
ಮೈಸೂರು(ಜು.30): ಬಿಜೆಪಿ ವಿರುದ್ಧ ಹರಿಹಾಯ್ದಿರುವ ಸಿಎಂ, 'ಬಿಜೆಪಿ ಬ್ಲ್ಯಾಕ್ ಮೇಲ್ ತಂತ್ರ ಮಾಡುತ್ತಿದೆ. ಇಲ್ಲದ ಹಗರಣವನ್ನು ಸೃಷ್ಟಿಸಿ ಕರ್ನಾಟಕವನ್ನು ಭ್ರಷ್ಟ ರಾಜ್ಯ ಎಂದು ಬಿಂಬಿಸುವ ಯತ್ನ ಮಾಡುತ್ತಿದೆ. ಸಂಸತ್‌ನಲ್ಲಿ ಕರ್ನಾಟಕಕ್ಕೆ ಭ್ರಷ್ಟಾಚಾರದ ಹಣೆ ಪಟ್ಟಿ ಕಟ್ಟುವ ಯತ್ನ ಮಾಡುತ್ತಿದೆ. ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಸಂಪೂರ್ಣ ಹೋಗಿದೆ ಎಂದು ಹೇಳಲ್ಲ ಆದರೆ, ಕಡಿಮೆಯಾಗಿದೆ' ಎಂದು ಹೇಳಬಲ್ಲೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯವರು ಹಿಟ್ಲರ್ ವಂಶಸ್ಥರು, ಮನೆ ಮುರುಕರು, ದಲಿತ ವಿರೋಧಿಗಳು ಎಸ್ಸಿಎಸ್ ಪಿ, ಟಿಎಎಸ್‌ಪಿ ಕಾಯಿದೆ ಇರುವುದು ಕರ್ನಾಟಕದಲ್ಲಿ ಮಾತ್ರ, ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲೂ ಈ ಯೋಜನೆಯಿಲ್ಲ. ಅಂದ ಮೇಲೆ ದಲಿತರಿಗೆ ಮಾತನಾಡುವ ಅಧಿಕಾರ ಬಿಜೆಪಿಯವರಿಗೆ ಇದೆಯಾ' ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ಒಳಗೂ ರಾಜಕೀಯ!
ಇದೇ ವೇಳೆ, ನಿರ್ಮಲಾ ಸೀತಾರಾಮನ್ ವಿರುದ್ಧ ಹರಿಹಾಯ್ದ ಸಿಎಂ, 'ನಾವು ಉದ್ದೇಶ ಪೂರ್ವಕವಾಗಿಯೇ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ್ದೇವೆ. ನಾನು ಮಾತ್ರವಲ್ಲ, ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಸಿಎಂಗಳೂ ಬಹಿಷ್ಕರಿಸಿದ್ದಾರೆ. ರಾಜ್ಯಕ್ಕೆ ನ್ಯಾಯವೇ ಸಿಗದಿದ್ದ ಮೇಲೆ ಸಭೆಗೆ ಹೋಗಿ ಏನು ಪ್ರಯೋಜನ, ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಪ್ರತಿ ಬಾರಿಯೂ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಾರೆ.
ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ಅವರು ಕರ್ನಾಟಕದ ಋಣ ತೀರಿಸಿದ್ದಾರಾ?. ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವೇ ಆಗಿಲ್ಲ ಎನ್ನುತ್ತಿದ್ದಾರೆ. ಇವರಿಗೆ ರಾಜ್ಯದ ಬಗ್ಗೆ ಕಾಳಜಿ ಇದೆಯಾ?' ಎಂದು ಪ್ರಶ್ನಿಸಿದರು.
ರಾಜ್ಯದಿಂದ ಕ್ಕೆಗಾರಿಕೆಗಳು ವಾಪಸ್ ಹೋಗುತ್ತಿವೆ ಎಂಬ ನಿರ್ಮಲಾ ಹೇಳಿಕೆಗೆ ಪ್ರತಿಕ್ರಿಯಿಸಿ ರಾಜ್ಯದಿಂದ ಅಲ್ಲ, ದೇಶದಿಂದಲೇ ಕೈಗಾರಿಕೆಗಳು ವಾಪಸ್ ಹೋಗುತ್ತಿವೆ. ನಮ್ಮಲ್ಲಿ ಕೈ ಗಾರಿಕೆಗಳು ಎಷ್ಟು ಬೆಳವ ತೆಗೆಯಾಗಿದೆ ಎಂಬುದನ್ನು ವಿವರವಾಗಿ ಹೇಳುತ್ತೇ ನೆ. ಎಂ.ಬಿ.ಪಾಟೀಲ್ ಹಾಗೂ ಪ್ರಿಯಾಂಕ್ ಖರ್ಗೆಗೆ ಪಟ್ಟಿ ಕೊಡುವಂತೆ ಹೇಳುತ್ತೇನೆ" ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.