*ಹಾಲಿ 6 ಸದಸ್ಯರ ಗೆಲ್ಲಿಸುವುದರ ಜತೆಗೆ ಹೆಚ್ಚು ಸ್ಥಾನ ಗಳಿಸುವ ಹೊಣೆಗಾರಿಕೆ
*ಹಾನಗಲ್ ಉಪಚುನಾವಣೆ ಸೋಲಿನ ಕಹಿ ನೆನಪನ್ನು ಅಳಿಸಿ ಹಾಕುವ ಅವಕಾಶ
*ಹಿನ್ನಡೆಯಾದರೆ ಪಕ್ಷದೊಳಗೆ ಧಕ್ಕೆ, ಪ್ರತಿಪಕ್ಷಗಳಿಂದಲೂ ವಾಗ್ದಾಳಿ ತೀವ್ರ ಸಾಧ್ಯತೆ
ಬೆಂಗಳೂರು(ನ.10): ತವರು ಜಿಲ್ಲೆಯ ಹಾನಗಲ್ (Hangal) ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸೋಲುಂಡ ಬೆನ್ನಲ್ಲೇ ವಿಧಾನಪರಿಷತ್ತಿನ (Legislative Council) 25 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪ್ರಬಲ ಸವಾಲಿನ ರೂಪದಲ್ಲಿ ಎದುರಾಗಿದೆ. ಪರಿಷತ್ತಿನ ತೆರವಾಗುತ್ತಿರುವ ಒಟ್ಟು 25 ಸ್ಥಾನಗಳ ಪೈಕಿ ಆಡಳಿತಾರೂಢ ಬಿಜೆಪಿಯ (BJP) ಆರು ಮಂದಿ ಸದಸ್ಯರೂ ಇದ್ದಾರೆ. ಅವರನ್ನು ಗೆಲ್ಲಿಸಿಕೊಂಡು ಬರುವ ಜೊತೆಗೆ ಹೆಚ್ಚುವರಿಯಾಗಿ ಸ್ಥಾನಗಳನ್ನು ಗಳಿಸುವ ಮೂಲಕ ಮೇಲ್ಮನೆಯಲ್ಲಿ (Upper House) ಪೂರ್ಣ ಬಹುಮತ ಸಾಧಿಸುವ ಅವಕಾಶವೂ ಬಿಜೆಪಿ ಎದುರಿಗೆ ಬಂದು ನಿಂತಿದೆ. ಅದನ್ನು ಸಾಕಾರಗೊಳಿಸುವಷ್ಟುಸ್ಥಾನ ಗಳಿಸಿದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಾನಗಲ್ ಸೋಲಿನ ಕಹಿ ನೆನಪನ್ನು ಅಳಿಸಿ ಹಾಕಬಹುದಾಗಿದೆ. ಜೊತೆಗೆ ಪ್ರತಿಪಕ್ಷಗಳ ಟೀಕೆಗೂ ಉತ್ತರ ನೀಡಿದಂತಾಗುತ್ತದೆ.
undefined
ವೇಳಾಪಟ್ಟಿಪ್ರಕಟಗೊಳಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ!
ಈ ಹಿನ್ನೆಲೆಯಲ್ಲಿ ಮಂಗಳವಾರ ಚುನಾವಣಾ ಆಯೋಗವು ವೇಳಾಪಟ್ಟಿಪ್ರಕಟಗೊಳಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿಗಳು ಪಕ್ಷದ ಹಿರಿಯ ನಾಯಕರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ವೇಳಾಪಟ್ಟಿಪ್ರಕಟಗೊಂಡ ಬಳಿಕ ನಡೆದ ಕೋರ್ ಕಮಿಟಿ ಸಭೆಯಲ್ಲೂ (Core Committee) ಇತರ ಹಿರಿಯ ನಾಯಕರೊಂದಿಗೆ ಅಭ್ಯರ್ಥಿಗಳ (Candidates) ಆಯ್ಕೆ ಹಾಗೂ ಗೆಲುವಿನ ತಂತ್ರದ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.
ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ!
ಬರುವ ಡಿಸೆಂಬರ್ ಎರಡನೇ ವಾರದಲ್ಲಿ ಬೆಳಗಾವಿಯಲ್ಲಿ (Belgaum) ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ (Winter Session) ನಡೆಸಲು ಈಗಾಗಲೇ ಸರ್ಕಾರ ತೀರ್ಮಾನ ಕೈಗೊಂಡಿದೆ. ಆ ಅಧಿವೇಶನದ ಮೊದಲೇ ವಿಧಾನಪರಿಷತ್ತಿನ ಚುನಾವಣೆ ನಡೆದು ಫಲಿತಾಂಶ ಹೊರಬೀಳಲಿದೆ. ಒಂದು ವೇಳೆ ಫಲಿತಾಂಶದಲ್ಲಿ (Reslut) ಬಿಜೆಪಿಯ ಸಾಧನೆ ಕಳಪೆಯಾಗಿದ್ದರೆ ಪ್ರತಿಪಕ್ಷಗಳನ್ನು (Opposition Parties) ಎದುರಿಸಲು ಕಷ್ಟವಾಗಬಹುದು.
Karnataka MLC Election: ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ತಂತ್ರ!
ಈಗಾಗಲೇ ಹಾನಗಲ್ ಸೋಲು ಹಾಗೂ ಪ್ರಮುಖ ಪ್ರತಿಪಕ್ಷ ಬಿಟ್ ಕಾಯಿನ್ ಹಗರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇಂಥ ಸಂದರ್ಭದಲ್ಲಿ ಪರಿಷತ್ ಚುನಾವಣೆಯಲ್ಲೂ ಬಿಜೆಪಿ ನಿರೀಕ್ಷಿತ ಮಟ್ಟದ ಸ್ಥಾನ ಗಳಿಸುವಲ್ಲಿ ವಿಫಲವಾದರೆ ನೇರವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನೇ ಗುರಿಯಾಗಿಸಿಕೊಂಡು ಪ್ರತಿಪಕ್ಷಗಳು ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸುವ ಸಾಧ್ಯತೆಯಿದೆ. ಜತೆಗೆ ಪಕ್ಷದಲ್ಲೂ ತಮ್ಮ ಪ್ರಭಾವಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
25 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ!
ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ (Sindagi-Hangal By-election) ಮುಗಿದ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯದ ವಿಧಾನ ಪರಿಷತ್ ಚುನಾವಣೆಗೆ (Karnataka MLC Election) ದಿನಾಂಕ ಘೋಷಣೆಯಾಗಿದೆ. ರಾಜ್ಯ ಮೇಲ್ಮನೆಯ (Karnataka Legislative Council) 25 ಸ್ಥಾನಗಳಿಗೆ ಮುಂದಿನ ತಿಂಗಳು ಡಿಸೆಂಬರ್ 10ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಪ್ರಕಟಿಸಿದೆ.
ಬಿಜೆಪಿ ಈಗ ಕಲಬೆರಕೆ ಪಕ್ಷ; ಒರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ: ಮುತಾಲಿಕ್ ಕಿಡಿ
ನವೆಂಬರ್ 16ರಂದು ಮೇಲ್ಮನೆ ಚುನಾವಣೆಗೆ (Biennial elections) ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಡಿಸೆಂಬರ್ 10 ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ರಂದು (ಮಂಗಳವಾರ) 25 ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ತೆರವಾಗುತ್ತಿರುವ 25 ಎಂಎಲ್‌ಸಿ ಸ್ಥಾನಗಳ ವಿವರ
ಬಿಜೆಪಿಯ-6
ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ-1
ಕಾಂಗ್ರೆಸ್-13.