ಚಿಮುಲ್ ಚುನಾವಣೆ : ಕಾಂಗ್ರೆಸ್‌ ಬೆಂಬಲಿತರಿಗೆ ಅಧಿಕಾರ ?

Kannadaprabha News   | Kannada Prabha
Published : Feb 02, 2026, 11:58 AM IST
congress

ಸಾರಾಂಶ

ಚುನಾವಣಾ ಫಲಿತಾಂಶ ಸಹ ಪ್ರಕಟವಾಗಿ ಚುನಾವಣೆಯಲ್ಲಿ ಆಡಳಿತ ಪಕ್ಷದ ಕಾಂಗ್ರೆಸ್ ಬೆಂಬಲಿತರು 6 ಸ್ಥಾನಗಳು ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳು 5 ಹಾಗೂ ಕೆಎಚ್‌ಪಿ ಬಣದಿಂದ ಇಬ್ಬರು ಗೆಲವು ಸಾಧಿಸಿದ್ದಾರೆ.

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ದ ಪ್ರಥಮ ಚುನಾವಣೆ ಭಾನುವಾರ ನಡೆದು, ಚುನಾವಣಾ ಫಲಿತಾಂಶ ಸಹ ಪ್ರಕಟವಾಗಿ ಚುನಾವಣೆಯಲ್ಲಿ ಆಡಳಿತ ಪಕ್ಷದ ಕಾಂಗ್ರೆಸ್ ಬೆಂಬಲಿತರು 6 ಸ್ಥಾನಗಳು ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳು 5 ಹಾಗೂ ಕೆಎಚ್‌ಪಿ ಬಣದಿಂದ ಇಬ್ಬರು ಗೆಲವು ಸಾಧಿಸಿದ್ದಾರೆ.

13 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 28 ಮಂದಿ ಕಣದಲ್ಲಿದ್ದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಭರಣಿ ವೆಂಕಟೇಶ್ - ಅದೇ ಬೆಂಬಲಿತ ಪಕ್ಷದ ಅಭ್ಯರ್ಥಿ ಯಲುವಳ್ಳಿ ಎನ್. ರಮೇಶ್ ವಿರುದ್ಧ 24 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಪೇರೆಂಸಂದ್ರ ಕ್ಷೇತ್ರದಿಂದ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಕೆ.ವಿ.ನಾಗರಾಜ್ ರವರು ಜೆ.ಆರ್.ರಾಜಣ್ಣ ವಿರುದ್ಧ 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ

ಕೇವಲ ಒಂದು ಮತದಿಂದ ಗೆಲುವು

ಗೌರಿಬಿದನೂರು ಕ್ಷೇತ್ರದಿಂದ ದಿನೇಶ್ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಬಣದ ವೆಂಕಟರೆಡ್ಡಿ ವಿರುದ್ಧ ಕೇವಲ ಒಂದು ಮತದಿಂದ ಗೆಲುವು ಸಾಧಿಸಿದ್ದು ಮಂಚೇನಹಳ್ಳಿ- ಕ್ಷೇತ್ರದಿಂದ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಬಣದ ಕಾಂತರಾಜ್ ರವರು ವೆಂಕಟರೆಡ್ಡಿ ವಿರುದ್ಧ 11 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗುಡಿಬಂಡೆ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆದಿನಾರಾಯಣರೆಡ್ಡಿರವರು ಬೈರಾರೆಡ್ಡಿ ವಿರುದ್ಧ 9 ಮತಗಳಿಂದ ಜಯ ಗಳಿಸಿದ್ದಾರೆ.

4 ಮತಗಳ ಅಂತರದಿಂದ ಜಯ

ಕೈವಾರ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅವಲಪ್ಪ ಅವರು ಕಾಂಗ್ರೆಸ್‌ ಬೆಂಬಲಿತ ಎಸ್.ಎನ್. ಚಿನ್ನಪ್ಪ ವಿರುದ್ಧ 4 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಚೇಳೂರು ಕ್ಷೇತ್ರದಿಂದ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಕೃಷ್ಣಾರೆಡ್ಡಿ ರವರು 18 ಮತಗಳಿಂದ ಗೆಲುವು ಪಡೆದಿದ್ದರೆ, ಚಿಂತಾಮಣಿ ಕಸಬಾ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಉಲವಾಡಿ ಅಶ್ವತ ನಾರಾಯಣರೆಡ್ಡಿ ಶ್ರೀನಿವಾಸಪ್ಪ ಅವರನ್ನು 65 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಬಾಗೇಪಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿ.ಮಂಜುನಾಥ ರೆಡ್ಡಿ ಅವರು ವೆಂಕಟರಮಣ ರೆಡ್ಡಿಯನ್ನು 25 ಮತಗಳಿಂದ ಸೋಲಿಸಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಂಕ್ ಮುನಿಯಪ್ಪರವರು ಕಾಂಗ್ರೆಸ್ ಬೆಂಬಲಿತ ಚೋಕ್ಕೆಗೌಡರನ್ನು 33 ಮತಗಳಿಂದ ಸೋಲಿಸಿದ್ದಾರೆ.

ಜಂಗಮಕೋಟೆ ಕ್ಷೇತ್ರದಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹುಜುಗೂರು ರಾಮಯ್ಯ. ಕಾಂಗ್ರೆಸ್ ಬೆಂಬಲಿತ ಆರ್. ಶ್ರೀನಿವಾಸ್ ವಿರುದ್ಧ 18 ಮತ ಹೆಚ್ಚಾಗಿ ಪಡೆದು ಜಯ ಶೀಲರಾಗಿದ್ದಾರೆ. ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಿಂದ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಬಣದ ಸುಧಾ ಅವರು ಸುನಂದಮ್ಮರನ್ನು 3 ಮತಗಳಿಂದ ಸೋಲಿಸಿದ್ದಾರೆ. ಚಿಂತಾಮಣಿ ಮಹಿಳಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುಮಾ ಅವರು ರೂಪ ಅವರನ್ನು 12 ಮತಗಳಿಂದ ಸೋಲಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಚಿಂತಾಮಣಿ ಕಸಬಾ ಕ್ಷೇತ್ರದ ಅಭ್ಯರ್ಥಿ ಊಲವಾಡಿ ಅಶ್ವಥ್ ನಾರಾಯಣ ಬಾಬು ಅತೀ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಮತ್ತೊಬ್ಬ ಹಳೆಗೂಳಿ ಎನ್‌ಡಿಎ ಬೆಂಬಲಿತ ಕೆ ವಿ ನಾಗರಾಜ್ ಎರಡನೆ ಅತೀ ಹೆಚ್ಚು ಮತಗಳಿಂದ ಗೆದ್ದು ಬೀಗಿದ್ದಾರೆ.

ಇಂದು ನಡೆದ ಚಿಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 6 ನಿರ್ದೇಶಕರ ಸ್ಥಾನದ ಜತೆಗೆ ಕೆಎಚ್‌ಪಿ ಇಬ್ಬರು ಸೇರಿ ಕಾಂಗ್ರೆಸ್ ಪಕ್ಷಕ್ಕೆ 8 ಸ್ಥಾನಗಳು ಬಂದಂತಾಗಿದ್ದು, ಇದರ ಜತೆಗೆ ಸರ್ಕಾರಿ ನಾಮಿನಿ 5 ಸ್ಥಾನಗಳು ಇರುವುದರಿಂದ ಈ ಬಾರಿ ಆಡಳಿತರೂಢ ಕಾಂಗ್ರೆಸ್ ಪಕ್ಷವೇ ಚಿಮುಲ್ ಆಡಳಿತ ಹಿಡಿಯುವುದು ಖಚಿತ ವಾದಂತೆ ಆಗಿದೆ.

ಅಪರ ಜಿಲ್ಲಾಧಿಕಾರಿ ಡಾ.ಎನ್. ಬಾಸ್ಕರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಚಿಮುಲ್ ಚುನಾವಣೆ ನಡೆಯುತ್ತಿರುವುದರಿಂದ ಬಿ ಬಿ ರಸ್ತೆ ವಾಹನಗಳಿಗೆ ಸಂಚಾರಕ್ಕೆ ಸಂಚಕಾರ ತಂದಿತ್ತು. ಸಂಚಾರ ತಿಳಿಗೊಳಿಸಲು ಪೊಲೀಸಲು ಹರ ಸಾಹಸಪಡುತಿದ್ದರು. ಸಾವಿರಾರು ಜನ ಇಲ್ಲಿ ಜಮಯಿಸಿದ ಕಾರಣ ಪೊಲೀಸರು ವಿಶೇಷ ಬಂದೋ ಬಸ್ತ್ ಮಾಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Budget 2026 ದೇಶದ ಆರ್ಥಿಕತೆಯನ್ನೇ ನಾಶಪಡಿಸುವ ಬಜೆಟ್; ಮಮತಾ ಬ್ಯಾನರ್ಜಿ ಆಕ್ರೋಶ
Union Budget ಬಗ್ಗೆ ಸುಳ್ಳು ಹಬ್ಬಿಸಬೇಡಿ; ಅಂಕಿ-ಅಂಶಗಳಿದ್ದರೆ ಚರ್ಚೆಗೆ ಬನ್ನಿ ರಾಹುಲ್ ಗಾಂಧಿಗೆ ಸೀತಾರಾಮನ್ ಸವಾಲು!