ಕೇಂದ್ರ ಸರ್ಕಾರದಿಂದ ಅನ್ನಭಾಗ್ಯ ಯೋಜನೆ ಮುಚ್ಚುವ ಹುನ್ನಾರ: ಶಾಸಕ ರಾಯರಡ್ಡಿ ಆರೋಪ

By Kannadaprabha News  |  First Published Jun 29, 2023, 6:45 AM IST

ಸಿಎಂ ಸಿದ್ದರಾಮಯ್ಯನವರ ಹಲವಾರು ಯೋಜನೆಗಳಲ್ಲಿ ಅನ್ನಭಾಗ್ಯ ಬಡವರ ಪಾಲಿಗೆ ವರದಾನವಾಗಿತ್ತು, ಆದರೆ ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಯೋಜನೆ ಮುಚ್ಚಿ ಹಾಕುವ ಹುನ್ನಾರ ನಡೆಸಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಆರೋಪಿಸಿದರು.


ಯಲಬುರ್ಗಾ (ಜೂ.29) :  ಸಿಎಂ ಸಿದ್ದರಾಮಯ್ಯನವರ ಹಲವಾರು ಯೋಜನೆಗಳಲ್ಲಿ ಅನ್ನಭಾಗ್ಯ ಬಡವರ ಪಾಲಿಗೆ ವರದಾನವಾಗಿತ್ತು, ಆದರೆ ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಯೋಜನೆ ಮುಚ್ಚಿ ಹಾಕುವ ಹುನ್ನಾರ ನಡೆಸಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಆರೋಪಿಸಿದರು.

ತಾಲೂಕಿನ ಕಡಬಲಕಟ್ಟಿ, ಬಂಡಿ, ಜೂಲಕಟ್ಟಿ, ಹಗೇದಾಳ, ಬೂನಕೊಪ್ಪ ಗ್ರಾಮಗಳಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಬಡವರ ಪರ ಅಪಾರ ಕಾಳಜಿ ಇಟ್ಟುಕೊಂಡು ಅನ್ನಭಾಗ್ಯ ಯೋಜನೆ ಮೂಲಕ ಬಡವರ ಹಸಿವನ್ನು ನೀಗಿಸಬೇಕೆನ್ನುವ ಸಿಎಂ ಸಿದ್ದರಾಮಯ್ಯನವರ ಕನಸು ನನಸಾಗದಂತೆ ಬಿಜೆಪಿಯವರು ಕುತಂತ್ರ ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಬಡವರ ಬಗ್ಗೆ ಇರುವ ಕಳಿಕಳಿ ಇಡೀ ನಾಡಿನ ಜನತೆಗೆ ಗೊತ್ತಿದೆ ಎಂದರು.

Latest Videos

undefined

ಶಾಸಕ ರಾಯರಡ್ಡಿ ಜನಸಂಪರ್ಕ ಸಭೆಗೆ ಭದ್ರತೆ ನೀಡದೆ ನಿರ್ಲಕ್ಷ್ಯಮೂವರು ಪೊಲೀಸರು ಸಸ್ಪೆಂಡ್‌!

ಕೇಂದ್ರ ಸರ್ಕಾರದವರು ಅಕ್ಕಿಗೆ ಹಣ ಕೊಡುತ್ತೇವೆ ಎಂದರೂ ಕೊಡಲು ಹಿಂದೇಟು ಹಾಕುತ್ತಿದ್ದಾರೆ, ಇದು ಕೇಂದ್ರದ ದುರುದ್ದೇಶವಾಗಿದೆ, ಅಕ್ಕಿ ಸಿಗುವರೆಗೊ ತಾತ್ಕಾಲಿಕವಾಗಿ ಐದು ಕೆಜಿ ಅಕ್ಕಿ ಬದಲು ಪಡಿತರದಾರರ ಖಾತೆಗೆ ಹಣ ಹಾಕುತ್ತೇವೆ ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ. ನಾಡಿನ ಜನತೆಗೆ ಕೊಟ್ಟಮಾತನ್ನು ಉಳಿಸಿಕೊಳ್ಳುವಂತಹ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿಎಂ ಸಿದ್ದರಾಮಯ್ಯ ಎಂದು ಗುಣಗಾನ ಮಾಡಿದರು.

ಬಂಡಿ ಗ್ರಾಮಕ್ಕೆ .2 ರಿಂದ 3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೊಸ ಬಸ್‌ ನಿಲ್ದಾಣ ಹಾಗೂ ಬಂಡಿಯಿಂದ ಕಡಬಲಕಟ್ಟಿಗ್ರಾಮ ಮಧ್ಯೆಬರುವ ಹರಿಯುವ ಹಳ್ಳಕ್ಕೆ ಬ್ಯಾರೇಜ್‌ ಕಮ್‌ ಬ್ರೀಜ್‌ ಮತ್ತು ಕುಡಿವ ನೀರಿಗಾಗಿ ದೊಡ್ಡ ಕೆರೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ಪತ್ರಿಕಾಗೋಷ್ಠಿ ಎದುರಿಸದ ಭಾರತದ ಏಕೈಕ ಪ್ರಧಾನಿ ನರೇಂದ್ರ ಮೋದಿ: ರಾಯರಡ್ಡಿ

ತಹಸೀಲ್ದಾರ್‌ ವಿಠ್ಠಲ್‌ ಚೌಗಲೆ,ಅಧಿಕಾರಿಗಳಾದ ಐ.ಎಸ್‌.ಹೊಸೂರು, ಶ್ರೀನಿವಾಸ, ಪ್ರಾಣೇಶ ಹಾದಿಮನಿ,ರಿಜ್ವಾನಬೇಗಂ, ಶ್ರೀಧರ ತಳವಾರ,ಸಚಿನ್‌ ಪಾಟೀಲ್‌,ರಮೇಶ ಚಿಣಗಿ,ಪದ್ಮನಾಭ ಕರ್ಣಂ, ಪಿಡಿಒ ನಾಗೇಶ ನಾಯಕ,ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಗ್ರಾಪಂ ಅಧ್ಯಕ್ಷೆ ರತ್ನವ್ವ ವಣಗೇರಿ, ಎ.ಜಿ.ಭಾವಿಮನಿ,ಕೆರಿಬಸಪ್ಪ ನಿಡಗುಂದಿ,ಆನಂದ ಉಳ್ಳಾಗಡ್ಡಿ, ಗಂಗಮ್ಮ, ಈರಪ್ಪ ಕುಡಗುಂಟಿ,ಅಂದಾನಗೌಡ ಪೋಲಿಸ್‌ ಪಾಟೀಲ್‌,ದೊಡ್ಡಬಸವ ಭಾವಿಮನಿ,ಶರಣಪ್ಪ ಗಾಂಜಿ, ಶೇಖಪ್ಪ ವಣಗೇರಿ, ಮಲ್ಲು ಜಕ್ಕಲಿ, ಹುಲಗಪ್ಪ ಬಂಡಿವಡ್ಡರ್‌, ಶರಣಗೌಡ ಪೋಲಿಸ್‌ಪಾಟೀಲ, ಕಳಕೇಶ ಸೂಡಿ, ಈಶ್ವರ ಅಟಮಾಳಗಿ, ನಿಂಗಪ್ಪ ಕಮತರ, ರಾಜಪ್ಪ ಹಗೇದಾಳ, ಸುರೇಶ ದಾನಕೈ, ಹನುಮಂತ ನಡುವಲಕೇರಿ, ಶಿವಮೂರ್ತಿ ರಾಠೋಡ ಮತ್ತಿತರರು ಇದ್ದರು.

click me!