ದೇವೇಗೌಡ್ರ ಫ್ಯಾಮಿಲಿ ಮೋದಿ ಭೇಟಿಯಾಗ್ತಿದ್ದಂತೆ ಜೆಡಿಎಸ್‌ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಿಎಂ ಇಬ್ರಾಹಿಂ!

By Sathish Kumar KHFirst Published Dec 21, 2023, 6:31 PM IST
Highlights

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಮಕ್ಕಳ ಸಮೇತರಾಗಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುತ್ತಿದ್ದಂತೆ, ಉಚ್ಛಾಟಿತ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಜೆಡಿಎಸ್‌ ವಿರುದ್ಧ ಕೋರ್ಟ್‌  ಮೆಟ್ಟಿಲೇರಿದ್ದಾರೆ.

ಬೆಂಗಳೂರು (ಡಿ.21): ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಕುಟುಂಬ ಸಮೇತರಾಗಿ ಭೇಟಿಯಾಗಿದ್ದಾರೆ. ಆದರೆ, ರಾಜ್ಯದಲ್ಲಿ ಜೆಡಿಎಸ್‌ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಸಹಿಸದ ಸಿಎಂ ಇಬ್ರಾಹಿಂ ಅವರು ತಮ್ಮನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯಿಯೊಂದಿಗೆ ಕರ್ನಾಟಕದ ಪ್ರಬಲ ಪ್ರಾದೇಶಿಕ ಪಕ್ಷ ಜೆಡಿಎಸ್‌ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸಿ ಪ್ರಧಾನಿ ಮೋದಿ ಅವರನ್ನು ಕೇಂದ್ರದಲ್ಲಿ ಮತ್ತೊಮ್ಮೆ ಆಡಳಿತಕ್ಕೆ ತರವು ಸಂಕಲ್ಪವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತಮ್ಮ ಪುತ್ರ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಶಾಸಕ ಹೆಚ್.ಡಿ. ರೇವಣ್ಣ ಅವರ ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣ ಅವರೊಂದಿಗೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

ಲೋಕಸಭೆಯಲ್ಲಿ ಸೆಂಚುರಿ ಬಾರಿಸಿದ ಓಂ ಬಿರ್ಲಾ, ಡಿಕೆ ಸುರೇಶ್‌ ಸೇರಿದಂತೆ ಮೂವರ ಸಸ್ಪೆಂಡ್‌!

ಆದರೆ, ಇತ್ತ ರಾಜ್ಯದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ನಾಯಕರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಜೆಡಿಎಸ್ ವರಿಷ್ಠರು ಯಾವುದೇ ಮುನ್ಸೂಚನೆ ನೀಡದೇ ತಮ್ಮನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಸಿವಿಲ್ ಮೊಕದ್ದಮೆ ದಾಖಲು ಮಾಡಿದ್ದಾರೆ. ತಮ್ಮನ್ನು ಕಾನೂನು ಬಾಹಿರವಾಗಿ ಉಚ್ಚಾಟನೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಸದ್ಯಕ್ಕೆ ನ್ಯಾಯಾಲಯಕ್ಕೆ ಅರ್ಜಿ ಮಾತ್ರ ಸಲ್ಲಿಕೆಯಾಗಿದ್ದು ವಿಚಾರಣೆಗೆ ಬರಬೇಕಿದೆ. ಈ ಬಗ್ಗೆ ವಕೀಲ ಶತಬೀಷ್ ಹಾಗೂ ಶಿವಣ್ಣ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಲೋಕಸಭೆಗೆ ನಾನು, ನನ್ನಪುತ್ರ ನಿಖಿಲ್ ಇಬ್ಬರೂ ಸ್ಪರ್ಧೆ ಮಾಡೊಲ್ಲ!
ನವದೆಹಲಿ  (ಡಿ.21):
ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಹಾಗೂ ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಆದರೆ, 20 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಕಾರ್ಯಗಳಲ್ಲಿ ಇಬ್ಬರೂ ಭಾಗಿಯಾಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ನಿಖಿಲ್ 28 ಲೋಕಸಭಾ ಕ್ಷೇತ್ರದಲ್ಲಿ ಸಂಚಾರ ಮಾಡ್ತಾರೆ. ಯಾವುದೇ ಕಾರಣಕ್ಕೂ ಚುನಾವಣೆಗೆ ನಿಲ್ಲಲ್ಲ. ಆದರೆ, ಜನರೇ ನಿಲ್ಲಬೇಕು ಅಂತ ಹೇಳುತ್ತಿದ್ದಾರೆ. ನಿಖಿಲ್ 2ನೇ ಬಾರಿ ಚುನಾವಣೆಯಲ್ಲಿ ಸೋತಿದ್ದಾರೆಂಬ ಅನುಕಂಪದ ಅಲೆಯಿದ್ದು, ಮಂಡ್ಯದಲ್ಲಿ ಸ್ಪರ್ಧೆ ಮಾಡಲಿ ಎಂದು ಹೇಳುತ್ತಿದ್ದಾರೆ. ಜನರಿಗೆ ನಿಖಿಲ್ ಬಗ್ಗೆ ಅನುಕಂಪ ಇದೆ. ಆದ್ರೆ ನಿಖಿಲ್ ಅಭ್ಯರ್ಥಿ ಆಗೋ ಬಗ್ಗೆ ಪಕ್ಷದಲ್ಲಿ ತೀರ್ಮಾನ ಆಗಿಲ್ಲ. ಸೀಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರ್ಯಾರು ನಿಲ್ತಾರೆ ಅಂತ ನಾವು ಫೈನಲ್ ಮಾಡ್ತೇವೆ. ಅದರ ಬಗ್ಗೆ ಸಮಸ್ಯೆಯಿಲ್ಲ. ಒಂದು ಸೀಟ್ ಹೆಚ್ಚು ಕಮ್ಮಿ ಆಗುತ್ತದೆ, ಅದರಲ್ಲಿ ಏನು ಸಮಸ್ಯೆ ಇಲ್ಲ. ವಿಶ್ವಾಸ ಬೇಕು ಅಷ್ಟೇ, ಅದನ್ನ ನಾವು ಉಳಿಸಿಕೊಳ್ಳಬೇಕು. ಜನವರಿ ಅಂತ್ಯದ ಒಳಗೆ ನಾವು ಎಲ್ಲಾ ನಿರ್ಧಾರ ಮಾಡ್ತೇವೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ನಾನೂ ನಿಲ್ಲೊಲ್ಲ, ನಿಖಿಲ್‌ ಕೂಡ ಸ್ಪರ್ಧಿಸೊಲ್ಲ: ಮಾಜಿ ಸಿಎಂ ಕುಮಾರಸ್ವಾಮಿ!

ಲೋಕಸಭಾ ಚುನಾವಣೆಯಲ್ಲಿ ನೀವು ಸ್ಪರ್ಧೆ ಮಾಡ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ನನ್ ಎದುರಿಗೆ ಆ ಥರ ಆಲೋಚನೆ ಇಲ್ಲ. ಮಾಧ್ಯಮದಲ್ಲಿ ಈ ಥರ ಸುದ್ದಿ ಬರ್ತಿದೆ. ನಮ್ಮ ಜನರು, ಕಾರ್ಯಕರ್ತರು ಹಾಗೆ ಅನ್ಕೊಂಡಿದ್ದಾರೆ. ನಾನು ಇಲ್ಲಿ ಬಂದ್ರೆ ಡೆವಲಪ್ಮೆಂಟ್ ಆಗುತ್ತದೆ, ಒಳ್ಳೇದಾಗುತ್ತೆ ಅಂತ ಅವರವರ ಭಾವನೆಯಿದೆ. ನಮ್ಮನ್ನ ಬಿಜೆಪಿ ಸ್ನೇಹಿತರು ಸಹ ಆ ಥರ ಅನ್ಕೊಂಡಿದ್ದಾರೆ. ನಾನು ಚುನಾವಣೆ ನಿತ್ಕೊಂಡ್ರೆ ಒಳ್ಳೇದಾಗುತ್ತೆ ಅಂತ. ನನಗೆ ಆ ಥರ ಆಲೋಚನೆ ಇಲ್ಲ. ನಾನು ಕರ್ನಾಟಕದಲ್ಲೇ ಇರೋಕೆ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.

click me!