ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿದೆ: ಸಂಸದ ಗೋವಿಂದ ಕಾರಜೋಳ

By Kannadaprabha News  |  First Published Jul 10, 2024, 9:26 PM IST

ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿದೆ. ಪಕ್ಷದ ಹೈಕಮಾಂಡಿಗೂ ತಮ್ಮದೇ ಶಾಸಕರು, ಮುಖಂಡರನ್ನು ನಿಯಂತ್ರಣದಲ್ಲಿಡಲಾಗುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ ಎಂದು ಸಂಸದ ಗೋವಿಂದ ಕಾರಜೋಳ ಎಂದರು. 


ಬಾಗಲಕೋಟೆ (ಜು.10): ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿದೆ. ಪಕ್ಷದ ಹೈಕಮಾಂಡಿಗೂ ತಮ್ಮದೇ ಶಾಸಕರು, ಮುಖಂಡರನ್ನು ನಿಯಂತ್ರಣದಲ್ಲಿಡಲಾಗುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ ಎಂದು ಸಂಸದ ಗೋವಿಂದ ಕಾರಜೋಳ ಎಂದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ, ಸರ್ಕಾರವಾಗಿ ಉಳಿದಿಲ್ಲ. ಸಿಎಂ ಸಿದ್ದರಾಮಯ್ಯ ಗುಂಪು, ಡಿಸಿಎಂ ಡಿ.ಕೆ.ಶಿವಕುಮಾರ ಗುಂಪು ಹಾಗೂ ದಲಿತರ ಗುಂಪುಗಳಾಗಿ ಹೋಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸರಕಾರದಲ್ಲಿ ಮೂರು ಗುಂಪುಗಳಾಗಿ ಒಡೆದು ಹೋಗಿರುವುದರಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಆಗುತ್ತಿದೆ. ಬರೀ ಜಾತಿ, ಜಾತಿ ಗುಂಪುಗಳಾಗಿವೆ. ಇದು ಆಡಳಿತಕ್ಕೆ ಒಳ್ಳೆಯ ಲಕ್ಷಣವಲ್ಲ. ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆ ಕರೆದು ಯಾರಿಗೆ ಬಹುಮತ ಬರುತ್ತದೋ ಅವರಿಗೆ ಸಿಎಂ ಬಿಟ್ಟು ಕೊಡಬೇಕು. ಇಲ್ಲವೇ ಎಲ್ಲರನ್ನೂ ಹದ್ದುಬಸ್ತಿನಲ್ಲಿಕೊಂಡು ಸರಕಾರ ನಡೆಸಬೇಕು. ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರೆಸಿ, ಇಲ್ಲದಿದ್ದರೆ ಇದೊಂದು ಆಯತಪ್ಪಿದ ಸರಕಾರ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

Latest Videos

undefined

ಹೊಸ ಕೆರೆ ನಿರ್ಮಿಸಿ, ನೀರು ತುಂಬಿಸುವ ಕಾರ್ಯ ರಾಜ್ಯದಲ್ಲಿಯೇ ಪ್ರಥಮ: ಬಸವರಾಜ ರಾಯರಡ್ಡಿ

ಆರ್ಥಿಕ ಪರಿಸ್ಥಿತಿ ಅಧೋಗತಿಗೆ: ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ಹಗಲು ದರೋಡೆ ಕೊಲೆ-ಸುಲಿಗೆಗಳು ಸಾಮಾನ್ಯವಾಗಿವೆ. ಸರಕಾರದ ಆಡಳಿತ ನಿಯಂತ್ರಣ ತಪ್ಪಿದೆ. ರಾಜ್ಯ ಸರಕಾರದಿಂದ ಜನರ ರಕ್ಷಣೆ ಮಾಡಲು ಆಗುತ್ತಿಲ್ಲ. ಜತೆಗೆ ಸರಕಾರದ ಖಜಾನೆ ಲೂಟಿ ತಪ್ಪಿಸಲು ಆಗದಿದ್ದರೆ ಕೂಡಲೇ ರಾಜೀನಾಮೆ ನೀಡಿ ಗೌರವದಿಂದ ಹೊರಗೆ ಬನ್ನಿ ಎಂದರು.

ನಿಷ್ಪಕ್ಷಪಾತ ತನಿಖೆಯಾಗಲಿ: ಸಿಎಂ ಸಿದ್ದರಾಮಯ್ಯ ಮೌಲ್ಯಾಧಾರಿತ ರಾಜಕಾರಣಿ. ರಾಮಕೃಷ್ಣ ಹೆಗಡೆ ಜತೆಗೆ ಬೆಳೆದವರು. ರಾಮಕೃಷ್ಣ ಹೆಗಡೆ ಸಣ್ಣ ಆರೋಪ ಬಂದಾಗ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಸಿದ್ದರಾಮಯ್ಯ ಅವರಿಗೆ ನಾನು ನೆನಪಿಸಿ ಕೊಡುತ್ತೇನೆ. ವಾಲ್ಮೀಕಿ ನಿಗಮದ ₹187 ಕೋಟಿ ಹಣ ಹಗಲು ದರೋಡೆ ಆಗಿದೆ. ಇದೆಲ್ಲ ಗೊತ್ತಿಲ್ಲದಂತೆ ಕಿವುಡ ಹಾಗೂ ಮೂಕರ ರೀತಿ ಸಿಎಂ ಓಡಾಡಬಾರದು. ಈ ಪ್ರಕರಣದ ಬಗ್ಗೆ ಸರಕಾರ ನಿಷ್ಪಕ್ಷಪಾತ ತನಿಖೆಗೆ ಅವಕಾಶ ನೀಡಿ, ಸಿಎಂ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.

ಹಗರಣಗಳ ಸರ್ಕಾರ: ಸಿಎಂ ಸಿದ್ದರಾಮಯ್ಯ ಅವರದು ಹಗರಣಗಳ ಸರಕಾರ. ಮುಡಾ ಹಗರಣ, ಅರ್ಕಾವತಿ ಬಡಾವಣೆ ಹಗರಣ ಸದ್ದು ಮಾಡುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗ ಹಗರಣಗಳೇ ಜಾಸ್ತಿ. ನಗರಾಭಿವೃದ್ಧಿಗೆ ಸಂಬಂಧಿಸಿದ ಹಗರಣಗಳೇ ಹೆಚ್ಚಾಗುತ್ತವೆ. ಸರಕಾರಿ ಭೂಮಿ ಕಬಳಿಕೆ ಮಾಡುವುದು, ಜಮೀನುಗಳ ಡಿನೋಟಿಫಿಕೇಶನ್ ಮಾಡುವುದು ಅರ್ಕಾವತಿ ಹಗರಣದಲ್ಲಿ ₹20 ಸಾವಿರ ಕೋಟಿ ನಷ್ಟ ಮಾಡಿ, ಅನೇಕ ಜನರಿಗೆ ಮಂಜೂರಾತಿ ಕೊಟ್ಟು ಸೈಟ್ ಕೊಡಲಿಲ್ಲ. ಸಾಲ-ಸೋಲ ಮಾಡಿ ಅನೇಕರು ಆತ್ಮಹತ್ಯೆ ಕೂಡಾ ಮಾಡಿಕೊಂಡರು. ಅರ್ಕಾವತಿ ಬಡಾವಣೆ ಸಾಲದ ಸುಳಿಗೆ ಸಿಲುಕಿ ನರಳಿ, ನರಳಿ ಜನ ಸತ್ತರು, ಕೆಲವು ನಿವೃತ್ತಿ ನೌಕರರು ನೊಂದು ಪ್ರಾಣಬಿಟ್ಟರು ಎಂದು ಬೇಸರ ವ್ಯಕ್ತ ಪಡಿಸಿದರು.

ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ: ಎಚ್.ವಿಶ್ವನಾಥ್ ಆಗ್ರಹ

ಪ್ರಾಮಾಣಿಕರಾಗಿದ್ದರೇ ಸಿಎಂ ರಾಜೀನಾಮೆ ನೀಡಲಿ: ಇಂತಹ ಕೆಟ್ಟ ಸರ್ಕಾರ ನಾನು ನೋಡಿರಲಿಲ್ಲ. ಇಂದು ಮುಡಾ ಹಗರಣವನ್ನು ಕಾಂಗ್ರೆಸ್ ಮಂತ್ರಿಗಳು, ಶಾಸಕರು ಮಾನ ಮರ್ಯಾದೆ ಇಲ್ದೇನೆ ಡಿಫೆಂಡ್ ಮಾಡಿಕೊಳ್ಳುತ್ತಿದ್ದಾರೆ. ಅಹಿಂದ ನಾಯಕ, ಬಡವರು, ದೀನ ದಲಿತರ ಬಗ್ಗೆ ಕಳಕಳಿ ಇರುವವ ಅಂತಾ ಸಿದ್ದರಾಮಯ್ಯ ಹೇಳಿಕೊಳ್ಳುವ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೆ ಹಾಗೂ ಸಾಮಾಜಿಕ ಕಳಕಳಿ ಉಳ್ಳವರಾಗಿದ್ದರೆ ಕೂಡಲೇ ರಾಜೀನಾಮೆ ಕೊಡಬೇಕಿತ್ತು. ಆದರೆ, ಕೊಟ್ಟಿಲ್ಲ ಸಂಸದ ಗೋವಿಂದ ಕಾರಜೋಳ ಹೇಳಿದರು.

click me!