'ಜನತಾದಳ' ಹೆಸರನ್ನು 'ಕಮಲದಳ' ಎಂಬುದಾಗಿ ಬದಲಿಸಿಕೊಳ್ಳಿ: ಕಾಂಗ್ರೆಸ್‌ ಟೀಕೆ

By Sathish Kumar KH  |  First Published Sep 11, 2023, 1:18 PM IST

ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಟೀಕೆ ಮಾಡಿರುವ ಕಾಂಗ್ರೆಸ್‌, 'ಜನತಾ ದಳ' ಎಂಬ ಹೆಸರನ್ನು "ಕಮಲ ದಳ" ಎಂದು ಬದಲಿಸಿಕೊಂಡರೆ ಒಳಿತು ಎಂದು ಟೀಕಿಸಿದೆ. 


ಬೆಂಗಳೂರು (ಸೆ.11): ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಆದರೆ ಈಗ "ಜಾತ್ಯಾತೀತತೆ"ಯನ್ನು ವಿಸರ್ಜಿಸಲು ಹೊರಟಿದ್ದಾರೆ. ಜೊತೆಗೆ 'ಜನತಾ ದಳ' ಎಂಬ ಹೆಸರನ್ನು "ಕಮಲ ದಳ" ಎಂದು ಬದಲಿಸಿಕೊಂಡರೆ ಒಳಿತು ಎಂದು ಕಾಂಗ್ರೆಸ್‌ ಟೀಕೆ ಮಾಡಿದೆ.

 ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿ ಜೆಡಿಎಸ್‌ಗೆ ಬಹುಮತ ಬರತ್ತದೆ. ಒಂದು ವೇಳೆ ಬಹುಮತ ಬರದೇ ಸೋತಲ್ಲಿ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಹೇಳಿದ್ದರು. ಆದರೆ, ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ 136 ಸ್ಥಾನ ಪಡೆದರೆ, ಜೆಡಿಎಸ್‌ ಕೇವಲ 19 ಸ್ಥಾನಗಳಿಗೆ ಕುಸಿತವಾಗಿದೆ. ಆದರೆ, ಈಗ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಜೆಡಿಎಸ್‌- ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಚರ್ಚೆ ಮಾಡಲಾಗಿದೆ. ಈ ಬಗ್ಗೆ ಭಾನುವಾರ ಜೆಡಿಎಸ್‌ ಸಮಾವೇಶದಲ್ಲಿ ಬಹಿರಂಗವಾಗಿ ಮೈತ್ರಿಯ ಬಗ್ಗೆ ಒಪ್ಪಿಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ತನ್ನ ಅಧಿಕೃತ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿ ಟಾಂಗ್ ನೀಡಿದೆ.

Tap to resize

Latest Videos

ದೇಶದ ಎಮರ್ಜೆನ್ಸಿ ವೇಳೆ ಹುಟ್ಟಿಕೊಂಡ ಜನತಾಪಾರ್ಟಿಯ ತುಣುಕು ಬಿಜೆಪಿ: ಮಾಜಿ ಸಿಎಂ ಕುಮಾರಸ್ವಾಮಿ

ಟ್ವೀಟ್‌ನಲ್ಲಿ ಏನಿದೆ: 'ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಆದರೆ ಈಗ "ಜಾತ್ಯಾತೀತತೆ"ಯನ್ನು ವಿಸರ್ಜಿಸಲು ಹೊರಟಿದ್ದಾರೆ. ಜನತಾ ದಳ ಎಂಬ ಹೆಸರನ್ನು "ಕಮಲ ದಳ" ಎಂದು ಬದಲಿಸಿಕೊಂಡರೆ ಒಳಿತು! ಇತ್ತ ಬಿಜೆಪಿ ಕೂಡ ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಟೀಕಿಸುತ್ತಿತ್ತು. ಆದರೆ, ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ' ಎಂದು ಟೀಕೆಯನ್ನು ಮಾಡಿದೆ.

ಇದಾದ ನಂತರ ಮತ್ತೊಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಬಿಜೆಪಿ ಜೆಡಿಎಸ್ ಮೈತ್ರಿ ಹೇಗಿದೆ ಅಂದರೆ ನಡು ನೀರಲ್ಲಿ ಮುಳುಗುತ್ತಿರುವ ಇಬ್ಬರು ಒಬ್ಬರನೊಬ್ಬರು ಕೈ ಹಿಡಿದು ಆಸರೆ ಪಡೆಯುವಂತೆ..! ಪರಸ್ಪರ ಕೈ ಹಿಡಿದು ಇಬ್ಬರೂ ಮುಳುಗಿ ತಳ ಸೇರುವುದು ಖಂಡಿತ. ಮುಳುಗುವವರು ಹುಲ್ಲು ಕಡ್ಡಿಯ ಆಸರೆಯನ್ನಾದರೂ ಪಡೆಯಬೇಕು, ಅದು ಬಿಟ್ಟು ಮತ್ತೊಬ್ಬ ಮುಳುಗುತ್ತಿರುವವರ ಆಸರೆ ಪಡೆದರೆ ಬದುಕಲು ಸಾಧ್ಯವೇ?! ಎಂದು ಟ್ವೀಟ್‌ ಟೀಕೆಯನ್ನು ಮುಂದುವರೆಸಿದೆ.

ಮತ್ರಿ ಬಗ್ಗೆ ಖಚಿತಪಡಿಸಿದ್ದ ಮಾಜಿ ಪ್ರಧಾನಿ ದೇವೇಗೌಡ:
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಮಾತನಾಡಿಮ ದೇವೇಗೌಡರು ದೆಹಲಿಯಲ್ಲಿ ಅನೈತಿಕವಾಗಿ ಸಂಪರ್ಕ ಮಾಡಿದ್ದಾಗಿ ಹೇಳಿದ್ದಾರೆ. ಆದರೆ, ನೈತಿಕತೆ ಯಾರಿಗಿದೆ ಎಂಬುದನ್ನ ನಾನು ಚೆನ್ನಾಗಿ ವಿಶ್ಲೇಷಣೆ ಮಾಡಬಲ್ಲೆ. ರಾಜ್ಯದ ಯಾವ ನಾಯಕನ ನೈತಿಕತೆ ಎಷ್ಟಿದೆ ಅನ್ನೋದನ್ನ ವ್ಯಕ್ತಿಗತವಾಗಿ ವಿಶ್ಲೇಷಣೆ ಮಾಡಬಲ್ಲೆನು. ಆದರೆ ವೈಯಕ್ತಿಕವಾಗಿ ಟೀಕಿಸಲು ನಾನು ಹೋಗಲ್ಲ. 91ನೇ ವಯಸ್ಸಿನಲ್ಲಿ ನನಗೆ ಅದರ ಅವಶ್ಯಕತೆಯೂ ಇಲ್ಲ ಎಂದು  ಟೀಕೆ ಮಾಡಿದ್ದ ಕಾಂಗ್ರೆಸ್‌ ನಾಯಕರಿಗೆ ಖಡಕ್‌ ತಿರುಗೇಟು ನೀಡಿದ್ದರು.

'ಗ್ಯಾರಂಟಿಗಳ ಅಡ್ಡಪರಿಣಾಮದಿಂದ ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತಾಗಿದೆ'- ಎಚ್‌ಡಿಕೆ

ಯಾವ ತತ್ವವೂ ಈ ದೇಶದಲ್ಲಿಲ್ಲ:  ಸಂಸತ್ತಿನಲ್ಲಿ ನಾನು ಮತ್ತೆ ನಿಲ್ಲೋಲ್ಲ ಅಂತ ಹೇಳಿದೆ. ಈ ಪಾರ್ಟಿನ ಮುಗಿಸೋಕೆ ನಿಮ್ಮಿಂದ ಆಗುತ್ತಾ? ಈ ಪಾರ್ಟಿ ಮುಗಿಸ್ತೀರಾ? ಕೇರಳದಲ್ಲಿ ನನ್ನ ಪಕ್ಷ ಇದೆ. ಮಮತಾ ಬ್ಯಾನರ್ಜಿ ವಿರುದ್ದ ಕಾಂಗ್ರೆಸ್, ಕಮ್ಯುನಿಸ್ಟ್ ಒಟ್ಟಾಗಿ ಹೋದರು. ತ್ರಿಪುರದಲ್ಲಿ ನೀವು ಒಂದಾಗಿ ಹೋಗಿಲ್ಲವಾ? ಯಾವ ನೀತಿ ಇದೆ ಈ ದೇಶದಲ್ಲಿ? ಯಾವ ತತ್ವವೂ ಈ ದೇಶದಲ್ಲಿ ಇಲ್ಲ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

click me!