ಮೈಸೂರು ಟಿಕೆಟ್‌ ಯದುವೀರ್ ಗೆ ಬಹುತೇಕ ಫಿಕ್ಸ್, ಕಾಂಗ್ರೆಸ್ ಗೆ ಲಾಭನಾ? ನಷ್ಟನಾ?

By Suvarna News  |  First Published Mar 13, 2024, 11:09 AM IST

ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಯದುವೀರ ಒಡೆಯರ್ ಗೆ ಬಿಜೆಪಿಯಿಂದ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಯದುವೀರ್ ಮುಂದಿರುವ ಸವಾಲುಗಳೇನು? ಜೊತೆಗೆ ಯದುವೀರ್ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ಲಾಭನಾ? ನಷ್ಟನಾ? ಎಂಬ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ.


ಮೈಸೂರು (ಮಾ.13): ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ. ಸಿಂಹ ಬದಲಾಗಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಬಿಜೆಪಿಯಿಂದ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಯದುವೀರ್ ಮುಂದಿರುವ ಸವಾಲುಗಳೇನು? ಜೊತೆಗೆ ಯದುವೀರ್ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ಲಾಭನಾ? ನಷ್ಟನಾ? ಎಂಬ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ.

ಯದುವೀರ್ ಮುಂದಿರುವ ಸವಾಲುಗಳು

  • ಮೈತ್ರಿ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಯದುವೀರ್ ಗೆ ಬಿಗ್ ಚಾಲೆಂಜ್!
  • ಜೆಡಿಎಸ್ ಬಿಜೆಪಿ ನಾಯಕರನ್ನ ಒಟ್ಟಿಗೆ ತೆಗೆದುಕೊಂಡು ಹೋಗುವುದೇ ಯದುವೀರ್ ಗೆಗೆ ಬಿಗ್ ಟಾಸ್ಕ್ .
  • ಜೆಡಿಎಸ್ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸಂಸದ ಪ್ರತಾಪ ಸಿಂಹ.
  • ಬಿಜೆಪಿ ಕಾರ್ಯಕರ್ತರನ್ನ ಹೇಗೆ ಮನವೊಲಿಸುತ್ತಾರೆ ಯದುವೀರ್.
  • ರಾಜಕಾರಣದ ಟೀಕೆ ಟಿಪ್ಪಣಿಗಳನ್ನ ಹೇಗೆ ಎದುರಿಸುತ್ತಾರೆ ಯದುವೀರ್.

Latest Videos

undefined

ಕಿರಾತಕ ಎಚ್‌ಡಿಕೆಯೇ ವಿನಃ ನಮ್ಮ ನಾಯಕರಲ್ಲ!: ಶಾಸಕ ಇಕ್ಬಾಲ್ ಹುಸೇನ್

ಯದುವೀರ್ ಸ್ಪರ್ಧೆಯಿಂದ ಕಾಂಗ್ರೆಸ್ ಗೆ‌ ಆಗುವ ನಷ್ಟಗಳು!

  • ಯದುವೀರ್ ರಾಜ ಮನೆತನದಿಂದ ಬಂದವರು, ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ದತ್ತು ಪುತ್ರ.
  • ಹಳೇ ಮೈಸೂರು ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿರುವ ಮೈಸೂರು ರಾಜ ಮನೆತನ.
  • ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ನಾಲ್ಕು ಭಾರಿ ಸಂಸದರಾಗಿ ಆಯ್ಕೆ.
  • ತಂದೆ ಮಾಡಿರುವ ಕೆಲಸಗಳು  ಯದುವೀರ್ ಗೆ ಶ್ರೀರಕ್ಷೆಯಾಗಬಹುದು.
  • ಯದುವೀರ್ ಕ್ಲೀನ್ ಇಮೇಜ್ ಹೊಂದಿರುವ ವ್ಯಕ್ತಿ.
  • ಕಾಂಗ್ರೆಸ್ ಏನೇ ಟೀಕೆಗಳನ್ನ ಮಾಡಿದ್ರು ಜನರಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ.
  • ಅತ್ಯಂತ ಸೂಕ್ಷ್ಮವಾಗಿ ಚುನಾವಣೆ ಎದುರಿಸಬೇಕಾದ ಅನಿರ್ವಾಯ ಕಾಂಗ್ರೆಸ್.
  • ಯದುವೀರ್ ವಿರುದ್ಧ ಮಾತನಾಡುವಾಗ ಎಚ್ಚರ ವಹಿಸಬೇಕು.

ಕಾಂಗ್ರೆಸ್ ಆಗುವ ಲಾಭಗಳು!

  • ಯದುವೀರ್ ಗೆ ಒಳೇಟು ಬೀಳುವ ಸಾಧ್ಯತೆ.
  • ಬಿಜೆಪಿ ಕಾರ್ಯಕರ್ತರು ಹಾಗೂ ಮೈಸೂರಿನ ಜನತೆಗೆ ಈಗಾಗಲೇ ಪ್ರತಾಪ ಸಿಂಹ ಪರ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡುತ್ತಿರುವುದು.
  • ಯದುವೀರ್ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಬೇಡಿ ಎಂದು ಕ್ಯಾಂಪೇನ್ ಮಾಡುತ್ತಿರುವುದು.

ಬಿಜೆಪಿಗರಿಗೆ ನಾನು ಮನೆದೇವ್ರು, ನನ್ನ ನೆನಪಿಲ್ಲದೆ ನಿದ್ದೆ ಬರಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಇನ್ನು ಹಾಲಿ ಸಂಸದ ಪ್ರತಾಪ್‌ ಸಿಂಹಗೆ ಬಿಜೆಪಿ ಟಿಕೆಟ್‌ ತಪ್ಪುವುದು ಬಹುತೇಕ ಖಚಿತ ಹಿನ್ನೆಲೆಯಲ್ಲಿ  ಮೈಸೂರು ಕೊಡಗು ಕ್ಷೇತ್ರ ಜನತೆ ಪ್ರತಾಪ್ ಸಿಂಹ ಬೆಂಬಲಕ್ಕೆ ನಿಂತು ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಂದು ಸಾಲು ಸಾಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೊಲಂಬಿಯ ಏಷಿಯಾ ಆಸ್ಪತ್ರೆ ವೃತ್ತ, ಹಿನಕಲ್ ಫ್ಲೈ ಓವರ್, ಸಂಸದರ ಕಚೆರಿ ಬಳಿಯೂ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದ್ದು, ಏಕ ಕಾಲದಲ್ಲಿ ಎರಡು ಕಡೆ ಪ್ರತಿಭಟನೆಗೆ ಪ್ರತಾಪ್ ಸಿಂಹ ಅಭಿಮಾನಿಗಳು ಕರೆ ನೀಡಿದ್ದಾರೆ. ಹುಣಸೂರು ಪಟ್ಟಣದಲ್ಲೂ ಪ್ರತಾಪ್ ಸಿಂಹ ಪರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಇನ್ನೊಂದೆಡೆ ಮೈಸೂರಿನಲ್ಲಿ ಪ್ರತಾಪ ಸಿಂಹ ಪರ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಸರಣಿ ಪೋಸ್ಟರ್‌ಗಳ ಮೂಲಕ ಪ್ರತಾಪ ಸಿಂಹ ಪರ ಅಭಿಮಾನಿಗಳು ಬ್ಯಾಟಿಂಗ್ ನಡೆಸಿದ್ದಾರೆ. ಬಡವರ ಮಕ್ಕಳು ಬೆಳೆಯಬಾರದಾ? ಮೈಸೂರು ಹೈವೇ ಮಾಡಿದಕ್ಕಾಗಿ ಟಿಕೆಟ್ ಇಲ್ವಾ? ಕಾಂಗ್ರೆಸ್ಸಿಗೆ ಟಕ್ಕರ್‌ ಕೊಟ್ಟಿದಕ್ಕೆ ಇಲ್ವಾ? ಟಿಪ್ಪು ರೈಲಿಗೆ ಒಡೆಯರ್ ಹೆಸರು ಇಟ್ಟಿದಕ್ಕೆ ಇಲ್ವಾ? ಅಭಿವೃದ್ಧಿ ಕೆಲಸ ಮಾಡಿದಕ್ಕೆ ಇಲ್ವಾ? ಒಕ್ಕಲಿಗ ಅನ್ನೋ ಕಾರಣಕ್ಕೆ ಟಿಕೆಟ್ ಕೊಡಲ್ವಾ? ಹಲವು ಪೋಸ್ಟರ್‌ಗಳ ಮೂಲಕ ಪ್ರತಾಪಸಿಂಹ ಪರ ಅಭಿಯಾನ ನಡೆಸಲಾಗಿತ್ತಿದೆ.

click me!