ಅರ್ಜಿ ಹಾಕದವರಿಗೂ ಕೆಲ್ಸ ಕೊಟ್ಟಿದ್ದ ಕಾಂಗ್ರೆಸ್‌: ಸಿಎಂ ಬೊಮ್ಮಾಯಿ

By Govindaraj S  |  First Published Oct 20, 2022, 9:14 AM IST

ಅರ್ಜಿ ಹಾಕದಿದ್ದರೂ ನೌಕರಿ ಕೊಡುವ ವ್ಯವಸ್ಥೆ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿತ್ತು. ಅಂದಿನ ಸರ್ಕಾರ ನರೇಗಾದ ದುಡ್ಡನ್ನು ಬಿಡಲಿಲ್ಲ. ಬಡವರ ದುಡ್ಡನ್ನೂ ಬಿಡಲಿಲ್ಲ. 


ಯಾದಗಿರಿ/ ಕಲಬುರಗಿ (ಅ.20): ಅರ್ಜಿ ಹಾಕದಿದ್ದರೂ ನೌಕರಿ ಕೊಡುವ ವ್ಯವಸ್ಥೆ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿತ್ತು. ಅಂದಿನ ಸರ್ಕಾರ ನರೇಗಾದ ದುಡ್ಡನ್ನು ಬಿಡಲಿಲ್ಲ. ಬಡವರ ದುಡ್ಡನ್ನೂ ಬಿಡಲಿಲ್ಲ. ಅಷ್ಟೇಕೆ, ಎಸ್ಸಿ/ಎಸ್ಟಿ ಹಾಸ್ಟೆಲ್‌ಗಳಿಗೆ ನೀಡುವ ದಿಂಬು, ಚಾದರಗಳಲ್ಲಿಯೂ ಹಣ ಹೊಡೆದರು. ಇಷ್ಟಾಗಿಯೂ ಈಗ ನಮ್ಮ ವಿರುದ್ಧ ಆರೋಪ ಮಾಡಲು ಕಾಂಗ್ರೆಸ್‌ನವರಿಗೆ ನಾಚಿಕೆಯಾಗುವುದಿಲ್ಲವೇ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ.

ಬುಧವಾರ ಹುಣಸಗಿ ಹಾಗೂ ಮಹಾಗಾಂವ್‌ಗಳಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿಎಂ, ‘ನೀವು ಎಸ್ಸಿ/ಎಸ್ಟಿಹಾಸ್ಟೆಲ್‌ಗಳಿಗೆ ನೀಡುವ ದಿಂಬು, ಚಾದರಗಳಲ್ಲಿಯೂ ಹಣ ಹೊಡೆದಿರಿ. ಬೆಂಗಳೂರು ನೆಲದಲ್ಲಿ ದುಡ್ಡು ಮಾಡಿದ್ದೀರಿ, ನೆಲದಲ್ಲಿ ದುಡ್ಡು ಹೊಡೆದಿದ್ದೀರಿ, ನೀರಾವರಿ ನೀರಿನಲ್ಲಿ ದುಡ್ಡು ಹೊಡೆದಿದ್ದೀರಿ. ಬಂಧುಗಳಿಗ ನೌಕರಿ ಕೊಡುವಲ್ಲಿ ದುಡ್ಡು ಹೊಡೆದಿದ್ದೀರಿ. ಇದೇ ಕಲಬುರಗಿಯಲ್ಲಿ ಪೊಲೀಸ್‌ ನೌಕರಿ ಕೊಡುವಾಗ ದುಡ್ಡು ಹೊಡೆದಿದ್ದೀರಿ. ಈಗಲೂ ಪಿಎಸೈ ನೌಕರಿ ಕೊಡುವಲ್ಲಿ ದುಡ್ಡು ಹೊಡೆದವರು ನಿಮ್ಮ ಪಕ್ಷದವರೇ’ ಎಂದು ಕಾಂಗ್ರೆಸ್‌ ವಿರುದ್ಧ ವಾಕ್‌ ಪ್ರಹಾರ ನಡೆಸಿದರು.

Tap to resize

Latest Videos

ಪಿಎಸೈ ಅಕ್ರಮದಲ್ಲಿ ನಿಮ್ಮ ಪಕ್ಷದವರೇ ರೂವಾರಿಗಳು: ಕಾಂಗ್ರೆಸ್‌ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

ಖರ್ಗೆ ವಿರುದ್ಧ ಪರೋಕ್ಷ ವಾಗ್ದಾಳಿ: ಈ ಭಾಗದ ಜನರ ಋುಣದಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ. ಇಷ್ಟು ವರ್ಷ ರಾಜಕೀಯ ಮಾಡಿದ ಈ ಭಾಗದ ಕಾಂಗ್ರೆಸ್‌ನ ಮಹಾನ್‌ ನಾಯಕರು ಜನರ ಮಧ್ಯೆ ಬಹಳ ದೊಡ್ಡ ನಾಯಕರು ಎಂದೆನಿಸಿಕೊಂಡಿದ್ದಾರೆ. ಈ ಭಾಗದ ಜನರ ಋುಣದಿಂದ ಮಂತ್ರಿಗಳು ಹಾಗೂ ದೊಡ್ಡ ನಾಯಕರು ಆಗಿದ್ದಾರೆ. ಆದರವರು ಕಲ್ಯಾಣ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ನಾಲ್ಕೈದು ದಶಕಗಳ ಕಾಲ ಹೆಗಲು ಮೇಲೆ ಅವರನ್ನು ಮೆರೆಸಿದ್ದೀರಿ, ಅವರ ಮೇಲೆ ನೀವು ವಿಶ್ವಾಸ ಇಟ್ಟರೂ ನೀವು ಹಿಂದುಳಿದವರೇ ಆಗಿರುವುದು ಅಚ್ಚರಿ ಮೂಡಿಸಿದೆ ಎಂದು ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹರಿಹಾಯ್ದರು.

ಕಲ್ಯಾಣ ಕರ್ನಾಟಕಕ್ಕೆ ಅನುದಾನ ನೀಡಿದ್ದು ನಾವು: ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಬೇರ್ಪಡಿಸಿದಾಗ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ 371 (ಜೆ) ಮೀಸಲಾತಿಯನ್ನು ನೀಡಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗೆ ಎದುರಾಯಿತು. ಕಾಂಗ್ರೆಸ್‌ ಕೇವಲ 371 (ಜೆ) ಕಲ್ಪಿಸಿತೇ ಹೊರತು ಯಾವುದೇ ಅನುದಾನ ನೀಡಲಿಲ್ಲ. ಇದರಿಂದ ಈ ಭಾಗ ಅಭಿವೃದ್ಧಿಯಿಂದ ವಂಚಿತವಾಯಿತು. ಬಿಎಸ್‌ವೈ ಅವರು ಪ್ರಥಮ ಬಾರಿಗೆ 1,500 ಕೋಟಿ ರೂ.ಗಳನ್ನು ಕೆಕೆಆರ್‌ಡಿಬಿಗೆ ನೀಡಿದರು. ಇದರಿಂದ ಕೊಂಚ ಜೀವ ಬಂದಾಯಿತು. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ 3,000 ಕೋಟಿ ರು.ಗಳನ್ನು ಮಂಜೂರು ಮಾಡಲಾಗಿದೆ ಎಂದರು.

ಕೆಂಪೇಗೌಡ ಥೀಮ್‌ ಪಾರ್ಕ್‌ಗೆ ನಾಳೆಯಿಂದ ಮಣ್ಣು ಸಂಗ್ರಹ: ಸಚಿವ ಅಶ್ವತ್ಥ್‌ ನಾರಾಯಣ

ರಾಹುಲ್‌ ಪ್ರಧಾನಿಯಲ್ಲ ಎಂಬುದು ಗೊತ್ತು: ಇದೇ ವೇಳೆ, ರಾಹುಲ್‌ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿಎಂ, ಕರ್ನಾಟಕದಲ್ಲಿ ನೌಕರಿ ಸಿಗಬೇಕಾದರೆ ದುಡ್ಡು ಕೊಟ್ಟು ನೌಕರಿ ಪಡೀತಾರೆ ಎಂದು ರಾಹುಲ್‌ ಹೇಳಿದ್ದಾರೆ. ಅವರಿಗೆ ಇಲ್ಲಿನ ಅರಿವಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ರಾಹುಲ್‌, ಅಂತವರನ್ನೇ ಹಿಂದೆ ಕಟ್ಟಿಕೊಂಡು ನಡೆಯುತ್ತಿದ್ದು, ಅವರ ಮೇಲೆ ಅವರ ಪಕ್ಷ ಕ್ರಮ ಕೈಗೊಳುತ್ತದೆಯೇ ಎಂಬುದನ್ನು ತಿಳಿಯಲು ದಾಖಲೆಗಳನ್ನು ಕೊಡುವುದಾಗಿ ಹೇಳಿದ್ದೇನೆ ಅಷ್ಟೆ. ಆದರೆ, ದಾಖಲೆಗಳನ್ನು ಕೊಡುವುದಾಗಿ ಹೇಳಿದ್ದಕ್ಕೆ ಸಿದ್ರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ. ರಾಹುಲ್‌ ಪ್ರಧಾನಿ ಅಲ್ಲ ಎಂದಿದ್ದಾರೆ. ರಾಹುಲ್‌ ಪ್ರಧಾನಮಂತ್ರಿ ಅಲ್ಲ ಅನ್ನೋದು ನನಗೆ ಗೊತ್ತಿದೆ. ‘ಸಿದ್ರಾಮಣ್ಣ, ನನಗೆ 15 ವರ್ಷಗಳ ಹಿಂದೆಯೇ ಗೊತ್ತಿದೆ, ರಾಹುಲ್‌ ಹಿಂದೆಯೂ ಏನೂ ಇಲ್ಲ, ನಾಳೆನೂ ಏನೂ ಆಗೋಲ್ಲ. ನೀವು ಅವರ ಬೆನ್ನು ಹತ್ತೀರಿಯಷ್ಟೇ’ ಎಂದು ವ್ಯಂಗ್ಯವಾಡಿದರು.

click me!