ಇಬ್ರಾಹಿಂ ನಿವಾಸಕ್ಕೆ ಸಿದ್ದು ಹೋಗ್ಲಿಲ್ಲ, ಬಿರಿಯಾನಿ ತಿನ್ಲಿಲ್ಲ, ರಾಜೀನಾಮೆಗೆ ಮುಹೂರ್ತ ಫಿಕ್ಸ್

By Ramesh B  |  First Published Mar 11, 2022, 10:51 PM IST

* ಇಬ್ರಾಹಿಂ ನಿವಾಸಕ್ಕೆ ಸಿದ್ದು ಹೋಗ್ಲಿಲ್ಲ, ಬಿರಿಯಾನಿ ತಿನ್ಲಿಲ್ಲ, 
* ಇಬ್ರಾಹಿಂ ರಾಜೀನಾಮೆಗೆ ಮುಹೂರ್ತ ಫಿಕ್ಸ್
* ಅಧಿಕೃತವಾಗಿ ಕಾಂಗ್ರೆಸ್ ತೊರೆಯಲಿರುವ ಇಬ್ರಾಹಿಂ


ಬೆಂಗಳೂರು, (ಮಾ.11): ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿದ್ದ ಸಿಎಂ ಇಬ್ರಾಹಿಂ ಇದೀಗ ಅಧಿಕೃತವಾಗಿ ಪಕ್ಷಕ್ಕೆ ರಾಜೀನಾಮೆ ನೀಡುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಇಬ್ರಾಹಿಂ ಅವರನ್ನ ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಸ್ ಮಾಡಿದ್ರು. ತಮ್ಮ ಆಪ್ತ ಎಚ್‌ಸಿ ಮಹಾದೇವಪ್ಪ ಅವರನ್ನ ಸಿಎಂ ಇಬ್ರಾಹಿಂ ನಿವಾಸಕ್ಕೆ ಕಳುಹಿಸಿ ಸಂಧಾನಕ್ಕೆ ಮುಂದಾಗಿದ್ದರು.  ಸಿ.ಎಂ.ಇಬ್ರಾಹಿಂ ನನ್ನ ಸ್ನೇಹಿತ. ಅವನು ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಅವನ ಸಿಟ್ಟು ಕಡಿಮೆಯಾದ ತಕ್ಷಣ ಅವನ ಮನೆಗೆ ಬಿರಿಯಾನಿ ತಿನ್ನಲು ಹೋಗುತ್ತೇನೆ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದರು.

Tap to resize

Latest Videos

ಆದರೆ, ಸಿದ್ದರಾಮಯ್ಯ ಅವರು ಇಬ್ರಾಹಿಂ ನಿವಾಸಕ್ಕೆ ಹೋಗಲಿಲ್ಲ. ಬಿರಿಯಾನಿ ತಿನ್ನಲಿಲ್ಲ. ಸಂಧಾನ ಯಶಸ್ವಿಯಾಗಲಿಲ್ಲ. ಇದೀಗ ಅಂತಿಮವಾಗಿ ಸಿಎಂ ಇಬ್ರಾಹಿಂ ಅಧಿಕೃತವಾಗಿ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.

Karnataka Politics: 'ಇಬ್ರಾಹಿಂ ಸಿಟ್ಟು ಕಡಿಮೆಯಾದ ತಕ್ಷಣ ಬಿರಿಯಾನಿ ತಿನ್ನಲು  ಹೋಗುತ್ತೇನೆ'

ನಾಳೆ ಅಂದ್ರೆ ಶನಿವಾರ ಕಾಂಗ್ರೆಸ್ ‌ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ.ರಾಜೀನಾಮೆ‌ ಪತ್ರವನ್ನು ಕೆಪಿಸಿಸಿ ಕಚೇರಿಗೆ ಸಲ್ಲಿಕೆ ಮಾಡುವ ಮೂಲಕ ಅಧಿಕೃತವಾಗಿ ಕಾಂಗ್ರೆಸ್ ‌ಪಕ್ಷ ತೊರೆಯಲಿದ್ದಾರೆ. ಇನ್ನು  ಶೀಘ್ರವೇ ಅಧಿಕೃತವಾಗಿ ಸಭಾಪತಿ ಹೊರಟ್ಟಿರನ್ನ ಭೇಟಿಯಾಗಿ ಪರಿಷತ್ ಸ್ಥಾನಕ್ಕೂ ರಾಜೀನಾಮೆ ಸಲ್ಲಿಕೆಗೆ ಸಾಧ್ಯತೆ ಇದೆ.

ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದ ಇಬ್ರಾಹಿಂ
ಹೌದು...ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿದ್ದ ಸಿಎಂ ಇಬ್ರಾಹಿಂ, ಅಧಿಕೃತವಾಗಿ ಪಕ್ಷಕ್ಕೆ ರಾಜೀನಾಮೆ ನೀಡಲು ಕಾದುನೋಡುವ ತಂತ್ರಕ್ಕೆ ಶರಣಾಗಿದ್ದರು. 

ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಹುದ್ದೆ ಬಿಕೆ ಹರಿಪ್ರಸಾದ್ ಅವರಿಗೆ ನೀಡಿದ್ದೆ ತಡ ಇಬ್ರಾಹಿಂ ಅವರು ದಿಢೀರ್ ಸುದ್ದಿಗೋಷ್ಠಿ ಕರೆದು ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿದ್ದರು.

Karnataka Congress ಫೆ.14ರಂದು ಲವರ್ಸ್ ಡೇ, ಅಂದೇ ರಾಜೀನಾಮೆ ನೀಡ್ತೇನೆ, ಇಬ್ರಾಹಿಂ ಘೋಷಣೆ

ಘೋಷಣೆ ಮಾಡಿದ ಒಂದೆರೆಡು ದಿನದ ಬಳಿಕ ಫೆ.14ರ ಲವರ್ಸ್‌ ದಿನದಿಂದ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಅದಾದ ಒಂದು ದಿನದಲ್ಲೇ ಸಿಎಂ ಇಬ್ರಾಹಿಂ ಅವರು ರಾಜೀನಾಮೆ ನೀಡುವ ವಿಚಾರದಲ್ಲಿ ದಿಢೀರ್ ಉಲ್ಟಾ ಹೊಡೆದಿದ್ದರು. ಹೈಕಮಾಂಡ್‌ ಕರೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಇಬ್ರಾಹಿಂ ಅವರು ರಾಜೀನಾಮೆ ನೀಡುವ ದಿನಗಳನ್ನ ಮುಂದೂಡಿದ್ದರು.

ಪಕ್ಷದಲ್ಲಿ ಉಳಿಸಿಕೊಳ್ಳೋಕೆ ಮನಸ್ಸಿದೆಯೋ ಇಲ್ವೋ ಎಂದು  ಕಾಂಗ್ರೆಸ್ ಹೈಕಮಾಂಡ್ ಗೆ ಕೇಳುತ್ತೇನೆ. ಹೈಕಮಾಂಡ್ ಏನು ಹೇಳುತ್ತೋ ನೋಡೋಣ. ಆ ಮೇಲೆ ನಾನು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಇಬ್ರಾಹಿಂ ಹೇಳಿದ್ದರು.

ನನ್ನ ಜೊತೆ ಸಿದ್ದರಾಮಯ್ಯನವರು ಮಾತನಾಡಿಲ್ಲ. ಬಾದಾಮಿಗೆ ಹೊತ್ತುಕೊಂಡು ಹೋದವನು ನಾನು. ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ. ಸಿದ್ದರಾಮಯ್ಯನವರು ಕಾಂಗ್ರೆಸ್​ನಲ್ಲಿ ಅಸಹಾಯಕರಾಗಿದ್ದಾರೆ. ಅಲಿಂಗ ಸಮಾವೇಶವನ್ನು ಫೆಬ್ರವರಿಯಲ್ಲಿ ಮಾಡುತ್ತೇನೆ. ಕರ್ನಾಟಕದಲ್ಲಿ ಬಸವ ಕೃಪಾದ ಸಿದ್ದಾಂತ ತರುತ್ತೇನೆ.‌ ಕಾಂಗ್ರೆಸ್ ಮತ್ತು ಬಿಜೆಪಿಯವರು ನನ್ನ ಜೊತೆ ಟೆಚ್ ನಲ್ಲಿಯೇ ಇದ್ದಾರೆ ಎಂದು ಬಾಂಬ್ ಸಿಡಿಸಿದ್ದರು. 

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮಾತ್ರವಲ್ಲ ರಾಹುಲ್‌ ಗಾಂಧಿಯ ಬಗ್ಗೆಯೂ ಕಿಡಿ ನುಡಿಗಳ ಮೂಲಕ ವಾಗ್ದಾಳಿ ನಡೆಸಿದ್ದ ಇಬ್ರಾಹಿಂ ಜೆಡಿಎಸ್‌ ಬಾಗಿಲು ತಟ್ಟಿದ್ದರು. ತನ್ನ ಮುಂದಿನ ಪಯಣ ಬಹುತೇಕ ಜೆಡಿಎಸ್‌ ಕಡೆಗೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

ಫೆಬ್ರವರಿ 14 ರಂದು ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ. ಅದೇ ದಿನ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ. ಅಷ್ಟೇ ಅಲ್ಲದೆ ಅಲಿಂಗೌ ಸಮಾವೇಶವನ್ನು ನಡೆಸುತ್ತೇನೆ ಎಂದೆಲ್ಲಾ ಹೇಳಿಕೊಂಡಿದ್ದರು. ಇದಾದ ಬಳಿಕ ಸಿದ್ದರಾಮಯ್ಯ ಅವರು ಸ್ವತಃ ಸಿಎಂ ಇಬ್ರಾಹಿಂ ಜೊತೆ ಮಾತುಕತೆ ನಡೆಸಿದ್ದರು. ತನ್ನ ಸ್ನೇಹಿತ ಎಚ್‌ಸಿ ಮಹದೇವಪ್ಪ ಅವರನ್ನು ಸಿಎಂ ಇಬ್ರಾಹಿಂ ನಿವಾಸಕ್ಕೆ ಕಳಿಸಿ ಸಂಧಾನ ಪ್ರಯತ್ನ ನಡೆಸಿದ್ದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಇಬ್ರಾಹಿಂ
ಹೌದು...ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಹುದ್ದೆ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಸಿಎಂ ಇಬ್ರಾಹಿಂ, ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಈಗಾಗಲೇ ಕುಮಾರಸ್ವಾಮಿ ಅವರು ಹಲವು ಬಾರಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.

 ಆದ್ರೆ, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ಅವರು ಸದ್ಯಕ್ಕೆ ಅಸಾಧ್ಯ. ಮುಂದೆ ನೋಡೋಣ ಎನ್ನುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

click me!