ಕಾಂಗ್ರೆಸ್‌ ರಾಕ್ಷಸರ ಸಮರ್ಥನೆಗೆ ನಿಂತುಕೊಂಡಿದೆ: ಚಕ್ರವರ್ತಿ ಸೂಲಿಬೆಲೆ

Published : Oct 12, 2023, 10:43 PM IST
ಕಾಂಗ್ರೆಸ್‌ ರಾಕ್ಷಸರ ಸಮರ್ಥನೆಗೆ ನಿಂತುಕೊಂಡಿದೆ: ಚಕ್ರವರ್ತಿ ಸೂಲಿಬೆಲೆ

ಸಾರಾಂಶ

ಕಾಂಗ್ರೆಸ್‌ ರಾಕ್ಷಸರ ಸಮರ್ಥನೆಗೆ ನಿಂತುಕೊಂಡಿದೆ. ಕೇವಲ ಮತಗಳಿಗಾಗಿ ಯಾರನ್ನಾದರೂ‌ ಬೆಂಬಲಿಸುವವರ ಕೈಯಲ್ಲಿ ದೇಶ ಕೊಟ್ಟರೆ ಹೇಗೆ ಎಂಬ ಚಿಂತೆ ಈಗ ಎಲ್ಲರನ್ನು ಕಾಡುತ್ತಿದೆ ಎಂದು ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. 

ಹುಬ್ಬಳ್ಳಿ (ಅ.12): ಕಾಂಗ್ರೆಸ್‌ ರಾಕ್ಷಸರ ಸಮರ್ಥನೆಗೆ ನಿಂತುಕೊಂಡಿದೆ. ಕೇವಲ ಮತಗಳಿಗಾಗಿ ಯಾರನ್ನಾದರೂ‌ ಬೆಂಬಲಿಸುವವರ ಕೈಯಲ್ಲಿ ದೇಶ ಕೊಟ್ಟರೆ ಹೇಗೆ ಎಂಬ ಚಿಂತೆ ಈಗ ಎಲ್ಲರನ್ನು ಕಾಡುತ್ತಿದೆ ಎಂದು ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಲೆಸ್ತೀನ್ ಹಮಾಸ್‌ ಉಗ್ರರು ನಡೆಸಿದ ಹೇಯ ಕೃತ್ಯವನ್ನು ಎಲ್ಲ ದೇಶಗಳು ಖಂಡಿಸಿವೆ. 

40ಕ್ಕೂ ಹೆಚ್ಚು ಮಕ್ಕಳನ್ನು ಜೀವಂತವಾಗಿ ದಹಿಸಿದ್ದಾರೆ. ಇದು ಮನುಷ್ಯರು‌ ಮಾಡುವ ಕೆಲಸವಲ್ಲ, ರಾಕ್ಷಸರು ಮಾಡುವ ಕೆಲಸ. ಈ ರಾಕ್ಷಸರಿಗೆ ಬೆಂಬಲಿಸುತ್ತಿರುವವರು ಕತಾರ್, ಇರಾನ್, ಟರ್ಕಿ ರಾಷ್ಟ್ರಗಳು. ಅದನ್ನು ಬಿಟ್ಟರೆ ಕಾಂಗ್ರೆಸ್ ಬೆಂಬಲಿಸುತ್ತಿರುವುದು ದುರಂತದ ಸಂಗತಿ ಎಂದರು. ಕಾಂಗ್ರೆಸ್ ರಾಕ್ಷಸರ ಸಮರ್ಥನೆಗೆ ನಿಂತುಕೊಂಡಿದೆ. ಇದು ಭಾರತದ ಇತಿಹಾಸದ ಪಾಲಿಗೆ ಕಪ್ಪುಚುಕ್ಕೆಯಾಗಿ ಗುರುತಿಸಲ್ಪಡುತ್ತದೆ ಎಂದರು.

ರಾಮನ ಜನ್ಮಸ್ಥಳ ಹಿಂದುಗಳ ಪವಿತ್ರ ಪುಣ್ಯಭೂಮಿ: ಚಕ್ರವರ್ತಿ ಸೂಲಿಬೆಲೆ

ಎಲ್ಲ ಬ್ರದರ್ಸ್‌ಗಳಿಗಾಗಿ: ಕಾಂಗ್ರೆಸ್ಸಿನವರು ಕುಕ್ಕರ್ ಬಾಂಬ್ ಇಟ್ಟವರನ್ನು, ಗಲಭೆಕೋರರನ್ನು ನಮ್ಮ ಬ್ರದರ್ಸ್ ಗಳು ಎಂದು ಹೇಳುತ್ತಾರೆ. ಇನ್ನೂ ಮುಂದೆ ಹೋಗಿ ಡಿಜೆಹಳ್ಳಿ, ಕೆಜಿ ಹಳ್ಳಿಯಲ್ಲಿ ತೊಂದರೆ ಮಾಡಿದವರನ್ನು ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದಾರೆ. ತ್ರಿಶೂಲ ಕೈಯಲ್ಲಿಡಿದು ಹಿಂದುಗಳು ಹೋಗಬೇಕಾದರೆ ಮುಸ್ಲಿಮರು ಯಾಕೆ ಕೈಯಲ್ಲಿ ತಲ್ವಾರ್ ಹಿಡಿಯಬಾರದು ಎಂದು ಪ್ರಶ್ನೆ ಕೇಳುತ್ತಾರೆ. ಇದನ್ನೆಲ್ಲ ನೋಡಿದರೆ ಕರ್ನಾಟಕ ಯಾವ ದಿಕ್ಕಿನೆಡೆಗೆ ಹೋಗುತ್ತಿದೆ ಎಂಬುದನ್ನು ತಿಳಿಸುತ್ತದೆ ಎಂದು ವಿಷಾಧಿಸಿದರು.

ಹಮಾಸ್‌ ಜಯಂತಿ: ಮಹಿಷ ರಾಕ್ಷಸನೇ ಆಗಲಿ, ಹಮಾಸ ಉಗ್ರರೇ ಆಗಿರಲಿ, ಲಷ್ಕರ್‌ ತೊಯಿಬಾ ಯಾರೆ ಆಗಿರಲಿ. ಕಾಂಗ್ರೆಸ್ಸಿನವರಿಗೆ ಅವಕಾಶ ಸಿಕ್ಕರೆ ಹಮಾಸರ ಪರವಾಗಿ ಒಂದು ಜಯಂತಿ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ. ಟಿಪ್ಪು ಜಯಂತಿ ಆಚರಣೆಗೆ ತಂದಿದ್ದು ಇವರೇ. ಮುಸ್ಲಿಮರು ಪೈಗಂಬರರ ಜಯಂತಿ ಬಿಟ್ಟರೆ ಮತ್ತೆ ಯಾರ ಜಯಂತಿ ಆಚರಿಸುವುದಿಲ್ಲ. ಯಾರ್‍ಯಾರು ಹಿಂದುಗಳ ಮೇಲೆ ಆಕ್ರಮಣ ಮಾಡಿದ್ದಾರೋ ಅಂತಹ ರಾಕ್ಷಸರನ್ನು ಆಯ್ಕೆ ಮಾಡಿಕೊಂಡು ಅವರನ್ನು ವೈಭವಿಕರಿಸಿಕೊಳ್ಳುವುದು ಕಾಂಗ್ರೆಸ್ಸಿಗೆ ರೂಢಿಯಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಈ ಮಹಿಷ ದಸರಾ ಆಚರಣೆ ಎಂದರು.

ಸಮರ್ಥನೆ ಖಂಡನಾರ್ಹ: ಇತ್ತೀಚಿನ ದಿನಗಳಲ್ಲಿ ಗಾಂಧಿ ಹತ್ಯೆಗೈದ ಗೋಡ್ಸೆ ಅವರ ಬ್ಯಾನರ್‌ ಹಾಕಿಕೊಂಡು ಪ್ರಚಾರ ಮಾಡುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸೂಲಿಬೆಲೆ, ಗೋಡ್ಸೆಯನ್ನು ವೈಭವೀಕರಿಸುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಆದರೆ ಅವರಿಗೆ ಭಾರತದ ಮೇಲಿದ್ದ ಭಕ್ತಿ, ಹಿಂದು ಧರ್ಮದ ಬಗ್ಗೆ ಅವರಿಗಿದ್ದ ಆಲೋಚನೆಗಳ ಕುರಿತು ಸಂಭ್ರಮಿಸಬಹುದು. ತಲ್ವಾರ ಹಿಡಿದುಕೊಂಡು, ಟಿಪ್ಪು ಸುಲ್ತಾನ್‌, ಔರಂಗಜೇಬನ ಹಾಕ್ಕೊಂಡು ಮೆರೆಯುತ್ತಾ ಅಖಂಡ ಭಾರತ ಔರಂಗಜೇಬನ ಪರಿಕಲ್ಪನೆ ಎಂಬುದನ್ನು ಸರ್ಕಾರ ಸಮರ್ಥನೆ ಮಾಡುತ್ತಿರುವುದು ಇದಕ್ಕಿಂತಲೂ ಸಾವಿರ ಪಟ್ಟು ನೀಚ ಕೃತ್ಯ ಎಂದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸಲು ಬೈಕ್‌ ರ್‍ಯಾಲಿ: ಚಕ್ರವರ್ತಿ ಸೂಲಿಬೆಲೆ

ಹಿಂದೂಗಳು ಎಚ್ಚರಿಕೆಯಿಂದಿರಿ: ಹಮಾಸ್ ಉಗ್ರರು ಮಾಡಿದ ಕೃತ್ಯ ಅತ್ಯಂತ ಭಯಾನಕ ಆಗಿದೆ. ಹಮಾಸ್ ಕೃತ್ಯಕ್ಕೆ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟ ಬೆಂಬಲ ಕೊಟ್ಟಿದ್ದು ದೊಡ್ಡ ದುರಂತ. ಇದರಿಂದಾಗಿ ಭಯೋತ್ಪಾದಕರಿಗೆ ಮತ್ತೆ ಜೀವ ಬಂದಂತೆ ಆಗಲ್ವಾ? ಇಂಡಿಯಾ ಒಕ್ಕೂಟ ಹೆಸರಿಗೆ ತಕ್ಕಂತೆ ಭಾರತವನ್ನು ಒಡೆಯುವುದಾಗಿದೆ. ಮುಂದಿನ 6 ತಿಂಗಳ ಕಾಲ ಹಿಂದೂಗಳಿಗೆ ನಿರ್ಣಾಯಕ ಘಳಿಗೆಯಾಗಿದೆ. ಈ ಕುರಿತು ಹಿಂದುಗಳು ಎಚ್ಚರಿಕೆಯಿಂದಿರಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
Karnataka News Live: ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ: ಯತೀಂದ್ರಗೆ ಆಲ್ ದಿ ಬೆಸ್ಟ್ ಹೇಳಿದ ಕಾಂಗ್ರೆಸ್ ಶಾಸಕ