ಚಿಕ್ಕಮಗಳೂರು ಬಿಜೆಪಿಯಿಂದ ಕೆಪಿಸಿಸಿ ಕಚೇರಿಗೆ ಚಡ್ಡಿ ರವಾನೆ

By Suvarna News  |  First Published Jun 7, 2022, 11:29 PM IST
  • ಬೆಂಗಳೂರಿನ ಕಾಂಗ್ರೆಸ್ ಕಚೇರಿಗೆ ಚಡ್ಡಿ ಪೋಸ್ಟ್ 
  • ಮಾಜಿ ಸಿಎಂ ಸಿದ್ದು ಹೆಸರಿನಲ್ಲಿ ಚಡ್ಡಿ ಪೋಸ್ಟ್ ಮಾಡಿದ ಬಿಜೆಪಿ
  • ಆಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿಯಿಂದ ಪ್ರತಿಭಟನೆ
  • ಕೈಯಲ್ಲಿ ಚಡ್ಡಿ ಹಿಡಿದು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.7) : ದಿನದಿಂದ ದಿನಕ್ಕೆ ಚಡ್ಡಿ ಸುಟ್ಟು ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ನಡುವೆ ಕಾಂಗ್ರೇಸ್ ನಾಯಕರು ನೀಡಿದ ಹೇಳಿಕೆ ಬಿಜೆಪಿ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಕಾಂಗ್ರೇಸ್ ವಿರುದ್ದ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ಕೆಪಿಸಿಸಿ ಕಚೇರಿಗೆ ಚಡ್ಡಿ ರವಾನೆ ಮಾಡಿದ್ದಾರೆ.

Tap to resize

Latest Videos

ಮಾಜಿ ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ಚಡ್ಡಿ ಪೋಸ್ಟ್ : ಕಾಂಗ್ರೇಸ್ ವಿರುದ್ದ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯಿಂದ ಚಡ್ಡಿ ಪೋಸ್ಟ್ ನ್ನು ಹಿಡಿದು ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ಹೊರಹಾಕಿದರು . ನಗದ ಅಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು  ಪ್ರತಿಭಟನೆ ಸಭೆ ನಡೆಸಿದರು. ಕೈಯಲ್ಲಿ ಚಡ್ಡಿ ಹಿಡಿದು ಪ್ರತಿಭಟನೆ ನಡೆಸಿ 15ಕ್ಕೂ ಹೆಚ್ಚು ಚಡ್ಡಿಗಳನ್ನ ಕೆಪಿಸಿಸಿ ಕಛೇರಿಗೆ ಪೋಸ್ಟ್ ಮಾಡಿದರು. 

ದೇಶದ ಜನರೇ ಕಾಂಗ್ರೆಸ್‌ ಚಡ್ಡಿ ಕಳಚಿದ್ದಾರೆ: ಕೇಂದ್ರ ಸಚಿವ ಜೋಶಿ

ಈ ವೇಳೆಯಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ ವಾಗ್ದಾಳಿ ನಡೆಸಿದರು. ವ್ಯಕ್ತಿಗಳನ್ನು ಕೊಲ್ಲುವುದು ಸುಲಭ ಆದರೆ ಚಿಂತನೆಯನ್ನಲ್ಲ ವಿಪಕ್ಷ ನಾಯಕ ಸಿದ್ದರಾಮಯ್ಯ ಬೌದ್ಧಿಕವಾಗಿ ದಿವಾಳಿಯಾಗಿ ಆರ್ಎಸ್ಎಸ್ನ ಕುರಿತು ಬಾಯಿಗೆ ಬಂದಂತೆ ಹೇಳಿ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್‌ಎಸ್‌ಎಸ್‌ ಚಡ್ಡಿ ಸುಡುವ ಹೇಳಿಕೆ ಖಂಡಿಸಿದ್ರು.  ದೇಶದಲ್ಲಿ ಪರಂಪರೆ ಉಳಿಸುವ, ದೇಶವನ್ನು ಗತವೈಭವಕ್ಕೆ ಕೊಂಡೊಯ್ಯುವ ಸಂಸ್ಥೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದನ್ನು ಅರಿಯದೇ ಸಿದ್ದರಾಮಯ್ಯ ಬೌಧ್ಧಿಕವಾಗಿ ದಿವಾಳಿಯಾದವರಂತೆ ಹೇಳಿಕೆ ನೀಡುತ್ತಿದ್ದಾರೆ, ವ್ಯಕ್ತಿಗಳನ್ನು ಕೊಲ್ಲುವುದು ಸುಲಭ ಆದರೆ ಚಿಂತನೆಯನಲ್ಲ ಎಂದರು.

ಆರ್ ಎಸ್ ಎಸ್ ದೇಶ ಭಕ್ತ ಸಂಘಟನೆ: ಆರ್‌ಎಸ್ಎಸ್ ಒಂದು ದೇಶಭಕ್ತಿ ಸಂಘಟನೆ, ಚಡ್ಡಿ ಕುರಿತು ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಖಂಡನೀಯ. ರಾಜ್ಯದ ಅಧಿವೇಶನದ ವೇಳೆ ನಿಮ್ಮ ಪಂಚೆ ಕೆಳಗೆ ಬಿದ್ದಾಗ ನಿಮ್ಮ ಮಾನ ಕಾಪಾಡಿದ್ದು ಇದೇ ಚಡ್ಡಿ ಎಂದು ವ್ಯಂಗ್ಯವಾಡಿದರು.

KUD ANNUAL CONVOCATION; ಎಂ.ಎ ಪತ್ರಿಕೋದ್ಯಮದಲ್ಲಿ ಸುಜಾತ ಜೋಡಳ್ಳಿಗೆ 9 ಚಿನ್ನದ ಪದಕ!

ನಲಪಾಡ್ ಮತ್ತು ಸಿದ್ದರಾಮಯ್ಯ ಅವರಿಗೆ ಆರ್‌ಎಸ್ಎಸ್ ಟೀಕಿಸುವ ಯಾವುದೇ ನೈತಿಕತೆ ಇಲ್ಲ, ಇದೇ ರೀತಿಯ ಹೇಳಿಕೆಗಳು ಮಂದುವರಿದ್ದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಲಿದೆ. ಮುಂದಿನ ಚುನಾವಣೆಗಳಲ್ಲಿ ಚಡ್ಡಿ ಶಕ್ತಿ ಏನು ಎಂಬುದು ಗೊತ್ತಾಗಲಿದೆ ಎಂದು ಸವಾಲು ಹಾಕಿದರು.

ಆರ್‌ಎಸ್ಎಸ್ ಚಡ್ಡಿ ಸುಟ್ಟು ಟೀಕಿಸಿರುವ ನಲಪಾಡ್ ಹಾಗೂ ಸಿದ್ದರಾಮಯ್ಯ ಅವರ ಕೆಪಿಸಿಸಿ ಕಛೇರಿಗೆ ಸಾಂಕೇತಿಕವಾಗಿ ಚಡ್ಡಿ ಕಳುಹಿಲಾಗಿದೆ. ಪ್ರಚೋದನಕಾರಿ ಹೇಳಿಕೆ ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಲೋಡ್ಗಟ್ಟಲೇ ಚಡ್ಡಿ ಕಳುಹಿಸುವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

 PUC Textbook Revision ಕೈಬಿಟ್ಟಿಲ್ಲ ಮುಂದೂಡಿದ್ದೇವೆ: ಕೋಟ ಶ್ರೀನಿವಾಸ ಪೂಜಾರಿ

ಆರ್‌ಎಸ್ಎಸ್ 97 ವರ್ಷದ ಇತಿಹಾಸವಿದೆ. 2025 ಕ್ಕೆ ನೂರು ವರ್ಷ ಪೂರೈಸಲಿದೆ ಅಂತಹ ದೇಶಭಕ್ತಿ ಸಂಘಟನೆ ಟೀಕಿಸುವ ನೈತಿಕತೆ ಯಾರಿಗೂ ಇಲ್ಲ ಎಂದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ರಾಜಪ್ಪ, , ನಗರಸಭೆ ಸದಸ್ಯ ಇತರು ಉಪಸ್ಥಿತರಿದ್ದರು.

click me!