ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಸಾಹೇಬ್ರಿಗೆ ಕರೆದಿಲ್ಲ ಎಂದರೆ ಬೇಡ. ನಾವು ಎಲ್ಲಿರುತ್ತೇವೆಯೋ, ಅಲ್ಲಿಂದಲೇ ಓ ರಾಮ ಕಾಪಾಡಪ್ಪ ಅಂತ ಕೈ ಮುಗಿತೀವಿ, ಅದರಲ್ಲಿ ತಪ್ಪೇನಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಎಂದು ಹೇಳಿದರು.
ಶಿವಮೊಗ್ಗ (ಜ.04): ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಸಾಹೇಬ್ರಿಗೆ ಕರೆದಿಲ್ಲ ಎಂದರೆ ಬೇಡ. ನಾವು ಎಲ್ಲಿರುತ್ತೇವೆಯೋ, ಅಲ್ಲಿಂದಲೇ ಓ ರಾಮ ಕಾಪಾಡಪ್ಪ ಅಂತ ಕೈ ಮುಗಿತೀವಿ, ಅದರಲ್ಲಿ ತಪ್ಪೇನಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಾವ್ಯಾರು ವಿರೋಧ ಮಾಡಿಲ್ಲ. ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವುದು ಸಂತೋಷ. ನಾವು ಕೂಡ ರಾಮನ ಭಕ್ತರೇ. ಚುನಾವಣೆ ಸಮಯದಲ್ಲಿ ಮನೆ ಮನೆಗೆ ಮಂತ್ರಾಕ್ಷತೆ ಕೊಡುತ್ತಾರೆ, ಕೊಡಲಿ. ರಾಮ ಮಂದಿರ ನಿರ್ಮಾಣ ವಿಚಾರದಿಂದ ಚುನಾವಣೆಯಲ್ಲಿ ಯಾವ ವಾತಾವರಣ ಬದಲಾಗುವುದಿಲ್ಲ ಎಂದರು.
ಕರಸೇವಕರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಬಿಡಲ್ಲ: ಕೆ.ಎಸ್.ಈಶ್ವರಪ್ಪ
ನಿಗಮ ಮಂಡಳಿ ಕುರಿತು ಪ್ರತಿಕ್ರಿಯಿಸಿದ ಅವರು, ನಿಗಮ ಮಂಡಳಿಗಳಿಗೆ ಶಾಸಕರು, ಮುಖಂಡರು, ಕಾರ್ಯಕರ್ತರಿಗೆ ಕೊಡುವ ಬಗ್ಗೆ ತೀರ್ಮಾನ ಆಗಿದೆ. ಕಾರ್ಯಕರ್ತರು ಮುಖಂಡರು ಶಾಸಕರು ಎಲ್ಲರಿಗೂ ಕೊಡಬೇಕು. ನಾನು ನನಗೆ ನಿಗಮ ಮಂಡಳಿ ಕೊಡಿ ಅಂತಾ ಕೇಳಿಲ್ಲ. ಹಿರಿಯ ಶಾಸಕರಿಗೆ ಕೊಡಿ ಎಂದು ಕೇಳಿದ್ದೇವೆ ಎಂದರು.
ಲೋಕಸಭೆ ಸ್ಪರ್ಧೆ ವಿಚಾರ: ಲೋಕಸಭೆ ಸ್ಥಾನಕ್ಕೆ ಸ್ಪರ್ಧಿಸಲು ಹಲವರು ಆಕಾಂಕ್ಷಿಗಳು ಇದ್ದಾರೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಸಂಗಮೇಶ್ವರ ಹಾಗೂ ಬೇಳೂರು ಗೋಪಾಲಕೃಷ್ಣ ಮೂವರು ಕುಳಿತು ಚರ್ಚಿಸುವಂತೆ ಹೇಳಿದ್ದಾರೆ. ಮೂರೂ ಜನ ಕುಳಿತು ಚರ್ಚೆ ಮಾಡಿ, ಪಟ್ಟಿ ಕೊಡಿ ಅಂದಿದ್ದಾರೆ. ನಾನು ಕೂಡ ಆಕಾಂಕ್ಷಿಯೇ, ಸರ್ವೇ ಮಾಡಿ, ಕೊಡ್ತೇವೆ ಅಂತ ಹೈಕಮಾಂಡ್ ಹೇಳಿದೆ ಎಂದರು.
ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ನೆಲದ ಮೇಲೆ ಕೂರಿಸುವಂತಿಲ್ಲ: ಸಚಿವ ಮಧು ಬಂಗಾರಪ್ಪ
ಹುಬ್ಬಳ್ಳಿ ಕರಸೇವಕನ ಬಂಧನ ವಿಚಾರವಾಗಿ ಬಿಜೆಪಿ ವಿಪಕ್ಷವಾಗಿ ಪ್ರತಿಭಟನೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ಅವರು ಎಲ್ಲದಕ್ಕೂ ಪ್ರತಿಭಟನೆ ಮಾಡ್ತಾರೆ. ಮಧು ಬಂಗಾರಪ್ಪ ಚೆಕ್ ಬೌನ್ಸ್ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ನಾನು ಏನು ಮಾತನಾಡಲ್ಲ. ₹40 ಸಾವಿರ ಕೋಟಿ ಹಗರಣ ಆಗಿದೆ ಅಂತಾ ಯತ್ನಾಳ್ ಹೇಳಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಿ, ಪಿಎಸ್‌ಐ ಹಗರಣದಲ್ಲಿ ವಿಜಯೇಂದ್ರ ಹೆಸರು ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಲಿ
- ಗೋಪಾಲಕೃಷ್ಣ ಬೇಳೂರು, ಶಾಸಕ, ಸಾಗರ ಕ್ಷೇತ್ರ