ಕರಸೇವಕರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಬಿಡಲ್ಲ: ಕೆ.ಎಸ್.ಈಶ್ವರಪ್ಪ

Published : Jan 04, 2024, 12:06 PM IST
ಕರಸೇವಕರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಬಿಡಲ್ಲ: ಕೆ.ಎಸ್.ಈಶ್ವರಪ್ಪ

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ವೇಳೆಯೇ 3 ದಶಕದ ಹಿಂದಿನ ಅನೇಕ ಪ್ರಕರಣಗಳ ಮರುತನಿಖೆ ಕೈಗೊಳ್ಳುವುದಾಗಿ ಹೇಳಿ ಕರಸೇವಕರು, ದೇಶಭಕ್ತರನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ವಿನಾಕಾರಣ ಕೆಣಕುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ (ಜ.04): ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ವೇಳೆಯೇ 3 ದಶಕದ ಹಿಂದಿನ ಅನೇಕ ಪ್ರಕರಣಗಳ ಮರುತನಿಖೆ ಕೈಗೊಳ್ಳುವುದಾಗಿ ಹೇಳಿ ಕರಸೇವಕರು, ದೇಶಭಕ್ತರನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ವಿನಾಕಾರಣ ಕೆಣಕುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಹೊರ ವಲಯದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿಯ ಕರ ಸೇವಕರಿಗೆ ತೊಂದರೆ ಕೊಟ್ಟರೆ ಬಿಡುವ ಪ್ರಶ್ನೆಯೇ ಇಲ್ಲ. ಯಾರನ್ನಾದರೂ ಮುಟ್ಟಲಿ ನೋಡೋಣ. ರಾಜ್ಯದ ಕಾಂಗ್ರೆಸ್ ಸರ್ಕಾರ ಭಸ್ಮ ಆಗುವವರೆಗೂ ಕರ ಸೇವಕರು ಬಿಡಲ್ಲ. ಹುಬ್ಬಳ್ಳಿಯಲ್ಲಿ ಅದೊಂದೇ ಫೈಲ್ ಯಾಕೆ ಓಪನ್ ಮಾಡಿದರು? ಯಾರು ಯಾರೆಲ್ಲಾ ಹೋರಾಟದಲ್ಲಿ ಭಾಗಿಯಾಗಿದ್ದರು ಎಲ್ಲರನ್ನೂ ಬಂಧಿಸಿ. ನಮ್ಮನ್ನೆಲ್ಲಾ ಬಂಧಿಸಿ ನೋಡೋಣ ಎಂದು ಸವಾಲು ಹಾಕಿದರು.

ಕಾಶಿಯಲ್ಲೂ ಮಸೀದಿ ಒಡೆಯುವೆವು, ಮಥುರದಲ್ಲಿ ಕೃಷ್ಣ ಮಂದಿರ ಕಟ್ಟುತ್ತೇವೆ: ಈಶ್ವರಪ್ಪ

ಅಭಿವೃದ್ಧಿ ಮೇಲೆ ಚುನಾವಣೆಗೆ ಹೋಗೋಣವೆಂದರೆ ಅದಕ್ಕೆ ನಾವು ಸಿದ್ಧ. ಹಿಂದುತ್ವದ ಮೇಲೆ ಚುನಾವಣೆಗೆ ಹೋಗೋಣವೆಂದರೆ ಅದಕ್ಕೂ ನಾವು ತಯಾರಿದ್ದೇವೆ. ಸುಮ್ಮನೆ ಇದ್ದಂತಹ ಹುಬ್ಬಳ್ಳಿಗೆ ಬೆಂಕಿ ಹಂಚಿದ್ದೀರಿ. ಹಿಂದುತ್ವವು ಜೀವನ ಪದ್ಧತಿಯಾಗಿದೆ. ನನ್ನ ಪೂಜಾ ಪದ್ಧತಿಗೆ ಯಾರೇ ಅಡ್ಡಿ ಬಂದರೂ ನಾನು ಬಿಡುವುದಿಲ್ಲ. ನಾವು ಪೂಜೆ ಮಾಡಿದರೆ ಇವರಿಗ್ಯಾಕೆ ಸಿಟ್ಟು? ಇವರೆಲ್ಲಾ ಏನು ಬಾಬರ್‌ನ ವಂಶಸ್ಥರಾ? ನೀವೆಲ್ಲಾ ಕೋಮು ಗಲಭೆ ಮಾಡಿ, ಅದರ ಮೇಲೆ ಈ ಬಾರಿಯ ಚುನಾವಣೆಗೆ ರೆಡಿ ಅಂದರೆ ಅದಕ್ಕೂ ನಾವು ರೆಡಿ ಎಂದು ಈಶ್ವರಪ್ಪ ಮಾತಿನ ಚಾಟಿ ಬೀಸಿದರು.

ಬಿಜೆಪಿ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಜಿ ಮೇಯರ್‌ ಎಚ್‌.ಎನ್‌.ಗುರುನಾಥ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಾಲಿಕೆ ಮಾಜಿ ಸದಸ್ಯರಾದ ಎಚ್‌.ಸಿ.ಜಯಮ್ಮ, ಶಿವನಗೌಡ ಪಾಟೀಲ್, ಶಂಕರ ಗೌಡ ಬಿರಾದಾರ, ಎಚ್.ಎನ್.ಜಗದೀಶ, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಅಧ್ಯಕ್ಷ ಹಾಗೂ ಇತರರಿದ್ದರು.

ಬಿಜೆಪಿ ರಾಮ ಎನ್ನೋರಿಗೆ ಕೇಂದ್ರ ನಾಯಕರು ಆಹ್ವಾನ ಕೊಟ್ಟಿಲ್ಲ: ಕೆ.ಎಸ್‌.ಈಶ್ವರಪ್ಪ

ರಾಜ್ಯದಲ್ಲಿ ಸುಮಾರು 600ಕ್ಕೂ ಹೆಚ್ಚು ಹಳೆಯ ಪ್ರಕರಣಗಳಿದ್ದು, ಈಗ 3 ದಶಕಗಳ ಹಿಂದಿನ ಕರ ಸೇವಕರ ಪ್ರಕರಣಗಳೇ ತನಿಖೆಗೆ ಬೇಕಾಗಿತ್ತಾ? ಹುಬ್ಬಳ್ಳಿಯ ಪ್ರಕರಣವೇ ಕೆದಕಬೇಕಿತ್ತಾ? ಬೇರೆ ಯಾವುದೇ ಪ್ರಕರಣಗಳು ಕಾಂಗ್ರೆಸ್ ಸರ್ಕಾರಕ್ಕೆ ಇರಲಿಲ್ಲವೇ? ವಿನಾಕಾರಣ ಕರ ಸೇವಕರು, ದೇಶ ಭಕ್ತರ ಕೆಣಕಲು ಹೊರಟ ಗೃಹ ಸಚಿವ, ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ.
-ಕೆ.ಎಸ್.ಈಶ್ವರಪ್ಪ, ಬಿಜೆಪಿ ಹಿರಿಯ ನಾಯಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್