚಂದನ್‌ ಮತ್ತು ದೀಪಚಂದನ್‌ ಸೇರಿ 6 ಮಂದಿಯ ವಿರುದ್ಧ ಹೊಳಲ್ಕೆರೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮೃತ ವ್ಯಕ್ತಿ ಶ್ರೀಧರ್‌ ಎಂಬುವರಿಗೆ ಸೇರಿದ ನಿವೇಶನಗಳನ್ನು ಲಪಟಾಯಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮೃತ ಶ್ರೀಧರ್‌ ಅವರ ನಿವೇಶನಗಳ ಜಿಪಿಎಯನ್ನು ನಾಗರಾಜ್‌ ಎಂಬುವರು ಪಡೆದಿದ್ದು, ಅವರಿಂದ ಶಾಸಕ ಎಂ.ಚಂದ್ರಪ್ಪ ಕುಟುಂಬದವರು ಶ್ರೀಧರ್‌ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ಕ್ರಯ ಮಾಡಿಸಿಕೊಂಡಿದ್ದರು. ಇದೀಗ ಶ್ರೀಧರ್‌ ಸಹೋದರಿ ತಮಗೆ ಆಸ್ತಿಯಲ್ಲಿ ಪಾಲು ಬರಬೇಕಿದೆ, ಆಸ್ತಿ ಮಾರಾಟ ಮಾಡಿರುವ ಪ್ರಕ್ರಿಯೆ ಅಕ್ರಮವಾಗಿದೆ ಎಂದು ಹೊಳಲ್ಕೆರೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಪದ್ಮಜಾ ಅವರ ವಾದವನ್ನು ಎತ್ತಿ ಹಿಡಿದು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!