ಅಭಿವೃದ್ಧಿ ಮಾಡೋದು ತಾಕತ್ತು, ಬರಿ ಬಾಯಿ ಮಾತಲ್ಲಿ ಮಾತಾಡೋದಲ್ಲ: ಸಿದ್ದು ವಿರುದ್ಧ ಸಿಎಂ ವಾಗ್ದಾಳಿ

By Kannadaprabha News  |  First Published Oct 22, 2022, 11:30 PM IST

ಕುಡಿಯುವ ನೀರು ಕೊಡುವ ತಾಕತ್ತೂ ಕೂಡ ಹಿಂದಿನ ಸರ್ಕಾರಕ್ಕೆ ಇರಲಿಲ್ಲ‌. ತಾಕತ್ ಬಗ್ಗೆ ಮಾತಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಎಂ ಕಿಡಿಕಾರಿದ ಸಿಎಂ ಬೊಮ್ಮಾಯಿ 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಅ.22):  ಗೂಳಿಹಟ್ಟಿ ಶೇಖರ್‌ರಿಂದ ಹೊಸದುರ್ಗಕ್ಕೆ ಅಭಿವೃದ್ಧಿಯ ಹೊಸ ಪರ್ವ ಶುರುವಾಗಿದೆ. ಇಡೀ  ಕ್ಷೇತ್ರಕ್ಕೆ‌ ಬೇಕಾಗುವ ಪ್ರತಿಯೊಂದು ಕೆಲಸವನ್ನು ಹಠ ಬಿಡದೇ ಬಂದು ಮಾಡಿಸಿದ ಶಾಸಕ. ಸರಿಯಾದ ಆಯ್ಕೆ ಆದರೆ ಸಾವಿರಾರು ಜನರ ಬದುಕಿಲ್ಲಿ ಬದಲಾವಣೆ. ಹೊಸದುರ್ಗದ ಶಾಸಕ ಗೂಳಿಹಟ್ಟಿ ಶೇಖರ್ ಉದಾಹರಣೆ. ಗೂಳಿಯ ಸ್ಪೀಡ್‌ನಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಕೆಲಸ. ಹೊಸದುರ್ಗ ಅಭಿವೃದ್ಧಿ ಮಾಡುವವರು ಹಿಂದೆ ಬಂದಿರಲಿಲ್ಲ ಅಂತ ಸಿಎಂ ಬಸವರಾಜ ಬೊಮ್ಮಾಯಿ ಗೂಳಿಹಟ್ಟಿ ಶೇಖರ್‌ರ ಗುಣಗಾನ‌ ಮಾಡಿದ್ದಾರೆ. 

Tap to resize

Latest Videos

ಇಂದು(ಶನಿವಾರ) ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣಕ್ಕೆ‌ ಅಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಹೊಸದುರ್ಗ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಹಲವು ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ, ಆರ್‌ಎಸ್‌ಎಸ್‌ ಜನರಲ್ಲಿ ಕೋಮುದ್ವೇಷ ಹರಡುತ್ತಿದೆ: ರಾಹುಲ್‌ ಗಾಂಧಿ

ಕುಡಿಯುವ ನೀರು ಕೊಡುವ ತಾಕತ್ತೂ ಕೂಡ ಹಿಂದಿನ ಸರ್ಕಾರಕ್ಕೆ ಇರಲಿಲ್ಲ‌. ತಾಕತ್ ಬಗ್ಗೆ ಮಾತಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಎಂ ಕಿಡಿಕಾರಿದರು. ಕುಡಿಯುವ ನೀರು, ಮನೆ, ರಸ್ತೆಯ ಯೋಜನೆ ಕೊಡಬೇಕು. ರಾಜ್ಯ ಅಭಿವೃದ್ಧಿ ಮಾಡುವುದು ತಾಕತ್ತು ಎಂದು ಗುಡುಗಿದರು. ಬರೀ ಬಾಯಿ ಮಾತಲ್ಲಿ ತಾಕತ್ತು ತೋರಿಸುವವರು ಇದ್ದಾರೆ ಎಂದು ಪರೋಕ್ಷವಾಗಿ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.

ಹೊಸದುರ್ಗದ ಗೂಳಿಹಟ್ಟಿ ಶೇಖರ್ ಜನೋಪಯೋಗಿ ಶಾಸಕ. ಜನಪ್ರಿಯ ಶಾಸಕರು ಬಹಳ ಜನರಿದ್ದಾರೆ, ಶೇಖರ್ ಜನೋಪಯೋಗಿ ಶಾಸಕ. ವಾಣಿ ವಿಲಾಸ ಡ್ಯಾಂಗೆ ನೀರು ತರುವಲ್ಲಿ ಯಶಸ್ವಿಯಾಗಿದ್ದೇವೆ. ಒಂದು ಟಿಎಂಸಿ ಕುಡಿಯುವ ನೀರಿಗೆ ಯೋಜನೆ ರೂಪಿಸಲಾಗಿದೆ. ಡ್ರಿಪ್ ಯೋಜನೆ, ಕೆರೆ ತುಂಬಿಸುವ ಯೋಜನೆ ರೂಪಿಸಲಾಗಿದೆ. ಚಿತ್ರದುರ್ಗ ಹೊಸದುರ್ಗ ಭಾಗದ ರೈತರಿಗೆ ಬೆಳೆಹಾನಿ ಪರಿಹಾರವಾಗಿ 105 ಕೋಟಿ ಹಣ ಬಿಡುಗಡೆ. ಮನೆ ಹಾನಿಗೆ 405 ಕೋಟಿ ಪರಿಹಾರ ಹಣ ಮಂಜೂರು ಮಾಡಲಾಗಿದೆ. ಹಿಂದಿನ ಸರ್ಕಾರದಲ್ಲಿ ಸಂಧ್ಯಾ ಸುರಕ್ಷಾಕ್ಕೂ ಲಂಚ ಕೊಡಬೇಕಿತ್ತು. ಈಗ‌ ನಮ್ಮ ಸರ್ಕಾರದಲ್ಲಿ ನೇರ ಅಕೌಂಟಿಗೆ ಹಣ. ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ ತಪ್ಪಿಸಿದ್ದೇವೆ. ನವೆಂಬರ್ ನಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿ ಮಾಡುತ್ತೇವೆ. ಪ್ರತಿ ಗ್ರಾಮಗಳ 2 ಯುವಕ ಸಂಘಕ್ಕೆ ಐದು ಲಕ್ಷ ಮಂಜೂರು ಯೋಜನೆ ಇದಾಗಿದೆ ಅಂತ ತಿಳಿಸಿದ್ದಾರೆ. 

ಸಿಎಂ, ಕೃಷಿ ಸಚಿವರ ಜಿಲ್ಲೆಯಲ್ಲೇ 112 ರೈತರ ಆತ್ಮಹತ್ಯೆ; ಗುಂಡೂರಾವ್ ಗರಂ

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಸಾಮಾಜಿಕ ನ್ಯಾಯ ಕೇವಲ ಭಾಷಣದಲ್ಲಿತ್ತು. ಸ್ವಂತಕ್ಕೆ ಬಿಟ್ಟರೆ ಬೇರೆಯವರಿಗೆ ನ್ಯಾಯ ನೀಡಿರಲಿಲ್ಲ. ಸಿದ್ದರಾಮಯ್ಯ ಗೆ ಪರೋಕ್ಷವಾಗಿ ಟೀಕಿಸಿದ ಸಿಎಂ. ಗೂಳಿಹಟ್ಟಿ ಶೇಖರ್ ಗೆ ಬೆಂಬಲಿಸಿ, ಉತ್ತಮ ಸೇವಕನನ್ನು ನೇಮಿಸಿ ಎಂದು ಸಿಎಂ ತಿಳಿಸಿದರು. 

ಗೂಳಿಹಟ್ಟಿ ಶೇಖರ್, ತಿಪ್ಪಾರೆಡ್ಡಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪರೋಕ್ಷವಾಗಿ ಹೊಸದುರ್ಗಕ್ಕೆ ಗೂಳಿಹಟ್ಟಿ ಶೇಖರ್, ಚಿತ್ರದುರ್ಗಕ್ಕೆ ಜಿ.ಹೆಚ್.ತಿಪ್ಪಾರೆಡ್ಡಿ ಅವರನ್ನೇ ಅಭ್ಯರ್ಥಿ ಯಾಗಿ ಘೋಷಿಸಿದರಾ? ಎಂಬ ಪ್ರಶ್ನೆ ಅಲ್ಲಿ ನೆರೆದಿದ್ದರಲ್ಲಿ ಮೂಡಿತು.
 

click me!