ಸುಧಾಕರ್ ವಿನೂತನ ಪ್ರಚಾರ, ಬಿಜೆಪಿ ಬಾವುಟವೇ ಎಲ್ಲೂ ಇಲ್ಲ, ಯಾಕಂತೆ!

By Web DeskFirst Published Nov 20, 2019, 8:35 PM IST
Highlights

ಡಾ. ಸುಧಾಕರ್ ಪ್ರಚಾರದ ವೈಖರಿ/ ಸೋಶಿಯಲ್ ಮೀಡಿಯಾದಲ್ಲಿ ವಿನೂತನ ವಿಡಿಯೋ/ ನಮ್ಮೂರಿಗೆ ಮೆಡಿಕಲ್ ಕಾಲೇಜು ಬರ್ತಿದೆ/ ಪುಣ್ಯಕೋಟಿ ಜಹಾಡಿನ ಸಾಳುಗಳನ್ನು ಬಳಸಿಕೊಂಡ ಸುಧಾಕರ್

ಚಿಕ್ಕಬಳ್ಳಾಪುರ(ನ. 20)  ಉಪಚುನಾವಣೆ ಅಖಾಡ ರಂಗೇರುತ್ತಲೇ ಇದೆ. ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 4.56 ನಿಮಿಷದ ವಿಡಿಯೋ ಪಕ್ಕಾ ಸಿನಿಮಾದ ಶೈಲಿಯಲ್ಲಿ ನಿರ್ಮಾಣವಾಗಿದೆ.

ಸುಧಾಕರ್ ಅವರ ಗುಣಗಾನ ಮಾಡುತ್ತ ಸಾಗುವ ವಿಡಿಯೋದಲ್ಲಿ ಎಲ್ಲಿಯೂ ಯಾವ ಪಕ್ಷದ ಬಾವುಟ ಕಂಡುಬರುವುದಿಲ್ಲ. ಒಬ್ಬ ಬಾಲಕ ಸುಧಾಕರ ಅಣ್ಣ ಬರ್ತಾ ಇದ್ದಾರೆ ಎಲ್ಲರೂ ಬನ್ರೋ.. ಎಂದು ಕೂಗಿಕೊಂಡು ಬರುತ್ತಾನೆ. ಕೊನೆಯಲ್ಲಿ ಆತ ತಾನು ಮುಂದೆ ಡಾಕ್ಟರ್ ಆಗುತ್ತೇನೆ ಎಂದು ಹೇಳುತ್ತಾರೆ.

ಕಾಂಗ್ರೆಸ್‌ಗೆ ಲಾಸ್ಟ್ ಮಿನಿಟ್ ಶಾಕ್, ಕೈ ಬುಟ್ಟಿಗೆ ಸುಧಾಕರ್ ಕೈ

ಪೂಣ್ಯಕೋಟಿಯ ಕತೆಯ ಸಾಲುಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಮೆಡಿಕಲ್ ಕಾಲೇಜಿನ ವಿಚಾರ ಮತ್ತಷ್ಟು ಹೈಲಟ್ ಮಾಡಲಾಗಿದೆ. ಕೊಟ್ಟ ಭಾಷೆಗೆ ತಪ್ಪಲಾರ, ಕೆಟ್ಟ ಯೋಚನೆ ಮಾಡಲಾರ ಎಂದು ಸುಧಾಕರ್ ಗುಣಗಾನ ಹಾಡಿನಲ್ಲಿ ಇದೆ.

ಸುಧಾಕರ್ ಅವರ ಭಾಷಣದ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ಮಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವ ಹುನ್ನಾರ ಇತ್ತು. ಆದರೆ ಅದೆಲ್ಲವನ್ನು ಮೀರಿ ಮೆಡಿಕಲ್ ಕಾಲೇಜು  ತಂದಿದ್ದೇನೆ. ಕೊಟ್ಟ ಭರವಸೆಗಳನ್ನು ಈಡೇರಿಸಲು ಸಮ್ಮಿಶ್ರ ಸರಕಾರ ತಾರತಮ್ಯ ಧೋರಣೆ ತಾಳಿತ್ತು. ಈಗ ಮತ್ತೆ ನಿಮ್ಮ ಮುಂದೆ ಬಂದಿದ್ದೇನೆ. ರಾಜೀನಾಮೆ ಕೊಟ್ಟ ಮೇಲೆ ಎಲ್ಲ ಭರವಸೆ ಈಡೇರುತ್ತಿದೆ ಎಂದು ಹೇಳಿಕೊಂಡು ಸಾಗುತ್ತಾರೆ.

click me!