ಕೊರೊನಾ ವೇಳೆ ಮೋದಿ ಬದಲು ಸೋನಿಯಾ, ರಾಹುಲ್ ಇದ್ದಿದ್ರೆ ನಮ್ಮೆಲ್ಲರ ಉಸಿರು ನಿಲ್ತಿತ್ತು : ಛಲವಾದಿ ನಾರಾಯಣಸ್ವಾಮಿ

Published : Dec 07, 2024, 07:12 PM ISTUpdated : Dec 07, 2024, 07:13 PM IST
ಕೊರೊನಾ ವೇಳೆ ಮೋದಿ ಬದಲು ಸೋನಿಯಾ, ರಾಹುಲ್ ಇದ್ದಿದ್ರೆ ನಮ್ಮೆಲ್ಲರ ಉಸಿರು ನಿಲ್ತಿತ್ತು : ಛಲವಾದಿ ನಾರಾಯಣಸ್ವಾಮಿ

ಸಾರಾಂಶ

ಕೊವಿಡ್ ಅಂದ್ರೇನು ಡಿಸಿಎಂ ಡಿಕೆ ಶಿವಕುಮಾರ್‌ಗೆ ಅವರಿಗೆ ಗೊತ್ತಾ? ಕೊವಿಡ್ ಕುರಿತು ಡಿಕೆ ಶಿವಕುಮಾರ ಆರೋಪಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ಕೋಲಾರ (ಡಿ.7):ಕೊವಿಡ್ ಅಂದ್ರೇನು ಡಿಸಿಎಂ ಡಿಕೆ ಶಿವಕುಮಾರ್‌ಗೆ ಅವರಿಗೆ ಗೊತ್ತಾ? ಕೊವಿಡ್ ಕುರಿತು ಡಿಕೆ ಶಿವಕುಮಾರ ಆರೋಪಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ಕೊರೊನಾ ವೇಳೆ ಅರ್ ಟಿಪಿಸಿಅರ್‌ಗಾಗಿಯೆ 84 ಲಕ್ಷ ಟೆಸ್ಟ್ ಗೆ 500 ಕೋಟಿ ಹಗರಣ ನಡೆದಿದೆ ಎಂಬ ಡಿಕೆ ಶಿವಕುಮಾರ ಆರೋಪ ವಿಚಾರಕ್ಕೆ ಇಂದು ಕೋಲಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೊವಿಡ್ ಬಂದಿದ್ದ ಕಾಲದ ಪರಿಸ್ಥಿತಿ ಹೇಗಿತ್ತು? ದೇಶದಲ್ಲಷ್ಟೇ ಅಲ್ಲ ಇಡೀ ವಿಶ್ವಕ್ಕೆ ಕೊರೊನಾ ಬಂದಿತ್ತು. ಬೀದಿ ಬೀದಿಗಳಲ್ಲಿ ಜನ ಸಾಯ್ತಾ ಇದ್ರೂ ಚಿತಾಗಾರಗಳು ನಿರಂತರವಾಗಿ ಉರಿಯುತ್ತಲೇ ಇದ್ವು. ಆಸ್ಪತ್ರೆಗಳು ತುಂಬಿಹೋಗಿದ್ವು. ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಕೊರೊನಾಗೆ ತುತ್ತಾಗಿ ಸಾಯ್ತಾ ಇದ್ರು. ಬದುಕಿರುವವರು ತಿಂಗಳಾದ್ರೂ ಕುಟುಂಬದಿಂದಲೇ ದೂರ ಉಳಿದಿದ್ದರು. ಅದೊಂದು ಎಮರ್ಜೆನ್ಸಿ ಸಮಯ. ಅಲ್ಲದೇ ಅದು ಬೆಂಗಳೂರಿಗಷ್ಟೇ ಬಂದಿದ್ದಲ್ಲ. ಆ ಸಮಯದಲ್ಲಿ ಜನರ ಪ್ರಾಣ ರಕ್ಷಣೆಗಾಗಿ ಏನು ಮಾಡಬೇಕಿತ್ತು ಆ ಎಲ್ಲ ನಿರ್ಧಾರವನ್ನು ತೆಗೆದುಕೊಂಡು ಅಂದಿನ ಮೋದಿ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ ಎಂದರು.

ಕೋವಿಡ್‌ ವೇಳೆ ನೆರವಾಗಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಡೊಮಿನಿಕಾ ದೇಶದ ಅತ್ಯುನ್ನತ ಗೌರವ!

ಕೊರೊನಾ ಸಮಯದಲ್ಲಿ ಎಮರ್ಜೆನ್ಸಿ ಇತ್ತು. ಆದರೆ ಅದು ಇಂದಿರಾಗಾಂಧಿ ರೀತಿಯಲ್ಲಿ ಇದ್ದ ಎಮರ್ಜೆನ್ಸಿ ಅಲ್ಲ. ಕೊರೊನಾ ವೇಳೆ ಸೋನಿಯಾ, ರಾಹುಲ್ ಗಾಂಧಿಯಂಥವರು ಅಧಿಕಾರದಲ್ಲಿದ್ದಿದ್ರೆ ನಮ್ಮೆಲ್ಲರ ಉಸಿರು ನಿಲ್ಲುತ್ತಿತ್ತು. ಯಾಕೆಂದ್ರೆ ಕೊರೊನಾ ಎಮರ್ಜೆನ್ಸಿ ಸಮಯದಲ್ಲೂ ಕಾಂಗ್ರೆಸ್‌ನವರು ಸಾವು ನೋವು ಲೆಕ್ಕ ಹಾಕುತ್ತಿದ್ರು. ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದ್ರು, ಹಗುರವಾಗಿ ಮಾತನಾಡಿದ್ರು. ಅದು ಬಿಜೆಪಿ ವ್ಯಾಕ್ಸಿನ್, ಅದನ್ನ ಪಡೆದರೆ ಮಕ್ಕಳಾಗಲ್ಲ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ರು. ಒಂದು ಸಮುದಾಯ ಇದೇ ಕಾರಣಕ್ಕೆ ವ್ಯಾಕ್ಸಿನ್ ತೆಗೆದುಕೊಳ್ಳದೆ ಇತರರಿಗೆ ಕೊವಿಡ್ ಹರಡುವಂತಾಯ್ತು ಎಂಬುದು ಯಾರೂ ಮರೆಯುವಂತಿಲ್ಲ. ಅಂಥ ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಬೇಕಿತ್ತು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿತ್ತು. ಆದರೆ ಪ್ರಧಾನಿ ಮೋದಿಯವರು ಅಂಥ ಸಮಯದಲ್ಲೂ ತಮ್ಮ ಕೆಲಸ ಸಮರ್ಥವಾಗಿ ನಿಭಾಯಿಸಿದ್ರು. ಕೊವಿಡ್ ವೇಳೆ ಅಪಪ್ರಚಾರ ಮಾಡಿದ ಕಾಂಗ್ರೆಸ್, ಕೊವಿಡ್ ವೇಳೆ ಯಾವ ಜನರ ಸಹಾಯಕ್ಕೆ ಬಾರದ ಕಾಂಗ್ರೆಸ್ ಈಗ ಕೊವಿಡ್ ಹಗರಣದ ಬಗ್ಗೆ ಮಾತನಾಡುತ್ತಿದೆ ಎಂದು ಹರಿಹಾಯ್ದರು. 

ಕೋವಿಡ್ ಮಾತ್ರ ಯಾಕೆ? ಕೆಂಪಣ್ಣ ವರದಿ ಬಗ್ಗೆಯೂ ಚರ್ಚೆಯಾಗಲಿ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸವಾಲು!

ಹಗರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಮುಡಾ ಹಗರಣದ್ಲಲಿ ಅಕ್ರಮವಾಗಿ ನಿವೇಶನ ಪಡೆದು ಯಾವಾಗ ತಮ್ಮ ಬುಡಕ್ಕೆ ತನಿಖೆ ಬಿಸಿ ತಟ್ಟಲಾರಂಭಿಸಿತೋ ಆಗ ರಾತ್ರೋರಾತ್ರಿ ನಿವೇಶನಗಳನ್ನು ವಾಪಸ್ ಕೊಟ್ಟಿದ್ದು ಇದೇ ಕಾಂಗ್ರೆಸ್ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರ ಜಮೀನು ವಾಪಸ್ ಮಾಡಿದ್ದು ಇದೇ ಕಾರಣಕ್ಕೆ. ಈ ಎಲ್ಲ ಅಕ್ರಮಗಳನ್ನು ಮಾಡಿ ಬಿಜೆಪಿಯಲ್ಲಿ ಅಕ್ರಮ ನಡೆದಿದೆ ಎಂದು ಕತೆ ಕಟ್ಟುತ್ತಿದ್ದಾರೆ. ಕಾಂಗ್ರೆಸ್ ನ ಅಕ್ರಮಗಳ ತನಿಖೆ ಆಗಬೇಕು, ಸಿಬಿಐನಿಂದ ತನಿಖೆ ಆಗಬೇಕು ಆಗ ಇವರ ಸಾಚಾತನ ಬಯಲಿಗೆ ಬರುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ