* ಸಂಸದ ಮುನಿಸ್ವಾಮಿ, ನಾರಾಯಣಸ್ವಾಮಿ ಫೈಟ್
* ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದಲ್ಲಿ ರಾಜಕೀಯ ಕಾದಾಟ
* ಇವರಿಬ್ಬರ ಕಿತ್ತಾಟದಿಂದ ಪುಗಸಟ್ಟೆ ಮನರಂಜನೆ
ವರದಿ ; ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ, (ಏ.12) : ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಸೈಲೆಂಟಾಗಿ ಹವಾ ಶುರುವಾಗಿದೆ. ಹೋದಲ್ಲಿ ಬಂದಲ್ಲಿ ಮೈಕ್ ಹಿಡ್ಕೊಂಡು ಎದುರಾಳಿಗಳಿಗೆ ಬೆವರು ಇಳಿಸುತ್ತಿದ್ದಾರೆ. ನಾನೆಷ್ಟು ನೀನೆಷ್ಟು ಅಂತ ಫಿಲಂ ಸ್ಟೈಲ್ ನಲ್ಲಿ ಭಾಷಣ ಮಾಡಿ ಜನರಿಗೆ ಪುಕ್ಕಟೆ ಮನರಂಜನೆ ನೀಡ್ತಿದ್ದಾರೆ. ಅದರಲ್ಲೂ ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರ ಅಂತೂ ಒಂದು ಕೈ ಮೇಲು, ಈ ಕುರಿತ ವರದಿ ಇಲ್ಲಿದೆ ನೋಡಿ....
ಏಯ್ ನಿನ್ನ ಬಂಡವಾಳ ನನಗೆ ಗೊತ್ತು ಬಿಡು ಎಂದು ಸಂಸದ ಹಾಗೂ ಶಾಸಕರ ಮಾತಿನ ಗುದ್ದಾಟ. ನೀನು ಮಾಡಿರೋ ಅಭಿವೃದ್ಧಿ ನನಗೂ ಗೊತ್ತು ಬಿಡು ಎಂದು ಏಟಿಗೆ ಎದುರೇಟು. ನೆರದಿದ್ದವರಿಗೆ ಇವರಿಬ್ಬರ ಕಿತ್ತಾಟದಿಂದ ಪುಗಸಟ್ಟೆ ಮನರಂಜನೆ. ಅಂದಹಾಗೆ ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಇವರು ಕೋಲಾರ ಜಿಲ್ಲೆಯ ಸಂಸದ ಮುನಿಸ್ವಾಮಿ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ.
Karnataka Politics: 'ಸ್ನಾನ ಮಾಡುವಾಗ ಮಾತ್ರ ಬಂದು ನೋಡಬೇಡಿ..ನನಗೆ ವಯಸ್ಸಾಗಿದೆ'
ಇವರುಗಳ ಪಕ್ಷ ಬೇರೆ ಬೇರೆ ಆದ್ರು ಸಹ ಮೊದಲು ಇವರಿಬ್ಬರು ಪರಸ್ಪರ ತುಂಬಾನೇ ಚೆನ್ನಾಗಿ ಇದ್ರು,ಆದ್ರೆ ಕಳೆದ ಒಂದು ವರ್ಷದಿಂದ ಅದೇನೆ ಆಯ್ತೋ ಗೊತ್ತಿಲ್ಲ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡು ತಿರುಗಾಡ್ತಿದ್ದಾರೆ. ಅದ್ರಲ್ಲೂ ಇವರಿಬ್ಬರು ಯಾವುದಾದ್ರು ವೇದಿಕೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿ ಕೈಗೆ ಮೈಕ್ ಸಿಕ್ಕಿದ್ರೆ ಸಾಕು ಒಬ್ಬರ ಮೆಲ್ಲೊಬ್ಬರು ಆರೋಪ ಮಾಡ್ಕೊಂಡು ನೆರೆದಿದ್ದವರಿಗೆ ಪುಕ್ಕಟೆ ಮನರಂಜನೆ ನೀಡ್ತಾರೆ.
ಬಂಗಾರಪೇಟೆ ನಗರಸಭೆ ಕಚೇರಿ ಉದ್ಘಾಟನೆ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ಘಟನೆ. ಇವರಿಬ್ಬರ ಮಾತಿನ ಚಕಮಕಿ ಕಂಡು ವೇದಿಕೆ ಮೇಲಿದ್ದ ಸಚಿವರುಗಳಾದ ಮುನಿರತ್ನ ಹಾಗೂ ಎಂಟಿಬಿ ನಾಗರಾಜ್ ಸಹ ಸೈಲೆಂಟಾಗಿ ಜಾಗ ಖಾಲಿ ಮಾಡಿದ್ರು. ಇನ್ನು ಹೇಗಾದ್ರು ಮಾಡಿ ಈ ಬಾರಿ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಯನ್ನು ಸೋಲಿನ ರುಚಿ ತೋರಿಸಬೇಕು ಬಿಜೆಪಿ ಬಾವುಟ ಹಾರಿಸಲೇ ಬೇಕು ಎಂದು ಸಂಸದ ಮುನಿಸ್ವಾಮಿ ಪಣ ತೊಟ್ಟು ಸಿದ್ಧರಾಗಿದ್ದಾರೆ.
ಶಾಸಕ ಎಸ್.ಎನ್ ನಾರಾಯಣಸ್ವಾಮಿ ವಿರುದ್ಧ ಹಗರಣದ ಆರೋಪ ಮಾಡುವುದರ ಜೊತೆಗೆ ಅವರ ಜೊತೆಯಲ್ಲಿದ್ದ ಪ್ರಮುಖ ನಾಯಕರನನ್ನು ಜೊತೆಗೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಬಂಗಾರಪೇಟೆಯ ಪ್ರಮುಖ ನಾಯಕರು ಆಗಿದ್ದ ಚಂದ್ರಾರೆಡ್ಡಿ ಅವರನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಸಂಸದ ಮುನಿಸ್ವಾಮಿ ಯಶಸ್ವಿಯಾಗಿದ್ದು ಶಾಸಕ ಎಸ್.ಎನ್ ನಾರಾಯಣಸ್ವಾಮಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಅಷ್ಟು ಸುಲಭವಾಗಿಲ್ಲ ಎಂದು ಸಂದೇಶ ನೀಡಿದ್ದಾರೆ.
ಇದರರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಗೆ ಸೇರ್ಪಡೆ ಆಗಿರುವ ಕೆಲವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನಮಾನ ನೀಡುವುದಾಗಿ ಕೋಲಾರ ಉಸ್ತುವಾರಿ ಸಚಿವರಾದ ಮುನಿರತ್ನ ಸಹ ಭರವಸೆ ನೀಡಿದ್ದು,ಕೋಲಾರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವರು ಆಗಿರುವ ವರ್ತೂರು ಪ್ರಕಾಶ್ ರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ತಿದ್ದು ಆದಷ್ಟು ಬೇಗ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೊತೆ ಮಾತನಾಡಿ ಮುಹೂರ್ತ ಫಿಕ್ಸ್ ಮಾಡುವುದಾಗಿ ತಿಳಿಸಿದ್ದಾರೆ.
ಒಟ್ನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕೇಸರೆರೇಚಾಟ ಶುರುವಾಗಿದೆ.ಹಳ್ಳಿ ಹಳ್ಳಿಗಳಲ್ಲಿ ಯಾರು ಗೆಲ್ಲುತ್ತಾರೆ,ಸೋಲುತ್ತಾರೆ ಅಂತ ಬಿಸಿ ಬಿಸಿ ಚರ್ಚೆಗಳಾಗುತ್ತಿದ್ದು,ಹಾಲಿ,ಮಾಜಿ ಶಾಸಕರು ಸ್ಥಳೀಯ ನಾಯಕರನ್ನು ತಮ್ಮತ್ತ ಸೆಳೆಯುವಲ್ಲಿ ನಿರತರಾಗಿದ್ದಾರೆ.