ಯಡಿಯೂರಪ್ಪ ಭಾರೀ ಪ್ರಮಾಣದ ಹಣ ಕೊಟ್ಟು ಮುಖ್ಯಮಂತ್ರಿಯಾಗಿದ್ದಾರೆ ಎಂದು ಅವರ ಪಕ್ಷದ ಯತ್ನಾಳ್ ಹೇಳಿದ್ದಾರೆ. ವಿಜಯೇಂದ್ರ ಸಹ ದುಡ್ಡು ಕೊಟ್ಟು ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಯತ್ನಾಳ್ ಹೇಳುತ್ತಿದ್ದಾರೆ. ಹಾಗಾದರೆ ಈ ದುಡ್ಡು ಎಲ್ಲಿಂದ ಬಂತು? ಯತ್ನಾಳ್ ಹೇಳಿದ್ದು ಸುಳ್ಳಾ ಎಂದು ಸಿಎಂ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಂಡೂರು(ನ.10): ಬಿಜೆಪಿ ಮಾಡುವ ಸುಳ್ಳು ಆರೋಪಗಳಿಗೆ ನಾನು ರಾಜಿನಾಮೆ ನೀಡಬೇಕಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ತಾಲೂಕಿನ ತೋರಣಗಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರ ಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನು ಹತ್ತು ಹದಿನೈದು ದಿನಗಳಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂದಿರುವ ಯಡಿಯೂರಪ್ಪ ವಿರುದ್ಧ ಹರಿಹಾಯ್ದರಲ್ಲದೆ, ಬಿ.ಎಸ್. ಯಡಿಯೂರಪ್ಪ ಶಾಸ್ತ್ರ ಹೇಳುತ್ತಾರಾ? ಎಂದು ಕೇಳಿದರು.
ಯಡಿಯೂರಪ್ಪ ಭಾರೀ ಪ್ರಮಾಣದ ಹಣ ಕೊಟ್ಟು ಮುಖ್ಯಮಂತ್ರಿಯಾಗಿದ್ದಾರೆ ಎಂದು ಅವರ ಪಕ್ಷದ ಯತ್ನಾಳ್ ಹೇಳಿದ್ದಾರೆ. ವಿಜಯೇಂದ್ರ ಸಹ ದುಡ್ಡು ಕೊಟ್ಟು ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಯತ್ನಾಳ್ ಹೇಳುತ್ತಿದ್ದಾರೆ. ಹಾಗಾದರೆ ಈ ದುಡ್ಡು ಎಲ್ಲಿಂದ ಬಂತು? ಯತ್ನಾಳ್ ಹೇಳಿದ್ದು ಸುಳ್ಳಾ ಎಂದು ಸಿಎಂ ಪ್ರಶ್ನಿಸಿದರು.
ಸಂಡೂರು ಗೆಲುವಿನ ಮೇಲೆ ನಿಂತಿದ್ಯಾ ಸಿದ್ದು ಸಿಂಹಾಸನ ಭವಿಷ್ಯ: ಚನ್ನಪಟ್ಟಣ ಗೆದ್ದರೆ ಡಿಕೆಶಿ ಸಿಎಂ ಆಗ್ತಾರಾ?
ಎಸ್ಪಿ ನಿಗಮದಲ್ಲಿ ಅವ್ಯಹಾರ ನಡೆದಿಲ್ಲ ಎಂದು ಹೇಳುತ್ತಿಲ್ಲ. ಎಸ್ ಐಟಿಯಿಂದ ಈಗಾಗಲೇ ಹಣ ರಿಕವರಿಯಾಗಿದೆ. ಮುಡಾ ಪ್ರಕರಣ ಸುಳ್ಳು. ವಕ್ಸ್ ಬೋರ್ಡ್ ವಿಚಾರದಲ್ಲಿ ಬಿಜೆಪಿ ಕಾಲದಲ್ಲೂ ನೋಟಿಸ್ ನೀಡಿದ್ದಾರೆ. ಬಿಜೆಪಿಯವರು ಬರೀ ಸುಳ್ಳು ಹೇಳುವುದನ್ನು ಬಿಟ್ಟು ಬೇರೇನು ಮಾಡುವುದಿಲ್ಲ ಎಂದು ಟೀಕಿಸಿದರು.
ವಿಜಯೇಂದ್ರ ರಾಜಕೀಯದಲ್ಲಿ ಈಗ ಕಣ್ಣು ಬಿಡುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಜನಾರ್ದನ ರೆಡ್ಡಿ ಒಬ್ಬ ಕ್ರಿಮಿನಲ್, ಹೀಗಾಗಿ ರೆಡ್ಡಿ ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಸಿಎಂ ಹೇಳಿದರು.