ವರದಾ-ಬೇಡ್ತಿ ನದಿ ಜೋಡಣೆ ಕೇಂದ್ರದ ಒಪ್ಪಿಗೆ: ಸಂಸದ ಬೊಮ್ಮಾಯಿ

Published : Aug 23, 2025, 05:30 AM IST
Basavaraj Bommai

ಸಾರಾಂಶ

ಬೇಡ್ತಿ- ವರದಾ ನದಿ ಜೋಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿ (ಆ.23): ಬೇಡ್ತಿ- ವರದಾ ನದಿ ಜೋಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ತುಂಗಭದ್ರಾ ನದಿಯಲ್ಲಿ ಬೇಸಿಗೆಯ 3-4 ತಿಂಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಅದಕ್ಕೆ ವರದಾ-ಬೇಡ್ತಿ ನದಿಯ ಜೋಡಣೆ ಅಗತ್ಯವಿದೆ. ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ಕೊಟ್ಟಿದ್ದು, ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ನನ್ನ ಈ ಆಗ್ರಹವನ್ನು ರಾಜ್ಯ ಸರ್ಕಾರ ಸಹ ಒಪ್ಪಿದೆ. ಯೋಜನೆ ಜಾರಿಯಾದರೆ ಸುಮಾರು 18 ಟಿಎಂಸಿ ನೀರು ಬರುತ್ತದೆ. ಅದರಿಂದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಯೋಜನೆ ಜಾರಿಗೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಗದಗ ಔದ್ಯೋಗಿಕ ನಗರ ಮಾಡುವ ಸಂಕಲ್ಪ ಮಾಡೋಣ: ಗದಗಿನ ವಾಣಿಜ್ಯೋದ್ಯಮ ಸಂಘ ಬೆಂಗಳೂರು ಜತೆ ಸ್ಪರ್ಧೆ ಮಾಡಬೇಕು. ಆ ಗುರಿ ಇಟ್ಟುಕೊಂಡಾಗ ನಮಗೆ ದಾರಿ ಸಿಗುತ್ತದೆ. ಗದಗನ್ನು ಔದ್ಯೋಗಿಕ ನಗರವನ್ನಾಗಿ ಮಾಡುವ ಸಂಕಲ್ಪ ಮಾಡೋಣ ಎಂದು ಹೇಳಿದರು. ಗದಗಿಗೆ ತನ್ನದೇ ಆದ ವಿಶೇಷ ಸ್ಥಾನ ಇದೆ. ಇತಿಹಾಸ ಪರಂಪರೆ ಇದೆ. ಜಿಯೋಗ್ರಾಫಿಕಲ್ ಲೋಕೇಶನ್ ಇದೆ. ಒಳ್ಳೆಯ ಭವಿಷ್ಯ ಬರೆಯಬೇಕಿದೆ. ಇದು ಸಾಧ್ಯವೋ ಅಸಾಧ್ಯವೋ ಈ ಪಶ್ನೆ ಎಲ್ಲರಿಗೂ ಕಾಡುತ್ತಿದೆ. ಹಲವಾರು ಬಾರಿ ಹಲವಾರು ರೀತಿಯ ಪ್ರಯತ್ನವಾಗಿ ಐದು ದಶಕಗಳ ನಡೆದು ವಾಣಿಜ್ಯೋದ್ಯಮ ಸಂಸ್ಥೆ ಐವತ್ತು ವರ್ಷ ಪೂರೈಸಿದೆ.

ಒಂದು ಸಿಂಹಾವಲೋಕನ ಮತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಎಲ್ಲಿ ಯಶಸ್ವಿಯಾಗಿದ್ದೇವೆ. ಎಲ್ಲಿ ಎಡವಿದ್ದೇವೆ ಎನ್ನುವುದನ್ನು ತಿಳಿಯಬೇಕಿದೆ. ಒಬ್ಬ ವ್ಯಕ್ತಿಗೆ ಐವತ್ತು ವರ್ಷ ಆಗುವುದು ಮುಖ್ಯವಲ್ಲ. ಒಂದು ಸಂಸ್ಥೆಗೆ ಐವತ್ತು ವರ್ಷ ಆಗುವುದು ಬಹಳ ಮುಖ್ಯ. ಆಗಿನ ವಾಣಿಜ್ಯೋದ್ಯಮಿಗಳು ಕಷ್ಟ ಕಾಲದಲ್ಲಿ ಸಂಸ್ಥೆ ಕಟ್ಟಿದ್ದಾರೆ. ಹಿಂದಿನ ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಗೆ ಅಭಿನಂದನೆಗಳು ಎಂದು ಹೇಳಿದರು.

ಒಳ್ಳೆಯ ಭವಿಷ್ಯವಿದೆ: ನಮ್ಮಲ್ಲಿರುವ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ನಮ್ಮ ಆತ್ಮವಿಶ್ವಾಸವನ್ನು ಎರಡು ಪಟ್ಟು ಹೆಚ್ಚಿಗೆ ಮಾಡಿ ಮುಂದುವರೆದರೆ ಖಂಡಿತ ಒಳ್ಳೆಯ ಭವಿಷ್ಯ ಇದೆ. ಬದುಕಿನಲ್ಲಿ ಸ್ಪರ್ಧಿಗಳು ಡ್ರೈವಿಂಗ್ ಫೋರ್ಸ್ ಇದ್ದ ಹಾಗೆ ನಮ್ಮ ಪ್ರತಿಸ್ಪರ್ಧಿ ಹೆಚ್ಚಿಗೆ ವಹಿವಾಟು ಮಾಡುತ್ತಾನೆ ಎಂದರೆ ನಾವು ಇನ್ನೂ ಹೆಚ್ಚು ಉತ್ಪಾದನೆ ಮಾಡಲು ಬಯಸುತ್ತೇವೆ. ಗದಗಿನ ವಾಣಿಜ್ಯೋದ್ಯಮ ಸಂಘ ಬೆಂಗಳೂರಿನ ವಾಣಿಜ್ಯೋದ್ಯಮ ಸಂಘದ ಜೊತೆಗೆ ಸ್ಪರ್ಧೆ ಮಾಡಬೇಕು. ಆ ಗುರಿ ಇಟ್ಟುಕೊಂಡಾಗ ನಮಗೆ ದಾರಿ ಸಿಗುತ್ತದೆ.

ಈಗ ಚೆನ್ನಾಗಿ ರೈಲು ಸಂಪರ್ಕ ಆಗಿದೆ. ಗದಗ ವಾಡಿ, ಗದಗ ಯಲವಿಗೆ ಸಂಪರ್ಕ ಆಗುತ್ತಿದೆ. ಮುಂಬೈಗೆ ಹೈಸ್ಟೀಡ್ ರೈಲು ಸಂಪರ್ಕ ಮಾಡುತ್ತಿದ್ದೇವೆ. ಗದಗ-ಯಲವಿಗೆ ಯೋಜನೆಗೆ ಸುಮಾರು 700 ಕೋಟಿ ಮಂಜೂರಾತಿ ಸಿಗುತ್ತಿದೆ. ತುಂಗಭದ್ರಾ ನೀರು ದಡದಲ್ಲಿಯೇ ಹರಿಯುತ್ತಿದೆ. ವರದಾ ಬೇಡ್ತಿ ಜೋಡಣೆಗೆ ಕೇಂದ್ರ ಸರ್ಕಾರ ಶೀಘ್ರ ಒಪ್ಪಿಗೆ ಕೊಡುತ್ತದೆ. ಅದು ಬಂದರೆ ತುಂಗಭದ್ರಾ ನದಿಯಲ್ಲಿ ಬೇಸಿಗೆಯಲಿ ನೀರಿನ ಕೊರತೆ ತಪ್ಪುತ್ತದೆ. ಉದ್ಯಮಶೀಲತೆ ಹೆಚ್ಚಿಸಬೇಕಿದೆ‌ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!