ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ನೇರ ಆರೋಪಿಗಳು: ಸಂಸದ ಜಗದೀಶ್‌ ಶೆಟ್ಟರ್

By Kannadaprabha News  |  First Published Aug 4, 2024, 9:59 PM IST

ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ನೇರ ಆರೋಪಿಗಳು. ಮುಖ್ಯಮಂತ್ರಿ ನೈತಿಕತೆ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದ ಜಗದೀಶ್‌ ಶೆಟ್ಟರ್ ಒತ್ತಾಯಿಸಿದರು.


ಗೋಕಾಕ (ಆ.04): ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ನೇರ ಆರೋಪಿಗಳು. ಮುಖ್ಯಮಂತ್ರಿ ನೈತಿಕತೆ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದ ಜಗದೀಶ್‌ ಶೆಟ್ಟರ್ ಒತ್ತಾಯಿಸಿದರು. ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಮುಚ್ಚಿಹಾಕಲು ಕಾಂಗ್ರೆಸ್ ಪಕ್ಷದವರು ಸಮಾವೇಶಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕ್ರಮವನ್ನು ಟೀಕಿಸಿದರು.

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ರಮೇಶ ಹಾಗೂ ಶಾಸಕ ಯತ್ನಾಳ ಅವರು ಪ್ರತ್ಯೇಕ ಪಾದಯಾತ್ರೆ ಕೈಗೊಳ್ಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ, ಈ ಕುರಿತಾಗಿ ಇಬ್ಬರು ಶಾಸಕರು ಹೈಕಮಾಂಡ್ ಒಪ್ಪಿಗೆ ಕೇಳಿದ್ದಾರೆ. ಅವರು ಒಪ್ಪಿಗೆ ಕೊಟ್ಟ ಮೇಲೆ ಮುಂದಿನ ವಿಚಾರ ಎಂದರು. ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವ ಒಪ್ಪಿಕೊಂಡಿಲ್ಲವೆಂಬ ಹೇಳಿಕೆ ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿ ಜಾರಿಕೊಂಡರು.

Tap to resize

Latest Videos

undefined

ಮುಡಾ ಪ್ರಕರಣಕ್ಕೆ ಸಂಬಂಧಿಸಿ ಜಮೀನು ಬದಲಾವಣೆ ಕಾನೂನು ಬಾಹಿರವಾಗಿದೆ. ಈ ಕುರಿತು ತೀಕ್ಷ್ಣ ತನಿಖೆಯಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯಲು ಸಾಧ್ಯವೇ ಇಲ್ಲ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು. ಪಟ್ಟಣದ ಶಿವ ಶಾಂತವೀರ ಸಮುದಾಯ ಭವನದಲ್ಲಿ ಜರುಗಿದ ಬಣಜಿಗರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಸರ್ಕಾರದ ಎಲ್ಲ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆಂದು ಹೇಳುವ ಸಿಎಂ ಸಿದ್ದರಾಮಯ್ಯ, ಕೈ ಕೆಳಗೆ ಐಎಎಸ್‌ ಅಧಿಕಾರಿಗಳಿದ್ದಾರೆ. ಅವರ ಸರ್ಕಾರ ಬಂದು ವರ್ಷ ಕಳೆದರೂ ಹಗರಣಗಳ ಬಗ್ಗೆ ಮಾತನಾಡದವರು, ಇಷ್ಟು ದಿನ ಯಾಕೆ ಸುಮ್ಮನಿದ್ದಾರೆ. ಈ ಕೂಡಲೇ ಬಿಜೆಪಿ ಸರ್ಕಾರದಲ್ಲಿ ಹಗರಣ ನಡೆದಿದ್ದರೆ ಸಿಬಿಐನಿಂದ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ಜೈಲಿಗೆ ಕಳುಹಿದ ಎಚ್‌ಡಿಕೆ ಜೊತೆ ಬಿಎಸ್‌ವೈ ಪಾದಯಾತ್ರೆ: ಸಚಿವ ಚಲುವರಾಯಸ್ವಾಮಿ

ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೇ ದೊಡ್ಡ ಹಗರಣ ಆಗಿವೆ. ಹಿ೦ದಿನ ಅರ್ಕಾವತಿ ಹಗರಣ ಕುರಿತು ಸದನದಲ್ಲಿ ಸಾಕಷ್ಟು ಬಾರಿ ಚರ್ಚಿಸಿದ್ದೇನೆ. ಕೊನೆಗೆ ನ್ಯಾ.ಕೆಂಪಣ್ಣ ಆಯೋಗ ರಚಿಸಿ ಅದು ವರದಿ ನೀಡಿದರೂ ಸದನದಲ್ಲಿ ಚರ್ಚಿಸಲು ಅವಕಾಶ ಕೊಡಲಿಲ್ಲ. ಅಂತಿಮವಾಗಿ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದೆವು. ಆದರೆ ಸಿದ್ದರಾಮಯ್ಯ ತಪ್ಪಿಸಿಕೊಂಡಿದ್ದಾರೆಂದು ಟೀಕಿಸಿದರು. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.100 ಹುದ್ದೆಗಳನ್ನು ಮೀಸಲು ಮಸೂದೆ ಹಿಂಪಡೆದ ಕುರಿತು ತೀವ್ರವಾಗಿ ತರಾಟೆಗೈದ ಶೆಟ್ಟರ್, ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣ ಕುರಿತು ಜನರ ಮನಸ್ಸನ್ನು ಬೇರೆ ಕಡೆಗೆ ಸೆಳೆಯಲು ತಂತ್ರ ಮಾಡುತ್ತಿದ್ದಾರೆ. ಈ ಕಾಯಿದೆ ತಾವು ಕೈಗಾರಿಕೆ ಮಂತ್ರಿ ಇದ್ದಾಗ ಜಾರಿಯಲ್ಲಿದೆ. ಸರ್ಕಾರ ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ ಎಂದರು.

click me!