
ಬೆಂಗಳೂರು(ಏ.20): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಜನತೆಗೆ ಚೊಂಬು ಸಿಗುತ್ತದೆ ಎಂಬ ಜಾಹೀರಾತನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಶುಕ್ರವಾರ ಕಾಂಗ್ರೆಸ್ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿಯವರು ರಾಜ್ಯದ ಜನರಿಗೆ ಕೊಟ್ಟಿರುವುದು ಬರೀ ಚೊಂಬಲ್ಲ, ಖಾಲಿ ಚೊಂಬು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರ ಅಕೌಂಟ್‌ಗೆ 15 ಸಾವಿರ ಹಾಕ್ತೀವಿ ಎಂದ್ರು, ಹಾಕಿದ್ರಾ?. ವರ್ಷಕ್ಕೆ 2 ಲಕ್ಷ ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದ್ರು, ಮಾಡಿದ್ರಾ?. ರೈತರ ಆದಾಯವನ್ನು ದುಪ್ಪಟ್ಟು ಮಾಡ್ತೀವಿ ಎಂದ್ರು, ಮಾಡಿದ್ರಾ?. ಜನರಿಗೆ ಅಚ್ಛೇ ದಿನ್ ಬಂತಾ? ಎಂದು ಪ್ರಶ್ನಿಸಿದರು.
ಹಾಸನದಲ್ಲಿ ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ತಾರೆ: ಸಿಎಂ
ಇದೇ ವೇಳೆ, ಸಕಲೇಶಪುರದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿಯವರು ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿರುವುದು ಗ್ಯಾರಂಟಿ. ಜನಸಾಮಾನ್ಯರ ಅಕೌಂಟ್‌ಗೆ 15 ಸಾವಿರ ಹಾಕ್ತೀವಿ ಎಂದ್ರು, ಹಾಕಿಲ್ಲ, ವರ್ಷಕ್ಕೆ 2 ಲಕ್ಷ ಕೋಟಿ ಉದ್ಯೋಗ ಕೊಡ್ತೀವಿ ಎಂದ್ರು, ಕೊಟ್ಟಿಲ್ಲ. ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರಾ, ಉಳಿಸಿಕೊಂಡಿಲ್ಲ, ಅದಕ್ಕೇ ಹೇಳಿದ್ದು, ಅವರು ಜನರಿಗೆ ಚೊಂಬು ಕೊಡ್ತಿದ್ದಾರೆ ಎಂದರು.
ಇದೇ ವೇಳೆ, ಚಿತ್ರದುರ್ಗದಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕರ್ನಾಟಕಕ್ಕೆ ಮೋದಿ ಸರ್ಕಾರ ಚೊಂಬು ನೀಡಿದೆ. ರಾಜ್ಯದ 27 ಮಂದಿ ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಪ್ರಶ್ನಿಸದೆ ಚೊಂಬು ನೀಡಿದ್ದಾರೆ. ಮೋದಿಯದು ಚೊಂಬು ಮಾಡೆಲ್. ಹೀಗಾಗಿ, ಜನರು ಚೊಂಬು ಮಾಡೆಲ್ ಬೇಕೋ, ಕಾಂಗ್ರೆಸ್‌ನ ಅಭಿವೃದ್ಧಿ ಮಾಡೆಲ್ ಬೇಕೋ ಎಂಬುದನ್ನು ನಿರ್ಧರಿಸಲಿ ಎಂದರು.
ಸಿದ್ದರಾಮಯ್ಯನವರೇ ರಾಜ್ಯವನ್ನು ಯಾರಿಗೆ ಅಡವಿಡುತ್ತಿದ್ದೀರಿ: ಎಚ್.ವಿಶ್ವನಾಥ್ ಪ್ರಶ್ನೆ
ಅಚ್ಛೇ ದಿನ್ ಬಂತಾ?
ಬಿಜೆಪಿಯವರು ರಾಜ್ಯದ ಜನರಿಗೆ ಕೊಟ್ಟಿರುವುದು ಬರೀ ಚೊಂಬಲ್ಲ, ಖಾಲಿ ಚೊಂಬು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರ ಅಕೌಂಟ್‌ಗೆ 15 ಸಾವಿರ ಹಾಕ್ತೀವಿ ಎಂದ್ರು, ಹಾಕಿದ್ರಾ?. ವರ್ಷಕ್ಕೆ 2 ಲಕ್ಷ ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದ್ರು, ಮಾಡಿದ್ರಾ?. ರೈತರ ಆದಾಯವನ್ನು ದುಪ್ಪಟ್ಟು ಮಾಡ್ತೀವಿ ಎಂದ್ರು, ಮಾಡಿದ್ರಾ?. ಜನರಿಗೆ ಅಚ್ಛೇ ದಿನ್ ಬಂತಾ? ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಟ್ಟ ಮಾತು ಉಳಿಸಿಕೊಂಡಿಲ್ಲ
ಬಿಜೆಪಿಯವರು ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿರುವುದು ಗ್ಯಾರಂಟಿ. ಜನಸಾಮಾನ್ಯರ ಅಕೌಂಟ್‌ಗೆ 15 ಸಾವಿರ ಹಾಕ್ತೀವಿ ಎಂದ್ರು, ಹಾಕಿಲ್ಲ, ವರ್ಷಕ್ಕೆ 2 ಲಕ್ಷ ಕೋಟಿ ಉದ್ಯೋಗ ಕೊಡ್ತೀವಿ ಎಂದ್ರು, ಕೊಟ್ಟಿಲ್ಲ. ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರಾ, ಉಳಿಸಿಕೊಂಡಿಲ್ಲ, ಅದಕ್ಕೇ ಹೇಳಿದ್ದು, ಅವರು ಜನರಿಗೆ ಚೊಂಬು ಕೊಡ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.