ಚುನಾವಣೆ ಜಯಿಸಲು ಹನುಮಮಾಲೆ ಧರಿಸಿದ ಕೈ ಕಾರ್ಯಕರ್ತರು!

By Kannadaprabha News  |  First Published Apr 2, 2023, 2:25 PM IST

ಹನುಮ ಜಯಂತಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಕಾಂಗ್ರೆಸ್ಸಿನ ಸುಮಾರು 30ಕ್ಕೂ ಅಧಿಕ ಜನ ಕಾರ್ಯಕರ್ತರು ಹನುಮಾಲೆ ಶನಿವಾರ ಧರಿಸಿದರು.


ಕಾರಟಗಿ (ಏ.2) :  ಹನುಮ ಜಯಂತಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಕಾಂಗ್ರೆಸ್ಸಿನ ಸುಮಾರು 30ಕ್ಕೂ ಅಧಿಕ ಜನ ಕಾರ್ಯಕರ್ತರು ಹನುಮಾಲೆ ಶನಿವಾರ ಧರಿಸಿದರು.

ತಾಲೂಕಿನ ಯರಡೋಣಾ ಗ್ರಾಮದ ಮುರುಡಬಸವೇಶ್ವರ ದೇವಸ್ಥಾನ(Murugha basaveshwar temple)ದಲ್ಲಿ ಬೆಳಗ್ಗೆ ಶಿವರಾಜ್‌ ತಂಗಡಗಿ(Shivaraja tangadagi) ಅನೇಕ ಪೂಜಾವಿಧಿ ವಿಧಾನಗಳ ಮೂಲಕ ಹನುಮಮಾಲೆ ಧರಿಸಿದರು. ವಿಶೇಷ ಎಂಬಂತೆ ಸ್ವತಃ ಆರ್‌ಎಸ್‌ಎಸ್‌ ಮುಖಂಡರೇ ಹನುಮಮಾಲೆ ತೊಡಿಸಿದ್ದು, ಬಿಜೆಪಿ ಶಾಸಕರಿಗೆ ಇರುಸು-ಮುರುಸು ಉಂಟು ಮಾಡಿದೆ. ಇನ್ನೂ ಕಾಂಗ್ರೆಸ್‌ ಅಭ್ಯರ್ಥಿಯೇ ಹನುಮಮಾಲೆ ಹಾಕಿದ್ದರೂ ಸಹ ಇತ್ತ ಬಿಜೆಪಿ ಶಾಸಕ ಕಳೆದ ಬಾರೀ ಹನುಮ ಮಾಲೆ ಹಾಕಿ ಈ ಬಾರೀ ಹಾಕದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Tap to resize

Latest Videos

undefined

KARNATAKA ELECTION 2023: ಕುಷ್ಟಗಿ ಕ್ಷೇತ್ರದಲ್ಲಿ ಅಮರೇಗೌಡ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು?

ನಂತರ ಮಾತನಾಡಿದ ಮಾಜಿ ಸಚಿವರು, ಕಾಂಗ್ರೆಸ್‌ ಪಕ್ಷ ಹಿಂದುಗಳ ವಿರೋಧಿ, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತೆ ಅಂತಾ ಬಿಜೆಪಿ ಆರೋಪ ಮಾಡೋದನ್ನು ಕೇಳಿದ್ದೇವೆ.ಆದರೆ ಇದೀಗ ಕಾಂಗ್ರೆಸ್‌ನ ಮಾಜಿ ಸಚಿವರೊಬ್ಬರು ಸತತ ಎರಡು ವರ್ಷಗಳಿಂದ ಹನುಮಮಾಲೆ ಹಾಕ್ತಾ ಇದ್ದು, ಬಿಜೆಪಿ ಪಕ್ಷಕ್ಕೆ ಟಕ್ಕರ್‌ ನೀಡಿದ್ದಾರೆ. ಇನ್ನು ಮಾಜಿ ಸಚಿವರ ಹನುಮನ ಭಕ್ತಿಗೆ, ಹಾಲಿ ಬಿಜೆಪಿ ಶಾಸಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕನಕಗಿರಿ ವಿಧಾನಸಭಾ ಕ್ಷೇತ್ರ(Kanakagiri assembly constituency)ದ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಜ್‌ ತಂಗಡಗಿ ಸತತ ಎರಡು ವರ್ಷಗಳಿಂದ ಹನುಮಮಾಲೆ ಧರಿಸಿದ್ದು, ಬಿಜೆಪಿ ಶಾಸಕ ಬಸವರಾಜ್‌ ದಡೇಸೂಗೂರು ಅವರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೌದು ಶ್ರೀರಾಮನ ಭಂಟ ಆಂಜನೇಯ ಜನ್ಮಿಸಿದ ಸ್ಥಳವಾದ ಅಂಜನಾದ್ರಿ ಇರೋದು ಕೊಪ್ಪಳ ಜಿಲ್ಲೆಯಲ್ಲಿ. ಹೀಗಾಗಿ ಕೊಪ್ಪಳ ಜಿಲ್ಲೆಯ ಹನುಮನ ಭಕ್ತರೇ ಇಲ್ಲಿ ರಾಜಕೀಯ ಪಕ್ಷಗಳ ಗೆಲುವನ್ನು ನಿರ್ಧಾರ ಮಾಡ್ತಾರೆ.

ಕಳೆದ ಬಾರೀ ಹಾಲಿ ಬಿಜೆಪಿ ಶಾಸಕ ಬಸವರಾಜ್‌ ದಡೇಸೂಗೂರು ಹನುಮ ಜಯಂತಿ ನಿಮಿತ್ತ ಹನುಮಮಾಲೆ ಧರಿಸಿದ್ದರು. ಇನ್ನೂ ಮಾಜಿ ಸಚಿವ ಶಿವರಾಜ್‌ ತಂಗಡಗಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದರೂ ಸಹ ಕಳೆದ ಬಾರೀ ಹನುಮಮಾಲೆ ಹಾಕಿ ಗಮನ ಸೆಳೆದರು. ಈ ಬಾರಿಯೂ ಶಿವರಾಜ್‌ ತಂಗಡಗಿ ಹನುಮಮಾಲೆ ಹಾಕಿದ್ದು, ಹಿಂದುತ್ವವನ್ನು ಬಿಜೆಪಿ ಗುತ್ತಿಗೆ ಪಡೆದಿದೇಯಾ ಎಂದು ಟಾಂಗ್‌ ನೀಡಿದರು.

ಗಂಗಾವತಿ: 105 ಕೆಜಿ ತೂಕದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ಯವಕ..!

ಒಟ್ಟಿನಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಶಿವರಾಜ್‌ ತಂಗಡಗಿ ಹನುಮಮಾಲೆ ಹಾಕಿದ್ದು, ಕಾಂಗ್ರೆಸ್‌ ಪಕ್ಷವೂ ಹಿಂದುತ್ವಪರ ಇರುತ್ತದೆ ಎಂದು ಸಂದೇಶ ಸಾರುವ ಮೂಲಕ ಬಿಜೆಪಿಗೆ ಟಕ್ಕರ್‌ ಕೊಟ್ಟಿದ್ದಾರೆ.

ಹಾಸನಕ್ಕೆ ದೇವೇಗೌಡ್ರ ಪರಿಹಾರ ಸೂತ್ರ: 'ಕಾರ್ಯಕರ್ತರ ಅಭಿಪ್ರಾಯನ್ನಷ್ಟೇ ಮುಂದಿಟ್ಟಿದ್ದೇನೆ'

click me!