Karnataka Politics: ನನ್ನ ಮೌನದಿಂದ ಸಿದ್ದು, ಎಚ್‌ಡಿಕೆಗೆ ತೊಂದರೆ: ಬೊಮ್ಮಾಯಿ

By Girish Goudar  |  First Published Apr 13, 2022, 5:56 AM IST

*  ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ, ಅವರಂತೆ ಒಲೈಕೆ ರಾಜಕಾರಣ ಮಾಡಿಲ್ಲ
*  ಸಂತೋಷ್‌ ಆತ್ಮಹತ್ಯೆ ಬಗ್ಗೆ ಸಮಗ್ರ, ಪಾರದರ್ಶಕ ತನಿಖೆ
*  ಕೋವಿಡ್‌ 4ನೇ ಅಲೆಗೆ ಮುಂಜಾಗ್ರತೆ
 


ಉಡುಪಿ(ಏ.13):  ನನ್ನ ಮೌನದಿಂದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ(Siddaramaiah) ಮತ್ತು ಕುಮಾರಸ್ವಾಮಿ(HD Kumaraswamy) ಅವರಿಗೆ ತೊಂದರೆಯಾಗಿದೆ, ಆದರೆ ಅವರಿಗೆ ತೊಂದರೆಯಾದರೆ ನಾನೇನೂ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೌನವಾಗಿದ್ದಾರೆ, ನಾಲಿಗೆ ಕಳೆದುಕೊಂಡಿದ್ದಾರೆ ಎಂಬ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಟೀಕೆಗೆ ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಬೊಮ್ಮಯಿ, ಅವರಿಬ್ಬರೂ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮಾತಿಗೆ ಬೆಲೆ ಬರಬೇಕಾದರೆ ಭಾಷೆ ಬಹಳ ಮುಖ್ಯ ಎಂದರು.

ಓಲೈಕೆ ರಾಜಕಾರಣ ಮಾಡಿಲ್ಲ: 

Tap to resize

Latest Videos

ನಾವು ಸರ್ಕಾರದಲ್ಲಿರುವವರು. ಕೆಲಸ ಮಾಡುವ ಸ್ಥಳದಲ್ಲಿ ಇದ್ದೇವೆ, ಯಾವ ಯಾವ ಸಂದರ್ಭ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಂಡಿದ್ದೇವೆ. ಶಿವಮೊಗ್ಗ ಘಟನೆಯಾದಾಗ ಕ್ರಮ ತೆಗೆದುಕೊಂಡಿದ್ದೇವೆ. ಧಾರವಾಡ ಘಟನೆ ಆದಾಗ ಕ್ರಮ ತೆಗೆದುಕೊಂಡಿದ್ದೇವೆ. ಕೋಲಾರ ಘಟನೆ ಸಂದರ್ಭ ಕ್ರಮ ತೆಗೆದುಕೊಂಡಿದ್ದೇವೆ. ಅವರಂತೆ ಓಲೈಕೆ ರಾಜಕಾರಣ ನಾನು ಮಾಡುತ್ತಿಲ್ಲ, ಮಾಡುವುದೂ ಇಲ್ಲ ಎಂದರು.

ಬೊಮ್ಮಾಯಿ ಸರ್ಕಾರಕ್ಕೆ ಸೂಸೈಡ್‌ ಇಕ್ಕಟ್ಟು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ

ಕೋವಿಡ್‌ 4ನೇ ಅಲೆಗೆ ಮುಂಜಾಗ್ರತೆ

ಕೋವಿಡ್‌ 4ನೇ ಅಲೆಯ(Covid 4th Wave) ಮಾರ್ಗಸೂಚಿ ಹೊರಡಿಸಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಈ ಹಿಂದೆ ಕೊರೋನಾ 1 ,2, 3 ಅಲೆ ಬಂದಾಗ ಅದನ್ನು ಎದುರಿಸಿದ ಅನುಭವ ನಮ್ಮ ಜೊತೆಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮ ಕೈಗೊಳ್ಳುತ್ತಿದ್ದೇವೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ(Department of Health) ಮಾರ್ಗಸೂಚಿ(Guidelines) ಹೊರಡಿಸಲಾಗಿದೆ. ಈ ಮಾರ್ಗಸೂಚಿ ಪಾಲನೆ ಆದರೆ ಯಾವುದೇ ಸಂದರ್ಭವನ್ನು ಎದುರಿಸಬಹುದು. ಯಾವುದೇ ಆತಂಕ ಇಲ್ಲ ಎಂದರು.

ಸಂತೋಷ್‌ ಆತ್ಮಹತ್ಯೆ ಬಗ್ಗೆ ಸಮಗ್ರ, ಪಾರದರ್ಶಕ ತನಿಖೆ:

ಮಂಗಳೂರು: ಸಚಿವ ಈಶ್ವರಪ್ಪ(KS Eshswarappa) ವಿರುದ್ಧ ಗುತ್ತಿಗೆ ಕೆಲಸಗಳಲ್ಲಿ ಶೇ.40 ಕಮಿಷನ್‌ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌(Santosh Patil) ಉಡುಪಿಯಲ್ಲಿ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆಗೆ ಸಂಬಂಧಿಸಿ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲದಂತೆ ಸಮಗ್ರ, ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಣ್ಣು ಉಳಿಸಿ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಇದರ ಬಗ್ಗೆ ಸಂಪೂರ್ಣ ವಿಚಾರಣೆ ಮಾಡುತ್ತೇವೆ. ಸಂತೋಷ ಪಾಟೀಲ್‌ರ ದೇಹ ಉಡುಪಿಯ ಲಾಡ್ಜ್‌ನಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಖುದ್ದು ಎಸ್ಪಿ ಹೋಗಿದ್ದಾರೆ. ಈಗ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಮಂಗಳೂರಿನಿಂದ ಎಸ್‌ಎಫ್‌ಎಲ್‌ ಅಧಿಕಾರಿಗಳನ್ನು ತೆರಳುವಂತೆ ಸೂಚಿಸಿದ್ದೇನೆ. ಪ್ರಾಥಮಿಕ ವರದಿ ಬಂದ ಬಳಿಕ ಮುಂದೆ ಏನು ಎಂದು ನಿರ್ಧರಿಸುತ್ತೇವೆ. ಡೆತ್‌ನೋಟ್‌ನ ಸತ್ಯಾಸತ್ಯತೆ ಸೇರಿದಂತೆ ಎಲ್ಲವನ್ನೂ ತನಿಖೆಗೆ ಒಳಪಡಿಸುತ್ತೇವೆ ಎಂದು ಮಂಗಳೂರಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈಶ್ವರಪ್ಪ ಹಾಗೂ ಸಿಎಂ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಹಿಂದೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಸಿದ್ದರಾಮಯ್ಯ ರಾಜೀನಾಮೆ ಏನಾದರೂ ಕೊಟ್ಟಿದ್ದಾರಾ? ಘಟನೆ ಕುರಿತಂತೆ ಈಶ್ವರಪ್ಪ ಮೈಸೂರಿನಲ್ಲಿದ್ದಾರೆ, ಅವರನ್ನು ನಾನೇ ವಿಚಾರಿಸುತ್ತೇನೆ. ಯಾಕಾಗಿ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡರು ಎಂಬುದು ತನಿಖೆಯಿಂದ ಗೊತ್ತಾಗಬೇಕು. ತನ್ನ ವಿರುದ್ಧದ ಆರೋಪಕ್ಕೆ ಕೋರ್ಚ್‌ನಲ್ಲಿ ಮಾನನಷ್ಟ ಮೊಕದ್ದಮೆ ಹಾಕಿರುವುದಾಗಿ ಈಶ್ವರಪ್ಪ ವಿಧಾನಸೌದ ಅಧಿವೇಶನ ವೇಳೆ ನನ್ನಲ್ಲಿ ಹೇಳಿದ್ದರು. ಈಶ್ವರಪ್ಪ ಈ ಕುರಿತ ಆರೋಪ ನಿರಾಕರಿಸಿದ್ದಾರೆ. ಸಚಿವರ ವಿರುದ್ಧ ಸಂತೋಷ್‌ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದು ಬಿಟ್ಟರೆ, ಈ ಬಗ್ಗೆ ಸರ್ಕಾರಕ್ಕೆ ದೂರು ನೀಡಿಲ್ಲ, ಪ್ರತಿ ವ್ಯಕ್ತಿಯ ಬದುಕಿಗೆ ಮೌಲ್ಯ ಇದೆ. ಆತ ಆತ್ಮಹತ್ಯೆ ಯಾಕಾಗಿ ಮಾಡಿದ ಎಂಬ ಎಲ್ಲ ವಿಚಾರ ಪೊಲೀಸ್‌ ತನಿಖೆಯಲ್ಲಿ ಗೊತ್ತಾಗಲಿದೆ ಎಂದರು.
 

click me!