ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕಾಲದಿಂದ ದರಿದ್ರವನ್ನು ಹೊತ್ತುಕೊಂಡು ಬಂದಿದೆ. ಇದು ದರಿದ್ರ ಸರ್ಕಾರ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
ಮೈಸೂರು (ಜ.13): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕಾಲದಿಂದ ದರಿದ್ರವನ್ನು ಹೊತ್ತುಕೊಂಡು ಬಂದಿದೆ. ಇದು ದರಿದ್ರ ಸರ್ಕಾರ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿ ಯೋಜನೆಗೆ ದಲಿತರ ದುಡ್ಡು ತಿಂದಿದ್ದಾರೆ. ₹25 ಸಾವಿರ ಕೋಟಿ ದಲಿತರ ಹಣ ಎಲ್ಲಿ ಹೋಯ್ತು ಅಂದ್ರೇ ಸಿಎಂ ಹಾರಿಕೆಯ ಉತ್ತರ ಕೊಡುತ್ತಾರೆ. ದಲಿತರನ್ನು ವಿರೋಧಿಸುವ ಮಾಫಿಯಾವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪದೇ ಪದೇ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಮಾತನಾಡುವುದು ಕಾಂಗ್ರೆಸ್ ನವರಿಗೆ ಚಟವಾಗಿದೆ. ಅವರು ಬದುಕಿದ್ದ ಕಾಲದಲ್ಲಿ ಅಂಬೇಡ್ಕರ್ ಗೆ ಕಾಂಗ್ರೆಸ್ ಗೌರವ ಕೊಡಲಿಲ್ಲ. ಸಂವಿಧಾನ ಪೀಠಿಕೆ ಬದಲಿಸಿದ್ದೇ ಕಾಂಗ್ರೆಸ್. ಈಗ ಸಂವಿಧಾನದ ಪರ ಇದ್ದೇವೆ ಎಂದು ನಂಬಿಸೋಕೆ ಸದಾ ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ಓಡಾಡುತ್ತಾರೆ ಎಂದು ತಿರುಗೇಟು ನೀಡಿದರು.
ಕಲಬುರಗಿ ಈಗ ‘ಪ್ರಿಯಾಂಕ್ ಖರ್ಗೆ ರಿಪಬ್ಲಿಕ್’: ಛಲವಾದಿ ನಾರಾಯಣಸ್ವಾಮಿ
ದಲಿತ ವಿರೋಧಿಯಾಗಿದೆ: ಕಾಂಗ್ರೆಸ್‍ನಲ್ಲಿ ದಲಿತ್ ಮಾಫಿಯಾ ಶುರುವಾಗಿದೆ, ಇದು ದಲಿತ ವಿರೋಧಿ ಸರ್ಕಾರವಾಗಿದೆ. ಕಾಂಗ್ರೆಸ್ ಕೆಲ ಕುಟುಂಬಗಳ ಹಿಡಿತದಲ್ಲಿದೆ. ದಲಿತ ಮಾಫೀಯಾದಲ್ಲಿ ಎರಡು ಗುಂಪುಗಳಿದ್ದು, ಒಂದು ದಲಿತ ವಿರೋಧಿ ಮಾಫಿಯಾವಿದೆ, ಇನ್ನೊಂದು ದಲಿತ ಮಾಫಿಯಾವಿದೆ ಇವರೆಲ್ಲರು ಮತ್ತೋರ್ವ ದಲಿತ ಬೆಳೆಯಲು ಬಿಡಲ್ಲ ಕಾಂಗ್ರೆಸ್‍ನಲ್ಲಿ ದಲಿತರಿಗೆ ಬೆಲೆ ಇಲ್ಲ, ಕಾಂಗ್ರೆಸ್ ನಾಶವಾಗುವ ಸ್ಥಿತಿಯಲ್ಲಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನುಡಿದಿದ್ದಾರೆ.
ಚಿತ್ರದುರ್ಗಕ್ಕೆ ಭೀಟಿ ನೀಡಿದ್ದ ಅವರು, ಮಾದಾರ ಚನ್ನಯ್ಯ ಗುರುಪೀಠ, ಛಲವಾದಿ ಗುರುಪೀಠ ಹಾಗೂ ಲಂಬಾಣಿ ಗುರುಪೀಠಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಮ್ಮುಖದಲ್ಲಿ ನಕ್ಸಲರು ಶರಣಾಗತಿ ವಿಚಾರ 25 ವರ್ಷದಿಂದ ಯಾರಿಗೂ ಸಿಗದೇ ಇರೋರು ನಿಮ್ಮ ಕೈಗೆ ಹೇಗೆ ಸಿಕ್ಕರು ಇಷ್ಟು ವರ್ಷ ಭಯನೇ ಇಲ್ಲದಿರೋರು ವಿಕ್ರಂ ಗೌಡ ಹತ್ಯೆ ಆದ ಮೇಲೆ ಭಯ ಬಂತಾ? ಇದೊಂದು ಸರ್ಕಾರದ ಪಿತೂರಿ ಕೆಲಸ ನಕ್ಸಲರು ಸರೆಂಡರ್ ಆಗಿಲ್ಲ, ಸರ್ಕಾರವೇ ನಕ್ಸಲರಿಗೆ ಸರೆಂಡರ್ ಆಗಿದೆ ಬರಿಗೈನಲ್ಲಿ ಶರಣಾಗಿದ್ದಾರೆ ಅವರ ಶಸ್ತ್ರಾಸ್ತ್ರಗಳು ಎಲ್ಲೋದ್ವು, ಇವರಿಂದೆ ಇನ್ನು ನಕ್ಸಲಿರಿದ್ದಾರಾ? ಶಸ್ತ್ರಾಸ್ತ್ರ ಅವರಿಗೆ ಕೊಟ್ಟು ಬಂದಿದ್ದಾರೆಂಬ ಪ್ರಶ್ನೆ ಮೂಡಲಿವೆ ನಕ್ಸಲರನ್ನು ಕೋರ್ಟ್, ಪೊಲೀಸರ ಮುಂದೆ ಶರಣಾಗತಿ ಮಾಡಬೇಕು ಸಿಎಂ ಮುಂದೆ ನಕ್ಸಲರ ಶರಣಾಗತಿ ಸರಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್ ಅಧಿವೇಶನಕ್ಕೆ ತೆರಿಗೆ ಹಣ ಪೋಲು ಬೇಡ: ಛಲವಾದಿ ನಾರಾಯಣಸ್ವಾಮಿ
ಈ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟರನ್ನು ರಕ್ಷಣೆ ಮಾಡುತ್ತಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ನಾನು ಸಿಎಂ, ನೀನು ಸಿಎಂ ಆಗಬೇಕೆಂಬ ಪರಿಸ್ಥಿತಿ ಇದೆ. ಯಾರು ಊಟಕ್ಕೂ ಸೇರುವ ಸ್ವತಂತ್ರ ಇಲ್ಲ, ಹೊಡೆದು ಆಳುವ ನೀತಿ ರಾಜ್ಯದಲ್ಲಿದೆ ಮುಡಾದಲ್ಲಿ ಸುಳ್ಳು ದಾಖಲೆ ನೀಡಿ ಸೈಟ್ ಪಡೆದ ವಿಚಾರ ಇದು 14 ಸೈಟ್‌ಗಳ ವಿಚಾರವಲ್ಲ, ಸಾವಿರಾರು ಸೈಟ್‍ಗಳ ವಿಚಾರ ಅವರನ್ನು ರಕ್ಷಣೆ ಮಾಡಲು ಎಲ್ಲಾ ಕೇಸ್ ಮುಚ್ಚಿ ಹಾಕುವ ಪ್ರಯತ್ನ ಜಗ್ಗಲ್ಲ, ಬಗ್ಗಲ್ಲ ಎಂದು ಹೇಳಿ ರಾತ್ರೋರಾತ್ರಿ ಹೋಗಿ ಸೈಟ್ ವಾಪಾಸ್ ಯಾಕ್ ಕೊಟ್ರಿ ತಪ್ಪು ಮಾಡಿದ್ದು ಅರಿವಾದ್ಮೇಲೆ ಸಿಎಂ ಸೈಟ್ ವಾಪಾಸ್ ಕೊಟ್ಟಿದೀರಿ ನಿಮಗೂ ಭ್ರಷ್ಟಾಚಾರಕ್ಕೂ ಹತ್ತಿರದ ನಂಟಿದೆ ಎಂದು ಸಿಎಂ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.