
ಬೆಂಗಳೂರು (ಅ.16): ರಾಜ್ಯ ರಾಜಕಾರಣದಲ್ಲಿ ತೀವ್ರ ಕಾವೇರಿರುವ ಈ ಸನ್ನಿವೇಶದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯು ಎನ್‌ಡಿಎ ಅಂಗ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸವಾಲಿನ ರೂಪದಲ್ಲಿ ಎದುರಾಗಿದೆ. ಮೂರು ಕ್ಷೇತ್ರಗಳ ಪೈಕಿ ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಆದರೆ, ಚನ್ನಪಟ್ಟಣ ಕ್ಷೇತ್ರ ಅಕ್ಷರಶಃ ಮಿತ್ರ ಪಕ್ಷಗಳಿಗೆ ಅಗ್ನಿಪರೀಕ್ಷೆಯಂತಾಗಿದೆ.
ಯೋಗೇಶ್ವರ್ ಮನವೊಲಿಕೆ ಹೇಗೆ?: ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರ, ಜೆಡಿಎಸ್ ತೆರವುಗೊಳಿಸಿರುವ ಕ್ಷೇತ್ರವಾಗಿರುವುದರಿಂದ ಅದನ್ನು ತಾವೇ ಉಳಿಸಿಕೊಂಡು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಒಲವು ಹೊಂದಿದ್ದಾರೆ. ಇದು ಮಿತ್ರ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ. ಈ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಮಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
ವಿಮಾನಯಾನ ಆರಂಭಕ್ಕೆ ಮ್ಯಾಕ್ರೋ ಅನುದಾನ: ಸಚಿವ ಈಶ್ವರ್ ಖಂಡ್ರೆ
ಜತೆಗೆ ತಾವು ಪಕ್ಷೇತರವಾಗಿಯಾದರೂ ಸ್ಪರ್ಧಿಸುವುದು ನಿಶ್ಚಿತ ಎಂದು ಘೋಷಿಸಿರುವುದು ಉಭಯ ಪಕ್ಷಗಳ ಮೈತ್ರಿಗೆ ಸಂಕಷ್ಟ ಉಂಟು ಮಾಡಿದೆ. ಕುಮಾರಸ್ವಾಮಿ ವಿರುದ್ಧಕೆಂಡಾ ಮಂಡಲವಾಗಿರುವ ಯೋಗೇಶ್ವರ್ ಶತಾಯಗತಾಯ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ. ಹೀಗಾಗಿ, ಯೋಗೇಶ್ವರ್ರ ಅವರನ್ನು ಮನವೊಲಿಸುವಲ್ಲಿ ಉಭಯ ಪಕ್ಷಗಳ ನಾಯಕರು ಯಶಸ್ವಿಯಾಗು ತಾರೆಯೇ ಎಂಬುದನ್ನು ಕಾದು ನೋಡಬೇಕು. ಬೊಮ್ಮಾಯಿ ನಡೆ ಕುತೂಹಲ: ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ನಡೆ ಕುತೂಹಲ ಮೂಡಿಸಿದೆ.
ಅವರ ಪುತ್ರ ಭರತ್ ಬೊಮ್ಮಾಯಿ ಅವರನ್ನು ಕಣಕ್ಕಿಳಿಸುವ ಬಗ್ಗೆ ವದಂತಿ ಹಬ್ಬಿದ್ದರೂ ಆ ಬಗ್ಗೆ ಇನ್ನೂ ಬಸವರಾಜ ಬೊಮ್ಮಾಯಿ ಅವರು ಗೊಂದಲದಲ್ಲಿ ದ್ದಾರೆ. ಇದೇ ವೇಳೆ ಭರತ್ ಬೊಮ್ಮಾಯಿ ಹೊರತುಪಡಿಸಿ ಪಕ್ಷದ ಸ್ಥಳೀಯ ಮುಖಂಡರಾದ ಶ್ರೀಕಾಂತ್ ದುಂಡಿಗೌಡ, ಶೋಭಾನಿಸೀಮಗೌಡ, ಶಶಿಧರ್ ಯಲಿಗಾರ್ ಮೊದಲಾದವರ ಹೆಸರುಗಳೂ ಪ್ರಮು ಖವಾಗಿಪ್ರಸ್ತಾಪವಾಗಿವೆ.ಅಂತಿಮವಾಗಿನಿರ್ಧಾರವೇ ಅಭ್ಯರ್ಥಿ ಆಯ್ಕೆಯಲ್ಲಿ ಮಹತ್ವ ಪಡೆದುಕೊಳ್ಳಲಿದೆ.ಈ ನಡುವೆ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರೂ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಪ್ರಸ್ತಾಪ ವಾ ಗಿದೆ. ಆದರೆ, ಆರಂಭದಲ್ಲಿ ಆಸಕ್ತಿ ತೋರಿದ್ದ ನಿರಾಣಿ ಇತ್ತೀಚೆಗೆ ನಿರಾಸಕ್ತರಾಗಿದ್ದಾರೆ.
ಸಂಡೂರಿಗೆ 3 ಹೆಸರುಗಳು ಶಿಫಾರಸು: ಇನ್ನು ಬಳ್ಳಾರಿಜಿಲ್ಲೆಯ ಸಂಡೂರುವಿಧಾನಸಭಾಕ್ಷೇತ್ರದಿಂದ ಪಕ್ಷದ ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಂಸದ ವೈ.ದೇವೇಂದ್ರಪ್ಪ ಹಾಗೂ ಮುಖಂಡ ಕೆ.ಎಸ್.ದಿವಾಕರ ಅವರ ಹೆಸರುಗಳನ್ನು ಈಗಾಗಲೇ ರಾಜ್ಯ ಘಟಕದಿಂದ ಪಕ್ಷದ ರಾಷ್ಟ್ರೀಯ ಘಟಕಕ್ಕೆ ಶಿಫಾರಸು ಮಾಡಲಾಗಿದೆ.
ಜಾಮೀನು ಕೋರಿ ನಟ ದರ್ಶನ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ!
3 ಕ್ಷೇತ್ರಗಳ ಬಿಜೆಪಿ ಆಕಾಂಕ್ಷಿಗಳ ಪಟ್ಟಿ
ಶಿಗ್ಗಾವಿ ಕ್ಷೇತ್ರ: ಭರತ್ ಬೊಮ್ಮಾಯಿ, ಶ್ರೀಕಾಂತ್ ದುಂಡಿಗೌಡ, ಶೋಭಾ ನಿಮಗೌಡರ್, ಶಶಿಧರ್‌ಯಲಿಗಾರ್, ಮುರುಗೇಶ್ ನಿರಾಣಿ
ಸಂಡೂರು ಕ್ಷೇತ್ರ: ಬಂಗಾರು ಹನುಮಂತು, ಕೆ.ಎಸ್.ದಿವಾಕರ, ವೈ.ದೇವೇಂದ್ರಪ್ಪ
ಚನ್ನಪಟ್ಟಣ ಕ್ಷೇತ್ರ: ನಿಖಿಲ್ ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.