ಜೆಡಿಎಸ್‌ನ ಭದ್ರಕೋಟೆ ಹಾಸನದಲ್ಲಿ ನಿಂತು ದೇವೇಗೌಡರನ್ನೇ ಕೇಂದ್ರವಾಗಿಸಿ ವಾಕ್ ಪ್ರಹಾರ ಮಾಡಿದ ಸಿಎಂ, ದೇವೇಗೌಡ ಅವರು ನನ್ನನ್ನು ಬೆಳೆಸಿದೆ ಎನ್ನುತ್ತಾರೆ. ನನ್ನನ್ನು ಬಿಡಿ ಅವರು ಖುದ್ದು ಒಕ್ಕಲಿಗ ನಾಯಕರನ್ನೇ ಬೆಳೆಸಲಿಲ್ಲ ಎಂದ ಸಿದ್ದರಾಮಯ್ಯ
ಹಾಸನ(ಡಿ.06): ಸಿದ್ದರಾಮಯ್ಯನನ್ನು ಡಿಸಿಎಂ ಮಾಡಿ ರಾಜಕೀಯವಾಗಿ ಬೆಳೆಸಿದೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳುತ್ತಾ ಬಂದಿದ್ದಾರೆ. ಆದರೆ, ನಾನು ಹಾಗೂ ಜಾಲಪ್ಪ ಬೆನ್ನಿಗೆ ನಿಲ್ಲದಿದ್ದರೆ ರಾಮಕೃಷ್ಣ ಹೆಗಡೆ ಅವರ ಪೈಪೋಟಿ ಎದುರಿಸಿ ದೇವೇಗೌಡ ಅವರು ಸಿಎಂ ಆಗುತ್ತಿರಲಿಲ್ಲ. ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೇ ನಾವು! ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಾಲದ ಗುರು ಎಂದೇ ಬಿಂಬಿತರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ. ದೇವೇಗೌಡ ಅವರೇ ರಾಜಕೀಯ ಕಾಲ ಮುಗಿಯಿತು ಎಂದು ಅಬ್ಬರಿಸಿದ್ದಾರೆ.
ಕೆಪಿಸಿಸಿ ಮತ್ತು ಸ್ವಾಭಿಮಾನಿ ಸಂಘಟನೆ ಜಂಟಿಯಾಗಿ ಹಾಸನದಲ್ಲಿ ಆಯೋಜಿಸಿದ್ದ ಜನ ಕಲ್ಯಾಣ ಸಮಾವೇಶ ಅಕ್ಷರಶಃ ಸಿದ್ದರಾಮೋತ್ಸವವಾಗಿ ಪರಿವರ್ತಿತವಾದರೆ, ಈ ಉತ್ಸವದಲ್ಲಿ ಸಿದ್ದರಾಮಯ್ಯ ಎಚ್.ಡಿ.ದೇವೇಗೌಡ, ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿಕಾರ ಹಂಚಿಕೆ: ಏನೋ ಮಾತಾಡಿದ್ದೇವೆ, ಅದನ್ನು ಬಹಿರಂಗವಾಗಿ ಹೇಳಲಾಗುತ್ತಾ?, ಡಿಕೆಶಿ
ಜೆಡಿಎಸ್‌ನ ಭದ್ರಕೋಟೆ ಹಾಸನದಲ್ಲಿ ನಿಂತು ದೇವೇಗೌಡರನ್ನೇ ಕೇಂದ್ರವಾಗಿಸಿ ವಾಕ್ ಪ್ರಹಾರ ಮಾಡಿದ ಸಿಎಂ, ದೇವೇಗೌಡ ಅವರು ನನ್ನನ್ನು ಬೆಳೆಸಿದೆ ಎನ್ನುತ್ತಾರೆ. ನನ್ನನ್ನು ಬಿಡಿ ಅವರು ಖುದ್ದು ಒಕ್ಕಲಿಗ ನಾಯಕರನ್ನೇ ಬೆಳೆಸಲಿಲ್ಲ ಎಂದರು.
ದೇವೇಗೌಡ, ಕುಮಾರಸ್ವಾಮಿ ಯಾವ ಒಕ್ಕಲಿಗ ನಾಯಕರನ್ನೂ ಬೆಳೆಸಲಿಲ್ಲ. ಬಚ್ಚೇಗೌಡರು, ವೈ.ಕೆ. ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯ ಸ್ವಾಮಿ ಸೇರಿ ತಮ್ಮೊಂದಿಗೆ ಇದ್ದ ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದರು. ಇದಕ್ಕಾಗಿ ಒಕ್ಕಲಿಗ ನಾಯಕರಾದ ದಿ.ಎಂ. ಟಿ.ಕೃಷ್ಣಪ್ಪ, 'ದೇವೇಗೌಡ ಅವರ ಅಂತ್ಯ ಅವರೇ ನೋಡುತ್ತಾರೆ' ಎಂದಿದ್ದರು. ಈಗ ನಿಜವಾಗುತ್ತಿದೆ. ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದ್ದರ ಫಲ ದೇವೇಗೌಡರು ನೋಡುವಂತಾಗಿದೆ ಎಂದರು.
ಉಪ ಚುನಾವಣೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನನ್ನ ಗರ್ವಭಂಗ ಮಾಡುತ್ತೇನೆ, ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುತ್ತೇನೆ ಎಂದಿದ್ದರು. ನನಗಿಂತ 15 ವರ್ಷ ದೊಡ್ಡವರಾದ ಅವರು ವಯಸ್ಸಿಗೆ ತಕ್ಕಂತೆ ಮಾತನಾಡಬೇಕಿತ್ತು. ನಾನೆಂದೂ ಅಹಂಕಾರಪಟ್ಟಿಲ್ಲ. ಹೀಗಾಗಿ ನನ್ನ ಗರ್ವಭಂಗ ಆಗಲು ಜನರು ಬಿಡುವುದಿಲ್ಲ ಎಂದರು.
News Hour: ದಳಕೋಟೆಯಲ್ಲಿ ಕಾಂಗ್ರೆಸ್ ಘರ್ಜನೆ ನಡುವೆ ಮಧ್ಯೆ ‘ಒಪ್ಪಂದ’ದ ಫೈಟ್
ಜಾತ್ಯತೀತ ಜನತಾದಳ ಯಾವಾಗ ಕೋಮುವಾದಿ ಪಕ್ಷದೊಂದಿಗೆ ಸೇರಿಕೊಂಡು ರಾಜಕೀಯ ಆರಂಭಿಸಿತೋ ಆಗಲೇ ಅದರ ಹೆಸರಿನಲ್ಲಿರುವ ಜಾತ್ಯತೀತ ಪದ ಅರ್ಥ ಕಳೆದುಕೊಂಡಿದೆ. ದೇವೇಗೌಡ ಅವರೇ ನಿಮ್ಮ ರಾಜಕೀಯ ಕಾಲ ಮುಗಿದಿದೆ. ಪಾಪ... ನನ್ನ ಉಸಿರು ಇರುವವರೆಗೂ ರಾಜಕೀಯ ಮಾಡುತ್ತೇನೆ ಎಂದು ದೇವೇಗೌಡ ಹೇಳಿದ್ದಾರೆ. ಮಾಡಲಿ, ಅವರಿಗೆ ದೇವರು ಉತ್ತಮ ಆರೋಗ್ಯ ನೀಡಲಿ. ಆದರೆ, ಅವರ ರಾಜಕೀಯ ಕಾಲ ಮುಗಿದಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮತದಾರ ಪ್ರಭುಗಳೇ ನನ್ನ ದೇವರು: ಸಿದ್ದರಾಮಯ್ಯ
ಚಲನಚಿತ್ರ ನಟ ಡಾ.ರಾಜ್ ಕುಮಾರ್ ಅವರು ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದರು. ಹಾಗೆಯೇ ನನಗೆ ಮತದಾರ ಪ್ರಭುಗಳೇ ದೇವರು. ಆ ದೇವರುಗಳು ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವಂತೆ ಮಾಡಿದರು. ಚನ್ನಪಟ್ಟಣದಲ್ಲಿ ಹಾಸನದ ಮಹಾನ್ ನಾಯಕರ ಮೊಮ್ಮಗ ನಿಖಿಲ್ ಮತ್ತು ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಗ ಭರತ್‌ರನ್ನೇ ಮತದಾರ ದೇವರುಗಳು ಸೋಲಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದರು. ಮತದಾರರಿಗೆ, ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.