ಜನರು ನಮಗೆ 136 ಸೀಟು ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಅದೇ ಜೆಡಿಎಸ್ 19 ಸೀಟ್ ಮಾತ್ರ ಗೆದ್ದಿದೆ. ಕುಮಾರಸ್ವಾಮಿಗೆ ಇದು ನೆನಪಿದೆಯಾ?. ಹಾಸನದಲ್ಲಿ ಇವರ ಕುಟುಂಬದವರು ಆಳ್ವಿಕೆ ಮಾಡುತ್ತಿದ್ದರು. ಈಗಹಾಸನದಲ್ಲಿ ಎಂಪಿಯಾಗಿ ಗೆದ್ದಿರುವವರು ಯಾರು? ಎಂದು ಪರೋಕ್ಷವಾಗಿ ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಸನ(ಆ.04): ಕುಮಾರಸ್ವಾಮಿಯವರೇ, ನೀವೇಷ್ಟು ದಿನ ಕೇಂದ್ರದಲ್ಲಿ ಮಂತ್ರಿಯಾಗಿರುತ್ತೀರಿ ಎನ್ನುವುದು ನಿಮಗೆ ಗೊತ್ತಿದೆಯಾ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಕಲೇಶಪುರ ತಾಲೂಕಿನ ದೊಡ್ಡತಪ್ಪಲಿನಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಇನ್ನು ಹತ್ತು ತಿಂಗಳು ಮಾತ್ರ ಈ ಸರ್ಕಾರ ಇರುತ್ತದೆ' ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಜನರು ನಮಗೆ 136 ಸೀಟು ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಅದೇ ಜೆಡಿಎಸ್ 19 ಸೀಟ್ ಮಾತ್ರ ಗೆದ್ದಿದೆ. ಕುಮಾರಸ್ವಾಮಿಗೆ ಇದು ನೆನಪಿದೆಯಾ?. ಹಾಸನದಲ್ಲಿ ಇವರ ಕುಟುಂಬದವರು ಆಳ್ವಿಕೆ ಮಾಡುತ್ತಿದ್ದರು. ಈಗಹಾಸನದಲ್ಲಿ ಎಂಪಿಯಾಗಿ ಗೆದ್ದಿರುವವರು ಯಾರು? ಎಂದು ಪರೋಕ್ಷವಾಗಿ ಟೀಕಿಸಿದರು.
ಸರ್ಕಾರ ಕೆಡವಲು ಬಿಜೆಪಿ-ಜೆಡಿಎಸ್ ಯತ್ನ: ಸಚಿವ ಕೃಷ್ಣ ಬೈರೇಗೌಡ
ಇನ್ನು ಹತ್ತು ತಿಂಗಳು ಮಾತ್ರ ಈ ಸರ್ಕಾರ ಇರುತ್ತದೆ ಎನ್ನುವ ಕುಮಾರ ಸ್ವಾಮಿಯವರೇ, 'ಕೇಂದ್ರದಲ್ಲಿ ನೀವೇಷ್ಟು ದಿನ ಮಂತ್ರಿಯಾಗಿರುತ್ತೀರಿ ಎಂಬುದು ಗೊತ್ತಿದೆಯಾ?' ಎಂದು ಪ್ರಶ್ನಿಸಿದರು.