ಗ್ಯಾರಂಟಿಗಳನ್ನೇ ಕಾಂಗ್ರೆಸ್‌ ಅಭಿವೃದ್ದಿ ಎಂದುಕೊಂಡಿದೆ: ಛಲವಾದಿ ನಾರಾಯಣಸ್ವಾಮಿ

Published : Dec 01, 2025, 07:19 AM IST
Chalavadi Narayanaswamy

ಸಾರಾಂಶ

ಸರ್ಕಾರದ ಅಭಿವೃದ್ಧಿ ಎಂದರೆ 5 ಗ್ಯಾರಂಟಿ ಯೋಜನೆ ಎಂದುಕೊಂಡಿದ್ದಾರೆ. ಅತಿವೃಷ್ಟಿ, ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಇಲ್ಲ. ನಿಗಮ ಮಂಡಳಿಗಳಲ್ಲಿ ಸಂಬಳ ತೆಗೆದುಕೊಳ್ಳುವುದು ಬಿಟ್ಟರೆ ಯಾವುದೇ ಅಭಿವೃದ್ಧಿ ಇಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.

ಶಿವಮೊಗ್ಗ (ಡಿ.01): ರಾಜ್ಯದ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಎಂದರೆ 5 ಗ್ಯಾರಂಟಿ ಯೋಜನೆ ಎಂದುಕೊಂಡಿದ್ದಾರೆ. ಅತಿವೃಷ್ಟಿ, ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಇಲ್ಲ. ನಿಗಮ ಮಂಡಳಿಗಳಲ್ಲಿ ಸಂಬಳ ತೆಗೆದುಕೊಳ್ಳುವುದು ಬಿಟ್ಟರೆ ಯಾವುದೇ ಅಭಿವೃದ್ಧಿ ಇಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಗೊಂದಲದ ವಾತಾವರಣ ಇದೆ. ವಿರೋಧ ಪಕ್ಷದಿಂದ ಆಗಲಿ ಸಂಘಟನೆಗಳಿಂದಾಗಲಿ ಗೊಂದಲಗಳಿಲ್ಲ. ರಾಜ್ಯದಲ್ಲಿ ದರೋಡೆ ಆಗುತ್ತಿದೆ. ಪೋಲಿಸರೇ ದರೋಡೆ ಮಾಡಿಸುತ್ತಾರೆ. ಜೈಲಿನಲ್ಲಿ ಕೈದಿಗಳಿಗೆ ರಾಜಾತಿತ್ಯ, ಭಯೋತ್ಪಾದಕರಿಗೆ ಫೋನ್ ಸಿಗುತ್ತದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಎರಡೂವರೆ ವರ್ಷ ಆಯ್ತು ಅಧಿಕಾರದಿಂದ ಕೆಳಗಿಳಿಯಿರಿ, ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕು ಎಂದು ಸಮುದಾಯದವರು ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಲ್ಲಿ ಇರುವ ದಲಿತ ನಾಯಕರಲ್ಲಿ ಬಾಯಿ ಕೆಲಸ ಮಾಡೋಲ್ಲ, ದಲಿತರಿಗೆ ಎಸ್ ಸಿಪಿ, ಟಿಎಸ್ ಪಿ ಮೀಸಲಿಟ್ಟ ಹಣ ಕೊಟ್ಟಿಲ್ಲ. ಎಲ್ಲರಿಗೂ ಪ್ರೀ ಇದೆ ದಲಿತರಿಗೆ ಪ್ರೀ ಇಲ್ಲ ಎಂದರು.

ಸಿ ವೋಟರ್ ಸಮೀಕ್ಷೆ ಬಂದಿದೆ

ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ ಎಂದು ಕಾಂಗ್ರೆಸ್ ಹೆದರಿಸುತ್ತದೆ. ಇಂಗ್ಲಿಷ್ ಪಕ್ಷ ಮುಳುಗಿದರೆ ದಲಿತರಿಂದ ಮುಳುಗಿತು ಎಂದು ಹೇಳಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಬುದ್ಧಿವಂತಿಕೆಯಿಂದ ದಲಿತ ನಾಯಕರನ್ನು ಅಧ್ಯಕ್ಷರಾಗಿ ಮಾಡಿದರು. ಸಿ ವೋಟರ್ ಸಮೀಕ್ಷೆ ಬಂದಿದೆ. ಸಮೀಕ್ಷೆ ಪ್ರಕಾರ ದಲಿತ ಸಿಎಂ ಬಗ್ಗೆ ಮತ್ತು ಡಿ.ಕೆ.ಶಿವಕುಮಾರ್‌ ಸಿಎಂ ಆಗುವ ಬಗ್ಗೆ ಯಾರ ವಿಶ್ವಾಸವಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ರಾಜ್ಯದ ಜನತೆ ನೆಮ್ಮದಿ ಕಳೆದುಕೊಂಡಿದ್ದಾರೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ ಪಡೆದ ನಿವೇಶಗಳನ್ನು ವಾಪಸ್ ಕೊಟ್ಟರೆ ಕೇಸ್ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟಿಗೆ ಏರ್ಪೋರ್ಟ್ ನೀಡಿದ ನಿವೇಶನವನ್ನು ಅವರು ವಾಪಸ್ ಕೊಟ್ಟರು. ಅದಕ್ಕೋಸ್ಕರ ಕೇಸ್ ಇಲ್ಲ ಎಂದು ಕುಟುಕಿದರು. ಗೋಷ್ಠಿಯಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್‌ ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ - ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ