ಸಿಎಂ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ: ಸಚಿವ ಸತೀಶ್‌ ಜಾರಕಿಹೊಳಿ

By Govindaraj S  |  First Published Jun 30, 2024, 5:46 PM IST

ಮುಖ್ಯಮಂತ್ರಿ ಬದಲಾವಣೆ ಚರ್ಚೆ ವಿಚಾರ ಸದ್ಯ ಮುಗಿದ ಅಧ್ಯಾಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.


ಬೆಳಗಾವಿ (ಜೂ.30): ಮುಖ್ಯಮಂತ್ರಿ ಬದಲಾವಣೆ ಚರ್ಚೆ ವಿಚಾರ ಸದ್ಯ ಮುಗಿದ ಅಧ್ಯಾಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಮುಖಂಡರು ದೆಹಲಿ, ಬೆಂಗಳೂರಿನಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ. ಸದ್ಯ ಈ ವಿಷಯ ಮುಂದುವರೆಸುವ ಅವಶ್ಯಕತೆ ಇಲ್ಲ. ಯಾರು ಏನೇ ಹೇಳಿದರೂ ಸಿಎಂ ಬದಲಾವಣೆ ವಿಚಾರ ಮುಗಿದಿದೆ. ಈ ವಿಷಯ ಹೈಕಮಾಂಡ್‌ ಹಾಗೂ ಪಕ್ಷ ತೀರ್ಮಾನ ಮಾಡುವ ವಿಷಯ. ಯಾರೂ ಹಾದಿ ಬೀದಿಯಲ್ಲಿ ಚರ್ಚೆ ಮಾಡಲಾಗದು ಎಂದರು.

ಸಿಎಂ ಬದಲಾವಣೆ ಕುರಿತು ಯಾವುದೋ ಸಭೆ ಸಮಾರಂಭಗಳಲ್ಲಿ, ವೈಯಕ್ತಿಕವಾಗಿ ಹೇಳಿದರೆ ಮಹತ್ವ ಇರಲ್ಲ. ಇದು ಪಕ್ಷದ ವೇದಿಕೆಯಲ್ಲೆ ಚರ್ಚೆ ಆಗಬೇಕು, ಡಿಸಿಎಂಗಳ ಹೆಚ್ಚಳ ಮಾಡುವ ವಿಚಾರ ಚುನಾವಣೆಗೂ ಮುಂಚೆ ಕೂಗು ಇತ್ತು. ಅದನ್ನು ಮಾಡಬೇಕೇ ಇಲ್ಲ ಬೇಡವೇ ಎನ್ನುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟದ್ದು ಎಂದು ತಿಳಿಸಿದರು.

Latest Videos

undefined

2028ರ ಚುನಾವಣೆ ಬಳಿಕ ನಾನು ಸಿಎಂ ಅಭ್ಯರ್ಥಿ. ಅವತ್ತಿನ ಪರಿಸ್ಥಿತಿ ಸನ್ನಿವೇಶ ನೋಡಿಕೊಂಡು ನಾನು ಕ್ಲೇಮ್ ಹಾಕುತ್ತೇನೆ. ಆದರೆ ಈಗಲ್ಲ ಎಂದ ಅವರು, ಬೆಳಗಾವಿ ಜಿಲ್ಲೆ ವಿಭಜನೆ ಮಾಡುವ ಕುರಿತು ನಾವು ಸಹ ಪ್ರಯತ್ನ ಮಾಡುತ್ತಿದ್ದೇವೆ. ಧ್ವನಿ ಕೂಡ ಎತ್ತಿದ್ದೇನೆ. ಅವಕಾಶ ಬಂದೆ ಬರುತ್ತದೆ ಎಂಬ ನಂಬಿಕೆ ಇದೆ, ಕಾದು ನೋಡಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ ಎಂದು ಹೇಳಿದರು.

ದಾರಿ ತಪ್ಪಿದ ಮಗನಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ದಲಿತ ಸಮುದಾಯದವರು ಮುಖ್ಯಮಂತ್ರಿ ಆಗುವ ವಿಚಾರ ಮಾತನಾಡಿದ ಅವರು, ಇದನ್ನು ನನ್ನ ಬಳಿ ಕೇಳಬೇಡಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನೆ ಕೇಳಿ. ನಮ್ಮ ಕೆಲಸ ಹೊಸ ಕೆಲಸ, ಅಭಿವೃದ್ಧಿ ಬಗ್ಗೆ ಕೇಳಿ. ನಾನು ಅಷ್ಟಕ್ಕೇ ಮಾತ್ರ ಸೀಮಿತ ಎಂದು ಹೇಳಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಾರ್ವಜನಿಕರ ಅನುಕೂಲಕ್ಕಾಗಿ ಈಗಿದ್ದ ಎಂಪಿ ಕಚೇರಿಯೇ ಯಥಾಸ್ಥಿತಿಯಾಗಿ ಮುಂದುವರೆಯಲಿದೆ ಎಂದು ಅವರು ಹೇಳಿದರು.

click me!