ಬಿಜೆಪಿಯಲ್ಲಿ ಭಿನ್ನಮತ ಸ್ಪೋಡಗೊಂಡಿದ್ದು, ಕೋಲಾರ ಸಂಸದ ಹಾಗೂ ಉಸ್ತುವಾರಿ ಸಚಿವ ಮುನಿರತ್ನ ವಿರುದ್ದು ಸ್ಥಳಿಯ ಮುಖಂಡರು ತಿರುಗಿಬಿದಿದ್ದು ಸಂಸದ ಮುನಿಸ್ವಾಮಿ, ಸಚಿವ ಮುನಿರತ್ನ ಕಾರ್ಯವೈಖರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಮೇ.05): ಬಿಜೆಪಿಯಲ್ಲಿ (BJP) ಭಿನ್ನಮತ ಸ್ಪೋಡಗೊಂಡಿದ್ದು, ಕೋಲಾರ (Kolar) ಸಂಸದ ಹಾಗೂ ಉಸ್ತುವಾರಿ ಸಚಿವ ಮುನಿರತ್ನ (Munirathna) ವಿರುದ್ದು ಸ್ಥಳಿಯ ಮುಖಂಡರು ತಿರುಗಿಬಿದಿದ್ದು ಸಂಸದ ಮುನಿಸ್ವಾಮಿ (Muniswamy), ಸಚಿವ ಮುನಿರತ್ನ ಕಾರ್ಯವೈಖರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕೋಷ್ಟಿ ನಡೆಸಿ ಇಬ್ಬರ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಮಾಲೂರಿನ ಮಾಜಿ ಜೆಡಿಎಸ್ ಶಾಸಕ ಮಂಜುನಾಥ್ ಗೌಡ (Manjunath Gowda) ಬಿಜೆಪಿ ಸೇರ್ಪಡೆಗೆ ಸಹ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ
undefined
ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮುನಿರತ್ನ ಅವರು ಮಾಲೂರಿನ ಮೂಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿದ್ದು, ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಇದರ ಜೊತೆಗೆ ಮುಖಂಡರನ್ನು ಕಡೆಗಣಿಸಿ ಇತ್ತಿಚೆಗೆ ಮಾಲೂರು ತಾಲ್ಲೂಕಿನ ಟೇಕಲ್‌ನಲ್ಲಿ ನಡೆದ ಕಲ್ಲುಕುಟುಕರ ಸಮಸ್ಯೆಗಳ ಸಭೆ ನಡೆಸಿದ್ದು ಇದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಮಾಜಿ ಶಾಸಕ ಮಂಜುನಾಥ್ ರನ್ನ ವೇದಿಕೆಗೆ ಆಹ್ವಾನಿಸಿ ಶಿಷ್ಠಾಚಾರವನ್ನು ಉಲ್ಲಂಘಿಸಿದ್ದು ಈ ಸಂಬಂದ ಸಂಸದರ ನಡೆ ವಿರುದ್ದ ಹೈಕಮಾಂಡ್ ಸಮಿತಿಗೆ ಸ್ಥಳಿಯ ಮುಖಂಡರು ದೂರು ನೀಡಿದ್ದೇವೆ. ಮುಂಬರುವ 2023 ರ ವಿಧಾನಸಭಾ ಚುನಾವಣೆಗೆ ಮಾಲೂರಿನಲ್ಲಿ ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸುತ್ತಿರುವ ಹೂಡಿ ವಿಜಯ್ ಕುಮಾರ್ ಅವರಿಗೆ ಟಿಕೇಟ್ ನೀಡಬೇಕು.
Kolar: ಕುಟುಂಬ ರಾಜಕಾರಣ ಬೇಡ: ಸಚಿವ ಮುನಿರತ್ನ ಅಭಿಪ್ರಾಯ
ಇಲ್ಲವಾದಲ್ಲಿ ನಮ್ಮ ಪಕ್ಷದ ಸ್ಥಳಿಯ ಮುಖಂಡರಿಗೆ ನೀಡಬೇಕೆ ವಿನಃ ಬೇರೊಬ್ಬರಿಗೆ ನೀಡಬಾರದು. ಹೂಡಿ ವಿಜಯ್ ಕುಮಾರ್ ನಮ್ಮ ತಾಲ್ಲೂಕಿನ ಮಣ್ಣಿನ ಮಗ ಅವರು ಹುಟ್ಟಿ ಬೆಳೆದಿದ್ದು ಮಾಲೂರಿನಲ್ಲಿ ವಿದ್ಯಾಭ್ಯಾಸ ಹಾಗೂ ವ್ಯವಹಾರಕ್ಕಾಗಿ ಮಾತ್ರ ಬೆಂಗಳೂರಿಗೆ ಹೋಗಿದ್ದಾರೆ. ಹಾಗಾಗಿ ಹೂಡಿ ವಿಜಿಕುಮಾರ್‌ಗೆ ಮುಂಬರುವ ಚುನಾವಣೆಗೆ ಟಿಕೇಟ್ ನೀಡಬೇಕು ಎಂದು ಮನವಿ ಮಾಡಿದರಲ್ಲದೆ ಮಾಲೂರಿನಲ್ಲಿ ಕಷ್ಟ ಬಿದ್ದು ಪಕ್ಷವನ್ನ ಕಟ್ಟಿಕೊಂಡು ಬಂದಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಯನ್ನು ಮಾಲೂರಿನಲ್ಲಿ ಗೆಲ್ಲಿಸುವ ಶಕ್ತಿ ನಮ್ಮ ಬಿಜೆಪಿ ಕಾರ್ಯಕರ್ತರು ಮುಖಂಡರಲ್ಲಿದೆ. ಯಾವುದೇ ಕಾರಣಕ್ಕೂ ಬಿಜೆಪಿಯ ಮೂಲ ಕಾರ್ಯಕರ್ತರನ್ನು ಬಲಿಪಶು ಮಾಡಬೇಡಿ. ಸಂಸದರು ಹಾಗೂ ಉಸ್ತುವಾರಿ ಸಚಿವರು ನಮ್ಮ ಕ್ಷೇತ್ರಕ್ಕೆ ತಲೆಹಾಕದಿದ್ದಾರೆ ಒಳ್ಳೆಯದು ಎಂದರು.
ನಿಷ್ಕ್ರಿಯ ಉಸ್ತುವಾರಿ ಜಿಲ್ಲೆಗೆ ಬೇಡ: ಕೋಲಾರ (Kolar) ಜಿಲ್ಲೆಗೆ ಉಸ್ತುವಾರಿ ಸಚಿವರು ನೇಮಕವಾಗಿ 8 ತಿಂಗಳು ಕಳೆದರೂ ಜಿಲ್ಲೆಗೆ ಮುನಿರತ್ನ ಅವರ ಕೊಡುಗೆ ಶೂನ್ಯ. ಯಾವುದೇ ರೀತಿಯ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಉಸ್ತುವಾರಿ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಸಚಿವ ಮುನಿರತ್ನ ವಿರುದ್ಧ ಜೆಡಿಎಸ್ ಎಂಎಲ್‌ಸಿ ಗೋವಿಂದರಾಜು (JDS MLC Govindaraju) ವಾಗ್ದಾಳಿ ನಡೆಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಗೋವಿಂದರಾಜು, ಜಿಲ್ಲೆಯಲ್ಲಿ ಒಟ್ಟು 10 ಜನಪ್ರತಿನಿಧಿಗಳು ಇದ್ದೇವೆ. ಈವರೆಗೆ ಜನಪ್ರತಿನಿಧಿಗಳ ಸಮಸ್ಯೆಗಳ ಬಗ್ಗೆ ಮುನಿರತ್ನ ಅವರು ಚರ್ಚೆ ಮಾಡಿಲ್ಲ.
ಕೋಲಾರ: ರೈಲ್ವೇ ಅಧಿಕಾರಿಗಳ ರೌಂಡ್ಸ್, ಜನರಲ್ಲಿ ಮೂಡಿಸಿದೆ ಹೊಸ ಆಶಾಭಾವನೆ
ಅಲ್ಲದೆ ಜಿಲ್ಲೆಯ ಉಸ್ತುವಾರಿಯನ್ನು ಮಾಜಿ ಶಾಸಕ ವರ್ತೂರು ಪ್ರಕಾಶ್ ಹಾಗೂ ಸಂಸದ ಮುನಿಸ್ವಾಮಿ ಅವರಿಗೆ ಕೊಟ್ಟಿದ್ದೇನೆ ಎಂದು ದುರಹಂಕಾರದಿಂದ ಸಚಿವರು ಹೇಳಿಕೆ ನೀಡುತ್ತಾರೆ. ಹಾಗಾಗಿ ನಿಷ್ಪ್ರಯೋಜಕ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸಚಿವ ಮುನಿರತ್ನ ಅವರು ಜಿಲ್ಲಾ ಪಂಚಾಯತಿಯಲ್ಲಿ ಒಂದೇ ಒಂದು ಕೆಡಿಪಿ ಸಭೆ ಮಾಡಿಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಇವರಿಗೆ ಆಸಕ್ತಿಯೇ ಇಲ್ಲ, ಜನರ ಸಂಕಷ್ಟ ಹೇಗೆ ಗೊತ್ತಾಗುತ್ತದೆ, ಸಚಿವರು ಅಧಿಕಾರಿಗಳ ಜೊತೆ ಸಭೆ ಮಾಡೋಕೆ ದಿನಾಂಕ ನಿಗದಿ ಮಾಡ್ತಿಲ್ಲ ಎಂದು ಜಿಲ್ಲಾಧಿಕಾರಿಗಳೂ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.