ರಾಜ್ಯ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಹಾಗೂ ವೆಂಕಟ ಶಿವಾರೆಡ್ಡಿ ಬೆಂಬಲಿಗರ ಮಧ್ಯೆ ಮಾರಾ ಮಾರಿ ನಡೆದಿದ್ದು ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ (ಏ.02): ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮತ್ತೆ ಹೊಡಿ ಬಡಿ ರಾಜಕೀಯ ಶುರುವಾಗಿದೆ. ರಾಜ್ಯ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಹಾಗೂ ವೆಂಕಟ ಶಿವಾರೆಡ್ಡಿ ಬೆಂಬಲಿಗರ ಮಧ್ಯೆ ಮಾರಾ ಮಾರಿ ನಡೆದಿದ್ದು ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣೆ ಎಂದರೆ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಿಲ್ಲದ ಉತ್ಸಾಹ. ಅಭ್ಯರ್ಥಿಗಳು ತಮ್ಮ ಗೆಲುವುಗಾಗಿ ಎಷ್ಟು ಶ್ರಮಿಸುತ್ತಾರೋ ಅಥವಾ ಹೋರಾಟ ಮಾಡುತ್ತಾರೋ ಗೊತ್ತಿಲ್ಲ. ಆದರೆ, ಅಭ್ಯರ್ಥಿಗಳ ಪರವಹಿಸಿಕೊಂಡು ಪ್ರತಿನಿತ್ಯ ಹೋರಾಟ ಮಾಡುವುದಂತೂ ನೋಡತೀರದು. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನ ನೆರೆಹೊರೆ ಜಿಲ್ಲೆಯಾಗಿರುವ ಕೋಲಾರದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣಾ ಕಣ ಪ್ರತಿವರ್ಷ ರಣಾಂಗಣವಾಗಿ ಮಾರ್ಪಾಡಾಗುತ್ತದೆ. ಅದೇ ರೀತಿ 2023ರ ವಿಧಾನಸಭಾ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಈಗ ಶಾಸಕ ಅಭ್ಯರ್ಥಿಗಳ ಬೆಂಬಲಿಗರು ಪರಸ್ಪರ ಮಾರಾಮಾರಿ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪ್ಪ ಬೇಡ ಅಂದರೂ ಮಗನ ಬಾಯಲ್ಲಿ ವರುಣಾ ಜಪ! ಶಿಕಾರಿವೀರನ ನಿರ್ಧಾರದ ಹಿಂದಿದೆ ವರುಣಾ "ಖೆಡ್ಡಾ" ರಹಸ್ಯ!
ಕಾಂಗ್ರೆಸ್ ಕಾರ್ಯಕರ್ತರಿಂದ ಥಳಿತ: ಇನ್ನು ಕಾಂಗ್ರೆಸ್ ಕಾರ್ಯಕರ್ತರಿಂದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಶ್ರೀನಿವಾಸಪುರ ತಾಲೂಕಿನ ಗೌಡತಾತನಗಡ್ಡ ಗ್ರಾಮದಲ್ಲಿ ಕೈ ಮತ್ತು ದಳದ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಅದು ಕೂಡ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗುಂಪು ಕಟ್ಟಿಕೊಂಡು ಹೊಡೆದಾಡಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಂದ ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಚರಂಡಿ ನೀರು ಹರಿಸಬೇಡಿ ಎಂದಿದ್ದಕ್ಕೆ ಹಲ್ಲೆ: ಗೌಡತಾತನಗುಡ್ಡ ಗ್ರಾಮದ ಬಾಲಾವತಿ ಹಾಗೂ ಅವರ ಕುಟುಂಬಸ್ಥರಿಂದ ಎದುರು ಮನೆಯಲ್ಲಿದ್ದ ಮಂಗಮ್ಮ ಕುಟುಂಬದವರಿಗೆ ಮನೆ ಎದುರಿಗೆ ಚರಂಡಿ ನೀರು ಹರಿಸಬೇಡಿ ಎಂದು ಹೇಳಿದ್ದಾರೆ. ಇನ್ನೂ ನೀವು ಚುನಾವಣೆಯಲ್ಲಿ ಗೆದ್ದಿಲ್ಲ, ಆಗಲೇ ನಮಗೆ ಆರ್ಡರ್ ಮಾಡ್ತೀರಾ ಎಂದು ಜಗಳಕ್ಕಿಳಿದ ಮಂಗಮ್ಮ ಮತ್ತು ಆಕೆಯ ಕುಟುಂಬಸ್ಥರು ಜಗಳ ಆರಂಭಿಸಿದ್ದಾರೆ. ನಂತರ, ಬಾಲಾವತಿ ಹಾಗು ಕುಟುಂಬಸ್ತರ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ.
ತಾಲೂಕು ಆಸ್ಪತ್ರೆಗೆ ಗಾಯಾಳುಗಳ ದಾಖಲು: ಮುನಿಯಪ್ಪ, ನಡುಪಣ್ಣ, ಮಂಗಮ್ಮ ಸೇರಿ ಕುಟುಂಬದ ಹಲವು ಸದಸ್ಯರು ಬಾಲಾವತಿ ಕುಟುಂಬ ಸದಸ್ಯರ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ. ಈ ಘಟನೆಯಿಂದ ರೆಡ್ಡೆಪ್ಪ, ಮುನೀಂದ್ರ, ಹರಿಬಾಬು, ರವಣಮ್ಮ, ಬಾಲಾವತಿ ಸೇರಿ ಅನೇಕರಿಗೆ ತಲೆ, ಕೈ-ಕಾಲು ಸೇರಿ ಇತರೆ ಭಾಗಗಳಿಗೆ ಗಾಯವಾಗಿದೆ. ಇನ್ನು ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ಎಲ್ಲ ಗಾಯಾಳುಗಳನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆ ಕುರಿತಂತೆ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಕೋಲಾರದಲ್ಲಿ ಜೆಡಿಎಸ್ ಭಿನ್ನಮತ ಆರಂಭ- ಪ್ರತ್ಯೇಕ ಸಭೆ ನಡೆಸಿದ ರಾಜೇಶ್ವರಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ದಿಸುತ್ತಿರುವ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಭಿನ್ನಮತ ಶುರುವಾಗಿದೆ. ಅಭ್ಯರ್ಥಿ ಶ್ರೀನಾಥ್ ವಿರುದ್ಧ ಜೆಡಿಎಸ್ ತಾಲೂಕು ಅಧ್ಯಕ್ಷೆ ರಾಜೇಶ್ವರಿ ಸಭೆ ಸೇರಿದ್ದಾರೆ. ಕೋಲಾರ ತಾಲೂಕಿನ ವೇಮಗಲ್ ನಲ್ಲಿ ನಡೆಯುತ್ತಿರುವ ಬಹಿರಂಗ ಸಭೆ ಮಾಡಲಾಗಿದೆ. ಮೂಲ ಜೆಡಿಎಸ್ ಕಾರ್ಯಕರ್ತರನನ್ನು ಶ್ರೀನಾಥ್ ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ಅವರನ್ನು ಪರೋಕ್ಷವಾಗಿ ಸೋಲಿಸುವುದಾಗಿ ರಾಜೇಶ್ವರಿ ಎಚ್ಚರಿಕೆ ನೀಡಿದ್ದಾರೆ.
ಕೇವಲ 5 ರೂ.ಗೆ ಬಾಲಕನ ಕೊಲೆ ಮಾಡಿದ ಆರೋಪಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಹತ್ಯೆ
ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ಸೋಲಿಗೆ ತಂತ್ರ: ಶ್ರೀನಾಥ್ ವಿರುದ್ಧದ ಈ ಸಭೆ ಭಾರಿ ಕುತೂಹಲ ಮೂಡಿಸಿದೆ. ಮೂಲ ಜೆಡಿಎಸ್ ಮುಖಂಡರು ಪಕ್ಷದಲ್ಲಿಯೇ ಇದ್ದುಕೊಂಡು ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ಸೋಲಿಗೆ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಜೆಡಿಎಸ್ ಪಕ್ಷದ ರಾಜಕೀಯ ಕಿತ್ತಾಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ಲಸ್ ಪಾಯಿಂಟ್ ಆಗಲಿದೆ. ರಾಜೇಶ್ವರಿ ಅವರು ನರಸಾಪುರ, ಕ್ಯಾಲನೂರು ಭಾಗದಲ್ಲಿ ಪ್ರಭಾವ ಹೊಂದಿದ್ದು, ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಈಗ ಟಿಕೆಟ್ ಸಿಗದಿದ್ದರೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಶ್ರೀನಾಥ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಭೆಯನ್ನೇ ನಡೆಸಿದ್ದಾರೆ.
ನೇಕಾರ ಸಮುದಾಯಕ್ಕೆ ಟಿಕೆಟ್: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ