Karnataka Politics: ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ: ಸಿಎಂ ಬೊಮ್ಮಾಯಿ

Published : Apr 23, 2022, 05:56 AM IST
Karnataka Politics: ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ: ಸಿಎಂ ಬೊಮ್ಮಾಯಿ

ಸಾರಾಂಶ

*   ಕಲಬುರಗಿಯಲ್ಲಿ ಬಿಜೆಪಿ ಕಾರ್ಯ​ಕ​ರ್ತರ ಸಭೆ​ಯಲ್ಲಿ ಸಿಎಂ ವ್ಯಂಗ್ಯ *  ಅಧಿ​ಕಾರ ಇದ್ದಾಗ ಕಬ್ಬಿನಂಗೆ, ಇಲ್ದಾಗ ಹತ್ತಿ ಕಟ್ಟಿಗೆಯಂತಾ​ಗ್ತಾ​ರ *  ಕಾಂಗ್ರೆಸ್‌ ಮುಳುಗುವ ಹಡಗು  

ಕಲಬುರಗಿ(ಏ.23):  ದೇಶದಲ್ಲಿ 70 ವರ್ಷಗಳ ಕಾಲ ಆಡಳಿತ ನಡೆಸಿ, 2ಜಿ, ಕಾಮನ್ವೆಲ್ತ್‌ ಗೇಮ್‌ ಸೇರಿ ಹಲವು ಹಗರಣಗಳಿಗೆ ಸಾಕ್ಷಿ​ಯಾದ ಕಾಂಗ್ರೆಸ್‌(Congress) ಪಕ್ಷ ಭ್ರಷ್ಟಾಚಾರದ ಗಂಗೋತ್ರಿ. ಇವರೊಂಥರಾ ಹತ್ತಿ ಕಟ್ಟಿಗೆ ಇದ್ಹಂಗೆ, ಅಧಿಕಾರ ಇಲ್ದಾಗ ತೆಳ್ಳಗ ಇರ್ತಾರೆ, ಅಧಿಕಾರ ಬಂತಂದ್ರ ಕಬ್ಬ ಆದ್ಹಂಗ ಆಗ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basvaraj Bommai) ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಶುಕ್ರವಾರ ನಡೆದ ಬಿಜೆಪಿ(BJP) ವಿಭಾ​ಗ​ಮ​ಟ್ಟದ ಕಾರ್ಯ​ಕ​ರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸದಾಕಾಲ ಸಕಾರಾತ್ಮಕ ವಿಷಯಗಳೊಂದಿಗೆ ಸುಶಾಸನ ನೀಡುವುದಕ್ಕೆ ಹೆಸರಾಗಿದೆ. ಕಾಂಗ್ರೆಸ್‌ ನಕಾರಾತ್ಮಕ ವಿಚಾರಗಳನ್ನೇ ಸಮಾಜದಲ್ಲಿ ಬಿತ್ತುವಲ್ಲಿ ಹೆಸರುವಾಸಿ. ಅದಕ್ಕೆ ಅವರು ಒಂಥರಾ ಹತ್ತಿ ಕಟ್ಟಿಗೆ ಎಂದು ಗೇಲಿ ಮಾಡಿದರು.

ಮುಂಬರುವ ಚುನಾವಣೆಗೆ ಬಿಜೆಪಿ ಪ್ಲ್ಯಾನ್:‌ ತಿಂಗಳಾಂತ್ಯಕ್ಕೆ ಪ್ರಚಾರ ಸಮಿತಿ ರಚನೆ

ಕಾಂಗ್ರೆಸ್‌ನ ರಾಜ್ಯ ಮುಖಂಡರಿಗೆ ಹಗಲು ಗನಸು ಕಾಣುವ ಚಟ ಬಿದ್ದಿದೆ. ಮು​ಖ್ಯ​ಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ(Siddaramaiah) ಕೊನೇ ಕನಸು ಕಾಣುತ್ತಿದ್ದರೆ, ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌(DK Shivakumar) ಮೊದಲ ಸಲ ಕನಸು ಕಾಣುತ್ತಿದ್ದಾರೆ. ಆದರೆ, ಆ ಕನಸು ಈಡೇ​ರು​ವು​ದಿಲ್ಲ. ರಾಜ್ಯ ಕಾಂಗ್ರೆಸ್‌ಗೆ ಚೇತರಿಕೆ ನೀಡಲು ಎಐಸಿಸಿ ಇಲ್ಲಿಗೆ ಸುನಿಲ್‌ ಎಂಬುವ​ರನ್ನು ಕಳುಹಿಸಿಕೊಟ್ಟಿದೆಯಂತೆ. ಸುನಿಲ್‌ ಅದೇನು ರಾಜ​ಕೀಯ ತಂತ್ರ​ಗಾ​ರಿಕೆ ಹೆಣೆ​ಯು​ತ್ತಾರೋ, ಪಕ್ಷ​ಕ್ಕೆ ಅದೇನು ಪುನ​ಶ್ಚೇ​ತನ ನೀಡು​ತ್ತಾ​ರೋ ನೋಡೋ​ಣ ಎಂದ​ರು.

ದೇಶದಲ್ಲಿ 70 ವರ್ಷಗಳ ಕಾಲ ಆಡಳಿತ ನಡೆಸಿ, 2ಜಿ, ಕಾಮನ್ವೆಲ್ತ್‌ ಗೇಮ್‌ ಸೇರಿ ಹಲವು ಹಗರಣಗಳಿಗೆ ಸಾಕ್ಷಿ​ಯಾದ ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರದ(Corruption) ಗಂಗೋತ್ರಿ. ಕಾಂಗ್ರೆಸ್‌ ಮುಳುಗುವ ಹಡಗು. ಅವ​ರು ನಿಂತ ನೆಲ ಸರಿಯುತ್ತಿದ್ದರೂ ಅದರ ಪರಿಜ್ಞಾನ ಇಲ್ಲದೆ ಅನ್ಯರತ್ತ ಬೆರಳು ತೋರಿಸಿ ಟೀಕಿಸುತ್ತಾರೆ. ಮತೀಯ ಗಲಭೆಗೆ ಕುಮ್ಮಕ್ಕು ನೀಡಿ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಕಾಂಗ್ರೆಸ್‌ ಅಸ್ಥಿಪಂಜರದಲ್ಲಿ ಎಷ್ಟುಹಗರಣಗಳಿವೆ ಎಂದು ಹುಡುಕಬೇಕಾಗುತ್ತದೆ. ದೇಶದಿಂದ ಕಾಂಗ್ರೆಸ್‌ ದಿನ ಕಳೆದಂತೆ ನಶಿಸಿ ಹೋಗುತ್ತಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್‌ ಪಕ್ಷ ವಿನಾಶದ ಹಂತಕ್ಕೆ ಬಂದು ನಿಂತಿದೆ ಎಂದರು.

Karnataka Politics: ಮೋದಿ, ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಪಿಎಸ್‌ಐ ಕೇಸಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: 

ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕರಣಕ್ಕೆ (PSI Recruitment Scam) ಸಂಬಂಧಪಟ್ಟಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಅವರಾರ‍ಯರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ನೇಮಕಾತಿಯಂತಹ ಸೂಕ್ಷ್ಮ ವಿಚಾ​ರಗಳಲ್ಲಿ ನಿ​ಷ್ಪಕ್ಷಪಾತವಾಗಿ ಸರ್ಕಾರ ತನಿಖೆ ನಡೆಸುವ ಉದ್ದೇಶದೊಂದಿಗೆ ಇದನ್ನು ಸಿಐಡಿಗೆ ಒಪ್ಪಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪ್ರಕರಣದಲ್ಲಿ ಪ್ರಶ್ನೆ, ಉತ್ತರಗಳಲ್ಲಿ ವ್ಯತ್ಯಾಸ ಕಂಡ ತಕ್ಷಣವೇ ಸಿಐಡಿ (CID) ತನಿಖೆಗೆ ಒಪ್ಪಿಸಿದ್ದೇವೆ. ತನಿಖೆ ಸಾಗಿದೆ, ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲ್‌ ಗನ್‌ಮ್ಯಾನ್‌ ಸೇರಿದಂತೆ ಹಲವರ ಬಂಧನವಾಗಿದೆ. 

ಹಗರಣದಲ್ಲಿ ಹೆಸರು ಕೇಳಿ ಬಂದಿರುವ ದಿವ್ಯಾ ಹಾಗರಗಿ ಪಕ್ಷದ ನಾಯಕಿಯಲ್ಲ, ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ಮೊದಲಿಗೇ ಅವರ ಶಿಕ್ಷಣ ಸಂಸ್ಥೆ ಮೇಲೆಯೇ ದಾಳಿ ನಡೆದಿದೆ ಎಂದರು. ಪಿಎಸ್‌ಐ ಹುದ್ದೆಗಳ ಮರು ಪರೀಕ್ಷೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆ ಸಾಗಿದೆ. ವರದಿ ಬರಲಿ, ಅದನ್ನಾಧರಿಸಿ ಮುಂದಿನ ನಿರ್ಧಾರ ಸರ್ಕಾರ ಕೈಗೊಳ್ಳಲಿದೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ