'ನಾನು ಮಾತನಾಡಿದ್ರೆ ಎಚ್‌ಡಿಕೆ ಹಗಲು, ರಾತ್ರಿ ಡಿಕೆಶಿ ಸಿಎಂ ಮನೆಗೆ ಹೋಗ್ತಾರೆ'

By Suvarna NewsFirst Published Jul 8, 2021, 6:20 PM IST
Highlights

 * ಸುದ್ದಿಗಾರರೊಂದಿಗೆ ಪ್ರವಾಸೋದ್ಯಮ‌ ಸಚಿವ ಸಿ.ಪಿ ಯೋಗೇಶ್ವರ್ ಮಾತು
* ರೇಣುಕಾಚಾರ್ಯ ವಿರುದ್ಧ ಏಕವಚನದಲ್ಲಿ ಯೋಗೇಶ್ವರ್ ವಾಗ್ಧಾಳಿ
* ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸೈನಿಕ ಕಿಡಿ

ರಾಮನಗರ, (ಜುಲೈ.08): ಬೇರೆಯವರ ಮಾತಿಗೆ ನಾನು ರಿಯಾಕ್ಟ್ ಮಾಡುವುದಿಲ್ಲ‌. ನನ್ನ ಮಾತಿಗೆ ನಾನು ಬದ್ದವಾಗಿದ್ದೆನೆ. ನನ್ನ ನಿಲುವನ್ನು ಆಗಾಗೆ ವ್ಯಕ್ತ ಪಡಿಸುತ್ತೇನೆ.  ಲೋಪಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದೇನೆ‌ ಅಷ್ಟೇ ಎಂದು ಪ್ರವಾಸೋದ್ಯಮ‌ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

ರಾಮನಗರದ ಬಿಡದಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಮಿಡಿಯಾದಲ್ಲಿ ಮಾತನಾಡಿದರೆ, ಎಚ್ಡಿ ಕುಮಾರಸ್ವಾಮಿ ಬೆಳಗ್ಗೆ ಸಿಎಂ ಬಳಿ ಹೋಗುತ್ತಾರೆ.  ರಾತ್ರಿ ಡಿ.ಕೆ. ಶಿವಕುಮಾರ್  ಹೋಗುತ್ತಾರೆ. ಅದ್ರಿಂದ ನಾನು ನಿಮ್ಮೊಂದಿಗೆ ಹೆಚ್ಚು ಮಾತನಾಡಲು ಇಚ್ವಿಸುವುದಿಲ್ಲವೆಂದು ಹೇಳುತ್ತಲೇ ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಜೊತೆ ಸಿಎಂ ಸಂಖ್ಯ ಹೊಂದಿರುವುದರಿಂದಲೇ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ಆಗುತ್ತಿಲ್ಲವೆಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಅಸಮಧಾನ ಹೊರ ಹಾಕಿದರು.

ಕುಮಾರಸ್ವಾಮಿ ಹೇಳಿದಂತೆ ಮೀಸಲಾತಿ ಹಂಚಿಕೆ: ಸಚಿವ ಬಹಿರಂಗ ಅಸಮಾಧಾನ 

ಐದು ಭಾರಿ ನಾನು ಗೆಲುವು ಸಾಧಿಸಿದ್ದೇನೆ. ರೇಣುಕಾಚಾರ್ಯ ರಾಜಕೀಯ ಕಾರ್ಯದರ್ಶಿಯಾಗಿದ್ದಾನೆ.  ಅವರಿಗೆ ಬೆಂಗಳೂರಿಗೆ ಐಷಾರಾಮಿ ಮನೆ ಸಿಕ್ಕಿದೆ. ಆತನ ಕ್ಷೇತ್ರಕ್ಕೆ ಸರ್ಕಾರದಿಂದ ಸಾವಿರಾರು ಕೋಟಿ ಸಿಕ್ಕಿದೆ  ಎಂದರೆ ಅಲ್ಲಿ ನನ್ನ ಶ್ರಮವಿದೆ ಎಂದು ರೇಣುಕಾಚಾರ್ಯ ಅರೋಪಕ್ಕೆ ಏಕವಚನದಲ್ಲಿ ತಿರುಗೇಟು ನೀಡಿದರು.

ನೀವು ಬಯಸುವ ಉತ್ತರವನ್ನು ನಾನು ಹೇಳುವುದಿಲ್ಲ. ನಾನು ಸಹ ಮುಖ್ಯಮಂತ್ರಿ ಆಡಳಿತವನ್ನು ಒಪ್ಪಿದ್ದೇನೆ. ಅವರು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೇ ಸರಕಾರದಲ್ಲಿ ನನಾಗುತ್ತಿರುವ ನೋವನ್ನು ಒಮ್ಮೊಮ್ಮೆ ತಡೆಯಲಾರದೆ ನಿಮ್ಮೊಂದಿಗೆ ಪಕ್ಷದ ವರಿಷ್ಠರ ಜೊತೆ ಹಂಚಿಕೊಂಡಿದ್ದೇನೆ ಎಂದರು.

ಬಿಜೆಪಿಗೆ ಎಲ್ಲಿಂದಲ್ಲೋ ಬಂದವರನ್ನು ನಾವು ಸೇರಿಸಿಕೊಳ್ಳುವುದಿಲ್ಲ. ಜೈಲಿಗೆ ಹೋದವರನ್ನು ನಾವು ಸೇರಿಸಿಕೊಳ್ಳುವುದಿಲ್ಲವೆಂದು
ಕಾಂಗ್ರೆಸ್‌ಗೆ ಬರುವಂತೆ ಆಹ್ವಾನಿಸಿರುವ ಡಿಕೆಶಿಗೆ ಸಿಪಿವೈ ತಿರುಗೇಟು ಕೊಟ್ಟರು.

ಕೆಆರ್ ಎಸ್ ಸುತ್ತಲೂ ಕಲ್ಲುಗಣಿಗಾರಿಕೆ ಅನೇಕ ವರ್ಷಗಳಿಂದ ನಡೆಯುತ್ತಿದೆ. ಈ ಬಗ್ಗೆ ಮಂಡ್ಯ ಸಂಸದರಿಗೆ ಆತಂಕ ಇರಬೇಕು. ಅವರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕುಮಾರ ಸ್ವಾಮಿ ಮಾತನಾಡಿರುವುದು ಸರಿಯಲ್ಲ. ಕುಮಾರಸ್ವಾಮಿ ಅವರು ಈಗಾಗಲೇ ತಮ್ಮ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ. ಅವರ ಮಾತುಗಳು ತೂಕ ಕಳೆದುಕೊಂಡಿವೆ. ಅವರ ರಾಜಕೀಯ ನೆಲೆ ದಿನೆದಿನೇ ಕಳೆದುಕೊಳ್ಳುತ್ತಿದೆ ಎಂದರು.

ಹೆಚ್ಡಿಕೆಗೆ ಹತಾಶಾ ಮನೋಭಾವವಿದೆ. ಮಂಡ್ಯದಲ್ಲಿ ಅವರ ಮಗನನ್ನು ಸೋಲಿಸಿದ್ದಾರೆ. ಉತ್ತರ ಕರ್ನಾಟದಕಲ್ಲಿ ಜಿಡಿಎಸ್ ಗೆ  ನೆಲೆ ಇಲ್ಲ. ಅದ್ರಿಂದ ಅವರು ಮಂಡ್ಯ ಬಿಡಲು ರೆಡಿ ಇಲ್ಲ‌ ಹೀಗಾಗಿ ಏನೆನೋ ಮಾತನಾಡುತ್ತಿದ್ದಾರೆ‌‌ ಎಂದು ಲೇವಡಿ ಮಾಡಿದರು.

click me!