ಚಕ್ರವರ್ತಿ ಸೂಲಿಬೆಲೆ ಹೇಳಿದ್ದರಲ್ಲಿ ಒಂದು ಕೆಲಸವಾಗಿದ್ದರೂ ಚರ್ಚೆಗೆ ಸಿದ್ಧ: ಸತೀಶ್‌ ಜಾರಕಿಹೊಳಿ

By Sathish Kumar KHFirst Published Nov 19, 2022, 2:54 PM IST
Highlights

ಬಿಜೆಪಿ ವಕ್ತಾರರು ನೀಡದ ಹೇಳಿಕೆಗಳಲ್ಲಿ ಯಾವುದನ್ನು ಫುಲ್‌ಫಿಲ್‌  ಮಾಡಿದ್ದಾರೆ? ದೇಶ ಮತ್ತು ರಾಜ್ಯದಲ್ಲಿ ಚಿನ್ನದ ರಸ್ತೆ ಎಲ್ಲಿದೆ? ನಾವು ಈಗ ಅದನ್ನು ಹುಡುಕಬೇಕಾಗಿದೆ. ಇದರಲ್ಲಿ ಒಂದು ಕೆಲಸ ಪೂರ್ಣಗೊಳಿಸಿದ್ದರೂ ನಾವು ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ ಮುಕ್ತವಾಗಿ ಚರ್ಚಿಸಲು ಸಿದ್ಧರಾಗಿದ್ದೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ (ನ.19) : ಹಿಂದೂ ಪದದ ಬಗ್ಗೆ ಓಪನ್‌ ಚಾಲೆಂಜ್‌ ನೀಡಿರುವ ಬಿಜೆಪಿ ವಕ್ತಾರ ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ ನಾವು ಮುಕ್ತವಾಗಿ ಚರ್ಚಿಸಲು ಸಿದ್ಧರಾಗಿದ್ದೇವೆ. ಆದರೆ, ಅವರು 10 ವರ್ಷದಲ್ಲಿ ಏನು ಮಾಡುವುದಾಗಿ ಹೇಳಿಕೆ ನೀಡಿದ್ದರೋ, ಆ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿದ್ಧಾರೆಯೇ ಎನ್ನುವುದು ಪರಿಶೀಲನೆ ಮಾಡುತ್ತಿದ್ದೇವೆ. ಇದರಲ್ಲಿ ಒಂದು ಕೆಲಸ ಪೂರ್ಣಗೊಳಿಸಿದ್ದರೂ ನಾವು ಚರ್ಚೆ ಮಾಡುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈವರೆಗೆ ಬಿಜೆಪಿ (BJP) ವಕ್ತಾರರು ನೀಡದ ಹೇಳಿಕೆಗಳಲ್ಲಿ ಯಾವುದನ್ನು ಫುಲ್‌ಫಿಲ್‌ (Fullfil) ಮಾಡಿದ್ದಾರೆ? ದೇಶ ಮತ್ತು ರಾಜ್ಯದಲ್ಲಿ ಚಿನ್ನದ ರಸ್ತೆ ಎಲ್ಲಿದೆ? ನಾವು ಈಗ ಅದನ್ನು ಹುಡುಕಬೇಕಾಗಿದೆ. ಒಂದು ದಿನದಲ್ಲಿ ಮಂಗಳೂರಿಂದ ಬೆಂಗಳೂರಿಗೆ (Mangalore- Bangalore) ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಊಟಕ್ಕೆ ಮತ್ತೆ ಮಂಗಳೂರಿಗೆ ಬರುವಂತಹ ವ್ಯವಸ್ಥೆಯನ್ನು ಎಲ್ಲಿದೆ ಎಂದು ಹುಡುಕುತ್ತಿದ್ದೇವೆ. ಅವರ ಮೂಲಸ್ಥಳ ಮಂಗಳೂರಲ್ಲಿ ಚಿನ್ನದ ರಸ್ತೆಯನ್ನು (Gold Road) ಸೂಲಿಬೆಲೆ ಎಲ್ಲಿ ಮಾಡಿದಾರೆ ಚೆಕ್ ಮಾಡುತ್ತಿದ್ದೇವೆ. ಅವರು ಹೇಳಿದಂತಹ ರಸ್ತೆ ಕಂಡುಬಂದಲ್ಲಿ ಸೂಲಿಬೆಲೆ (Sulibele) ಅವರೊಂದಿಗೆ ಚರ್ಚೆ ಮಾಡುತ್ತೇವೆ. ಇಲ್ಲವೆಂದರೆ ನಾವು ಚರ್ಚೆಗೆ ಹೋಗುವುದಿಲ್ಲ ಎಂದು ಹೇಳಿದರು.

ಹಿಂದೂ ವಿರೋಧಿ ಹೇಳಿಕೆ ವಿವಾದ, ಸೂಲಿಬೆಲೆ ಸವಾಲು ಸ್ವೀಕರಿಸಿದ ಸತೀಶ್ ಜಾರಕಿಹೊಳಿ!

ಸುಳ್ಳಿನ ವಿಶ್ವವಿದ್ಯಾಲಯ ಕುಲಪತಿ: ಆಸ್ಪತ್ರೆಗಳನ್ನು ಲ್ಯಾಪ್‌ಟಾಪ್‌ನಲ್ಲಿ (Laptop) ನೋಡಿ ರೋಗಿಗಳ ಪರಿಸ್ಥಿತಿ ನೋಡುವಂತಹ ವ್ಯವಸ್ಥೆಯನ್ನು ಎಲ್ಲಿ ಮಾಡಿದಾರೆ. ಇಷ್ಟೇ ಅಲ್ಲದೆ ಇನ್ನೂ ಬಹಳ ವಿಚಾರಗಳನ್ನು ಹೇಳಿದ್ದಾರೆ ಅವುಗಳನ್ನು ಸರ್ಚ್ ಮಾಡುತ್ತಿದ್ದೇವೆ. ಅಮೇರಿಕನ್‌ ಡಾಲರ್ (American Doller) ಬಗ್ಗೆ ಹುಡುಕುತ್ತಿದ್ದೇವೆ. ಅವರು ಹೇಳಿದ್ದರಲ್ಲಿ ಒಂದೇ ಒಂದು ಕೆಲಸ ಮಾಡಿದ್ದರೂ ಅದರ ಬಗ್ಗೆ ಮಾಹಿತಿ ನೀಡಿದರೆ ನಾವು ಚರ್ಚೆಗೆ (Discussion) ಸಿದ್ಧರಾಗಿದ್ದೇವೆ. ಅಂತಹ ವ್ಯಕ್ತಿಯೊಂದಿಗೆ ಚರ್ಚೆ ಮಾಡುವುದು ನಮಗೆ ಅವಶ್ಯಕತೆ (Need) ಇಲ್ಲವೆಂಬುದು ನನ್ನ ಹಾಗೂ ನಮ್ಮ ಕಾರ್ಯಕರ್ತರ ಅಭಿಪ್ರಾಯ (Opinion)ವಾಗಿದೆ. ನಮ್ಮ ಲೆಕ್ಕದಲ್ಲಿ ರಾಜ್ಯದಲ್ಲಿರುವ ಸುಳ್ಳಿನ ವಿಶ್ವವಿದ್ಯಾಲಯದ (University of Lies) ಕುಲಪತಿ ಚಕ್ರವರ್ತಿ ಸೂಲಿಬೆಲೆ ಆಗಿದ್ದಾರೆ. ಅವರೊಂದಿಗೆ ನಾವು ಏನು ಚರ್ಚೆ ಮಾಡಬೇಕೆಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸತೀಶ ಜಾರಕಿಹೊಳಿ ಅಂತ್ಯ ಕಾಲ ಸನ್ನಿಹಿತ: ಯತ್ನಾಳ

ಸಾವಿರಪಟ್ಟು ಸುಳ್ಳು: ಈ ಹಿಂದೆ ಯಾವುದಾದರೂ ಒಂದು ಕೆಲಸದಲ್ಲಿ ಶೇ.50 ಸುಳ್ಳು ಹೇಳಿದವರನ್ನು ನಾವು ಒಪ್ಪುತ್ತೇವೆ. ಈಗ 50 ಪರ್ಸೆಂಟ್‌ ಸುಳ್ಳು ಹೇಳಿದ್ದರೂ ಅವರೊಂದಿಗೆ ಚರ್ಚೆ ಮಾಡುತ್ತೇವೆ. ಆದರೆ, ಇವರು ನೂರಕ್ಕೆ ಸಾವಿರ ಪಟ್ಟು ಸುಳ್ಳು ಹೇಳಿದ್ದಾರೆ. ಇವರ ಜೊತೆ ನಾವ್ಯಾಕೆ ಸಮಯ ವ್ಯರ್ಥ (Timepass) ಮಾಡಬೇಕು ಎಂದು ಚರ್ಚೆಗೆ ಹೋಗದಿರುವ ನಿರ್ಧಾರಕ್ಕೆ ಬಂದಿದ್ದೇವೆ. ಅವರನ್ನು ಬಿಟ್ಟು ಬೇರೆ ಯಾರಾದರೂ ಒಳ್ಳೆಯ ವ್ಯಕ್ತಿಗಳು (Good Person) ಬರಲಿ. ಅವರೊಂದಿಗೆ ನಾವು ಚರ್ಚೆ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

click me!