ಸರ್ಕಾರಿ‌‌ ನೌಕರರ ವರ್ಗಾವಣೆಗೆ ಸಿಎಂ ಗ್ರೀನ್ ಸಿಗ್ನಲ್: ಕೊನೆಗೂ ಸಚಿವರಿಗೆ ಸಿಕ್ತು ಅಧಿಕಾರ

By Suvarna NewsFirst Published Jul 8, 2021, 6:38 PM IST
Highlights

* ಸರ್ಕಾರಿ‌‌ ನೌಕರರ ವರ್ಗಾವಣೆಗೆ ಸಿಎಂ ಗ್ರೀನ್ ಸಿಗ್ನಲ್..
* ಈ ಬಾರಿ ಇಲಾಖಾವಾರು ಸಚಿವರಿಗೆ ವರ್ಗಾವಣೆ ಅಧಿಕಾರ
* ಶೇಕಡಾ 6ಕ್ಕೆ ಮೀರದಂತೆ ಸರ್ಕಾರಿ ‌ನೌಕರರ ವರ್ಗಾವಣೆಗೆ ಅವಕಾಶ..
 

ಬೆಂಗಳೂರು, (ಜುಲೈ.08): ಕೊನೆಗೂ ಸಚಿವರ ಒತ್ತಡಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಣಿದಿದ್ದಾರೆ. ಸಾರ್ವತ್ರಿಕ ವರ್ಗಾವಣೆಯನ್ನು ಆಯಾ ಇಲಾಖೆಗಳ ಸಚಿವರಿಗೆ ವಹಿಸಿದ್ದಾರೆ.

ಹೌದು..ಸರ್ಕಾರಿ‌‌ ನೌಕರರ ವರ್ಗಾವಣೆಗೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಗ್ರೀನ್ ಸಿಗ್ನಲ್ ನೀಡಿದ್ದು, ಈ ಬಗ್ಗೆ ಇಂದು (ಗುರುವಾರ) ಅಧಿಕೃತ ಆದೇಶ ಹೊರಿಡಿಸಿದ್ದಾರೆ.

'ಹೊರಗಡೆ ಬಿಎಸ್‌ವೈ ನಮ್ಮ ನಾಯಕ ಅಂತಾರೆ..ಒಳಗಡೆ ಹೋಗಿ ಸಿಎಂ ಬದಲಾಯಿಸಿ ಅಂತಾರೆ'

ಇಲಾಖೆ ಸಚಿವರಿಗೆ ನೌಕರರ ವರ್ಗಾವಣೆ ಅಧಿಕಾರ ನೀಡಲಾಗಿದೆ. ಜುಲೈ 22 ರವರೆಗೆ ಒಂದು ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇಕಡ 6 ರಷ್ಟು ಮೀರದಂತೆ ಗ್ರೂಪ್ ಬಿ ಮತ್ತು ಸಿ ವರ್ಗದ ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ ಅಧಿಕಾರವನ್ನು ಇಲಾಖೆಯ ಸಚಿವರಿಗೆ ನೀಡಲಾಗಿದೆ. 

ಸಂಪುಟ ಸಭೆಯಲ್ಲಿ ಅನೇಕ ಸಚಿವರು ವರ್ಗಾವಣೆಗೆ ಅವಕಾಶ ನೀಡುವಂತೆ ಒತ್ತಡ ಹೇರಿದ್ದರು.  ವರ್ಗಾವಣೆ ಬಗ್ಗೆ ಸಚಿವರಿಗೆ ಅಧಿಕಾರ ನೀಡಲು ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ 10 ಸಚಿವರು ಒತ್ತಡ ಹೇರಿದ್ದರೆನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಸಿಎಂ ವರ್ಗಾವಣೆಗೆ ಅವಕಾಶ ನೀಡಿದ್ದಾರೆ ಎಂದು ಎಂದು ತಿಳಿದುಬಂದಿದೆ.

click me!