ಕರ್ನಾಟಕ ಅಭಿವೃದ್ಧಿ ಬಗ್ಗೆ ಅಸ್ಸಾ ಸಿಎಂ ಹಿಮಂತ ಬಿಸ್ವ ಶರ್ಮ ಫಿದಾ!

Published : Jan 27, 2025, 07:09 AM IST
ಕರ್ನಾಟಕ ಅಭಿವೃದ್ಧಿ ಬಗ್ಗೆ ಅಸ್ಸಾ ಸಿಎಂ ಹಿಮಂತ ಬಿಸ್ವ ಶರ್ಮ ಫಿದಾ!

ಸಾರಾಂಶ

ಕರ್ನಾಟಕವು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಅದೇ ರೀತಿ ದೇಶಕ್ಕೆ ಕೊಡುಗೆ ನೀಡುವ ರಾಜ್ಯವನ್ನಾಗಿ ಅಸ್ಸಾಂ ರಾಜ್ಯವನ್ನೂ ಅಭಿವೃದ್ಧಿಪಡಿಸುವುದು ನನ್ನ ಗುರಿ ಎಂದು ಬಿಜೆಪಿ ಆಡಳಿತವಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. 

ದಿಬ್ರೂಗಢ (ಅಸ್ಸಾಂ) (ಜ.27): ಕರ್ನಾಟಕವು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಅದೇ ರೀತಿ ದೇಶಕ್ಕೆ ಕೊಡುಗೆ ನೀಡುವ ರಾಜ್ಯವನ್ನಾಗಿ ಅಸ್ಸಾಂ ರಾಜ್ಯವನ್ನೂ ಅಭಿವೃದ್ಧಿಪಡಿಸುವುದು ನನ್ನ ಗುರಿ ಎಂದು ಬಿಜೆಪಿ ಆಡಳಿತವಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. ಈ ಮೂಲಕ ಕರ್ನಾಟಕದ ಅಭಿವೃದ್ಧಿ ಪಥವನ್ನು ಹೊಗಳಿದ್ದಾರೆ. 

ಭಾನುವಾರ ಇಲ್ಲಿ ನಡೆದ 76ನೇ ಗಣರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಹಿಮಂತ ಬಿಸ್ವ ಶರ್ಮಾ, ‘ಈ ಹಿಂದೆ ಅಸ್ಸಾಂ ಬೇರೆಯವರ ಮೇಲೆ ಅವಲಂಬಿತವಾದ ರಾಜ್ಯವಾಗಿತ್ತು ಮತ್ತು ಅದೇ ನಮ್ಮ ಗುರುತಾಗಿತ್ತು.  ಆದರೆ ಈಗ ನಾವು ಕರ್ನಾಟಕ ಮತ್ತು ತಮಿಳುನಾಡಿನಂತೆ ಕೊಡುಗೆ ನೀಡುವ ರಾಜ್ಯವಾಗಬೇಕಿದೆ. ಅದನ್ನು ಸಾಧಿಸುವುದೇ ನನ್ನ ಗುರಿ’ ಎಂದು ಹೇಳಿದರು. 

ಜೊತೆಗೆ ಈ ಕನಸು ನನಸು ಮಾಡಲು ‘ಉದ್ಯಮಗಳನ್ನು ಪ್ರೋತ್ಸಾಹಿಸಲು ಮತ್ತು ಬೆಂಬಲಿಸಲು ಅಸ್ಸಾಂನಲ್ಲಿ ಸ್ಟಾರ್ಟಪ್‌ ಇಲಾಖೆ ಸ್ಥಾಪಿಸಲಾಗುವುದು. ಮೂಲಸೌಕರ್ಯ, ಎಲೆಕ್ಟ್ರಾನಿಕ್ಸ್, ನವೀಕರಿಸಬಹುದಾದ ಇಂಧನ, ಪ್ರವಾಸೋದ್ಯಮ ಮತ್ತು ಲಾಜಿಸ್ಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಫೆಬ್ರವರಿ 25-26ರಂದು, ಅಡ್ವಾಂಟೇಜ್ ಅಸ್ಸಾಂ 2.0 ಶೃಂಗಸಭೆಯನ್ನು ರಾಜ್ಯ ಆಯೋಜಿಸುತ್ತಿದೆ. ಅಸ್ಸಾಂನ ಭವಿಷ್ಯಕ್ಕಾಗಿ ನಮ್ಮನ್ನು ನಾವು ಪರಿವರ್ತಿಸಿಕೊಳ್ಳಬೇಕಿದೆ. ಇದೇ ನನ್ನ ಗುರಿ’ ಎಂದರು.

ಮೇಲ್ಮನೆಯ 4 ಸ್ಥಾನಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಜ.27ರ ನಂತರ: ಸಿಎಂ ಸಿದ್ದರಾಮಯ್ಯ

ಅಸ್ಸಾಂನಲ್ಲಿ ಗೋಮಾಂಸ ನಿಷೇಧ: ಅಸ್ಸಾಂನಲ್ಲಿ ಗೋಮಾಂಸ ನಿಷೇಧದ ಬಗ್ಗೆ ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ಭೂಪೇನ್‌ ಕುಮಾರ್‌ ಬೋರಾಹ್‌ ಅವರು ತಮಗೆ ಪತ್ರ ಬರೆದರೆ ತಾವು ನಿಷೇಧಕ್ಕೆ ಸಿದ್ಧ ಎಂದು ಮುಖ್ಯಮಂತ್ರಿ ಹಿಮಂತ್‌ ಬಿಸ್ವ ಶರ್ಮಾ ಹೇಳಿದ್ದಾರೆ. 5 ಅವಧಿ ಸತತ ಗೆದ್ದು ಕಾಂಗ್ರೆಸ್‌ ಹಿಡಿತವಿದ್ದ ಮುಸ್ಲಿಂ ಪ್ರಾಬಲ್ಯದ ಸಮಗುರಿ ಉಪಚುನಾವಣೆಯಲ್ಲಿ ಗೆಲ್ಲಲು ಮತದಾರರಿಗೆ ಬಿಜೆಪಿ ಗೋಮಾಂಸ ಹಂಚಿದೆ ಎಂಬ ಸಂಸದ ರಾಕಿಬುಲ್‌ ಹುಸೇನ್‌ ಆರೋಪಗಳಿಗೆ ಸಿಎಂ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ‘25 ವರ್ಷಗಳ ಹಿಡಿತವಿದ್ದ ಸಮಗುರಿಯಲ್ಲಿನ ಸೋಲು ಕಾಂಗ್ರೆಸ್‌ಗೆ ಇತಿಹಾಸದಲ್ಲಿ ದೊಡ್ಡ ಅಪಖ್ಯಾತಿಯಾಗಿದೆ. ರಾಜ್ಯದಲ್ಲಿ ಗೋಮಾಂಸ ಸೇವನೆ ನಿಷೇಧದ ಬಗ್ಗೆ ಕಾಂಗ್ರೆಸ್‌ ಮುಖ್ಯಸ್ಥ ಬೋರಾಹ್‌ ನಮಗೆ ತಿಳಿಸಿದರೆ ಮುಂದಿನ ವಿಧಾನಸಭೆಯಲ್ಲಿ ನಾವು ಗೋಮಾಂಸ ಸಂಪೂರ್ಣ ನಿಷೇಧಿಸುತ್ತೇವೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್