ಬೆಂಗಳೂರು (ಆ.19): ‘ನನಗೆ ಗೊತ್ತಿಲ್ಲ, ನೀವುಂಟು ಅವರುಂಟು’- ಸಚಿವ ಆನಂದ್ ಸಿಂಗ್ ಅಧಿಕಾರ ಸ್ವೀಕಾರ ಮಾಡದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ನೀಡಿದ ಪ್ರತಿಕ್ರಿಯೆ ಇದು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಹದಿನಾಲ್ಕು ದಿನ ಕಳೆದರೂ ಸಚಿವ ಆನಂದ್‌ಸಿಂಗ್ ವಿಧಾನಸೌಧದ ಕಚೇರಿ ಕೊಠಡಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿಲ್ಲ. ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದ ಸಚಿವ ಆನಂದ್ ಸಿಂಗ್ ಬಂಡಾಯದ ಹಾದಿ ಹಿಡಿದಿದ್ದರು. ಈ ಬಗ್ಗೆ ಕುರಿತ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪ್ರತಿಕಿಯೆ ನೀಡಿದರು.
ಶಮನವಾಯ್ತಾ ಆನಂದ್ ಸಿಂಗ್ ಅಸಮಾಧಾನ : ಕೊಠಡಿ ಮುಂದೆ ನಾಮಫಲಕ
ನಾಮಫಲಕ : ಆದರೆ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಳಿಕ ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದ ಸಚಿವ ಆನಂದ್ ಸಿಂಗ್ ಇದೀಗ ವಿಕಾಸಸೌಧ ಕೊಠಡಿ ಬಾಗಿಲಿಗೆ ನಾಮಫಲಕ ಅಳವಡಿಸಿಕೊಂಡಿದ್ದಾರೆ. ಇದರಿಂದ ತಮ್ಮ ಖಾತೆ ಬಗ್ಗೆ ತೀವ್ರ ಅಸಮಾದಾನ ಹೊಂದಿದ್ದ ಸಚಿವರು ಖಾತೆ ಹಂಚಿಕೆಯಾಗಿ ಬರೋಬ್ಬರಿ 12 ದಿನಗಳ ಬಳಿಕ ಖಾತೆಗಳ ಹೆಸರೊಂದಿಗೆ ತಮ್ಮ ನಾಮಫಲಕ ಹಾಕಿಸಿಕೊಂಡಿದ್ದಾರೆ.
ಆದರೆ ಒಲ್ಲದ ಮನಸಿಂದಲೇ ನಾಮಫಲಕ ಹಾಕಿಸಿಕೊಂಡಿದ್ದಾರೆನ್ನಲಾಗಿದ್ದು, ತಮ್ಮ ಖಾತೆ ಬದಲಾವಣೆಗೆ ಪಟ್ಟು ಮುಂದುವರಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ರಚನೆ ಆಗಿ ಹನ್ನೆರಡು ದಿನಗಳು ಕಳೆದರೂ ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದ ಆನಂದ್ ಸಿಂಗ್ ವಿಧಾನಸೌಧಕ್ಕೆ ಕಾಲಿಟ್ಟಿರಲಿಲ್ಲ.