ಬೆಂಗಳೂರು ಮೈಸೂರು ಹೈವೇ ಇರೋದು ಸಂಚಾರಕ್ಕೇ ಹೊರತು ರೇಸ್‌ಗಲ್ಲ: ಸಂಸದ ಪ್ರತಾಪ್‌ ಸಿಂಹ

Published : Jun 29, 2023, 04:23 AM IST
ಬೆಂಗಳೂರು ಮೈಸೂರು ಹೈವೇ ಇರೋದು ಸಂಚಾರಕ್ಕೇ ಹೊರತು ರೇಸ್‌ಗಲ್ಲ: ಸಂಸದ ಪ್ರತಾಪ್‌ ಸಿಂಹ

ಸಾರಾಂಶ

ಮೈಸೂರು-ಬೆಂಗಳೂರು ನಡುವಿನ ದಶಪಥ ಯಾವ ಜಾಗದಲ್ಲಿ ಅವೈಜ್ಞಾನಿಕವಾಗಿದೆ ಎಂಬುದನ್ನು ಯಾರೇ ಮಹಾನುಭಾವರು ತಿಳಿಸಿದರೂ ಸರಿಪಡಿಸಿಕೊಳ್ಳಲು ಗಮನ ಹರಿಸುವುದಾಗಿ ಸಂಸದ ಪ್ರತಾಪ ಸಿಂಹ ತಿಳಿಸಿದರು.

ಮೈಸೂರು (ಜೂ.29): ಮೈಸೂರು-ಬೆಂಗಳೂರು ನಡುವಿನ ದಶಪಥ ಯಾವ ಜಾಗದಲ್ಲಿ ಅವೈಜ್ಞಾನಿಕವಾಗಿದೆ ಎಂಬುದನ್ನು ಯಾರೇ ಮಹಾನುಭಾವರು ತಿಳಿಸಿದರೂ ಸರಿಪಡಿಸಿಕೊಳ್ಳಲು ಗಮನ ಹರಿಸುವುದಾಗಿ ಸಂಸದ ಪ್ರತಾಪ ಸಿಂಹ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿ ಮೈಸೂರು-ಬೆಂಗಳೂರು ದಶಪಥ ಇರುವುದು ಸಂಚಾರಕ್ಕೇ ಹೊರತು ರೇಸ್‌ಗಲ್ಲ. ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆ ಅವೈಜ್ಞಾನಿಕವಾಗಿಲ್ಲ. ರಸ್ತೆಯನ್ನು ರೇಸ್‌ ಟ್ರ್ಯಾಕ್‌ ಎಂದು ಭಾವಿಸಿ ಮನಸ್ಸು ಬಂದಂತೆ ವಾಹನ ಚಲಾಯಿಸಬಾರದು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಈಗ ಸಂಭವಿಸಿರುವ ಶೇ.90ರಷ್ಟು ಅಪಘಾತ ಪ್ರಕರಣಗಳಿಗೆ ಚಾಲಕರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಕಾರಣ. 

ಯಾರಾದರೂ ಈ ರಸ್ತೆ ಇಂಥ ಕಡೆ ಅವೈಜ್ಞಾನಿಕವಾಗಿದೆ ಎಂದು ಹೇಳಲಿ. ಕೆಲವರು ಈ ರಸ್ತೆಯಲ್ಲಿ 120 ರಿಂದ 150 ಕಿ.ಮೀ. ವೇಗದಲ್ಲಿ ಓಡಿಸುತ್ತಾರೆ. ಕನಿಷ್ಠ 80 ಕಿ.ಮೀ. ವೇಗದಲ್ಲಿ ಓಡಿಸುವ ಮಾರುತಿ, ಇಂಡಿಗೋದಂಥ ಕಾರುಗಳನ್ನೂ 120 ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿರುವುದರಿಂದ ಅಪಘಾತ ಸಂಭವಿಸುತ್ತಿದೆ ಎಂದು ತಿಳಿಸಿದರು. 2018ರಲ್ಲಿ ಆರು ಪಥದಿಂದ ಹತ್ತು ಪಥದ ರಸ್ತೆಯನ್ನಾಗಿ ಮಾಡುವಾಗ ತಯಾರಿಸಿದ ಪ್ಲ್ಯಾನ್‌ನಲ್ಲಿ ಮೈಸೂರು-ಬೆಂಗಳೂರು ನಡುವೆ ನೇರ ಸಂಪರ್ಕ ಇರುವಂತೆ ಮಾಡಲಾಗಿತ್ತು. ಡಿಪಿಆರ್‌ಗೆ ಅನುಮತಿ ದೊರೆತ ಮೇಲೆ ವ್ಯತ್ಯಾಸವಾಗಿರುವುದು ಗೊತ್ತಾಯಿತು. 

ಆರೋಗ್ಯ ಇಲಾಖೆ ಚೆನ್ನಾಗಿದ್ದರೆ ಸರ್ಕಾರಕ್ಕೆ ಒಳ್ಳೆಯ ಹೆಸರು: ಸಚಿವ ದಿನೇಶ್‌ ಗುಂಡೂರಾವ್‌

ಈ ತಪ್ಪು ಗಮನಿಸಬೇಕಿದ್ದ ಅಧಿಕಾರಿಗಳು ಸುಮ್ಮನಿದ್ದರು. ಮತ್ತೆ ಅಲೈನ್‌ಮೆಂಟ್‌ ಬದಲಿಸಲು ಮನವಿ ಮಾಡಿದಾಗ ಸಾಧ್ಯವಾಗಿರಲಿಲ್ಲ. ಹೀಗಾಗಿ, ಎರಡೂ ಕಡೆ ಒಳ ಮತ್ತು ಹೊರ ಬರಲು ಹಾಗೂ ವಿಶ್ರಾಂತಿ ಸ್ಥಳ ನಿರ್ಮಿಸಲು ಹೆಚ್ಚುವರಿ ಯೋಜನೆ ಸೇರಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿ .1200 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದರು. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಹೆದ್ದಾರಿಯಲ್ಲಿ ತೆರಳಿ ಪರಿಶೀಲಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಎಡಿಜಿಪಿ, ಸಚಿವರು, ಮಾಧ್ಯಮದವರು ಯಾರೇ ಆಗಲಿ ಪರಿಶೀಲಿಸಲಿ. 80 ಕಿ.ಮೀ. ವೇಗದಲ್ಲಿ ವಾಹನ ಚಾಲನೆ ಮಾಡಿದರೆ ಅಪಘಾತವಾಗಲಿದೆಯೇ ಎಂಬುದನ್ನು ಖುದ್ದು ನೋಡಲಿ ಎಂದರು.

ದಶಪಥ ಅವೈಜ್ಞಾನಿಕತೆಯನ್ನು ಯಾರೇ ಮಹಾನುಭಾವರು ತಿಳಿಸಿದರೂ ಗಮನ ಹರಿಸುತ್ತೇವೆ: ಮೈಸೂರು-ಬೆಂಗಳೂರು ನಡುವಿನ ದಶಪಥ ಯಾವ ಜಾಗದಲ್ಲಿ ಅವೈಜ್ಞಾನಿಕವಾಗಿದೆ ಎಂಬುದನ್ನು ಯಾರೇ ಮಹಾನುಭಾವರು ತಿಳಿಸಿದರೂ ಸರಿಪಡಿಸಿಕೊಳ್ಳಲು ಗಮನ ಹರಿಸುವುದಾಗಿ ಸಂಸದ ಪ್ರತಾಪ ಸಿಂಹ ತಿಳಿಸಿದರು. ನಗರದ ಡಿಆರ್‌ಎಂ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಮೈಸೂರು- ಬೆಂಗಳೂರು ದಶಪಥ ಇರುವುದು ಸಂಚರಿಸುವುದಕ್ಕೆ ಹೊರತು ರೇಸ್‌ಗಾಗಿ ಅಲ್ಲ. ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆಯು ಅವೈಜ್ಞಾನಿಕವಾಗಿಲ್ಲ. ಈ ಮಾರ್ಗದಲ್ಲಿ ವಾಹನಗಳು ಸಂಚಾರ ಮಾಡುವುದಕ್ಕೆ ಅವಕಾಶ ಇದೆಯೇ ಹೊರತು ರೇಸ್‌ಗೆ ಹೋಗುವವರಂತೆ ಹೋಗಲು ಅಲ್ಲ. ರಸ್ತೆಯನ್ನು ರೇಸ್‌ ಟ್ರಾಕ್‌ನಂತೆ ಭಾವಿಸಿ ಹುಚ್ಚು ಬಂದಂತೆ ಚಲಾಯಿಸಬಾರದು ಎಂದು ಹೇಳಿದರು.

ಈ ತಪ್ಪು ಗಮನಿಸಬೇಕಿದ್ದ ಅಧಿಕಾರಿಗಳು ಸುಮ್ಮನಿದ್ದರು. ಮತ್ತೆ ಅಲೈನ್‌ಮೆಂಟ್‌ ಬದಲಿಸಲು ಮನವಿ ಮಾಡಿದಾಗ ಸಾಧ್ಯವಾಗಿರಲಿಲ್ಲ. ಹೀಗಾಗಿ, ಎರಡೂ ಕಡೆ ಒಳ ಮತ್ತು ಹೊರ ಬರಲು ಹಾಗೂ ವಿಶ್ರಾಂತಿ ಸ್ಥಳ ನಿರ್ಮಿಸಲು ಹೆಚ್ಚುವರಿ ಯೋಜನೆ ಸೇರಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿ .1200 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದರು. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಹೆದ್ದಾರಿಯಲ್ಲಿ ತೆರಳಿ ಪರಿಶೀಲಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಎಡಿಜಿಪಿ, ಸಚಿವರು, ಮಾಧ್ಯಮದವರು ಯಾರೇ ಆಗಲಿ ಪರಿಶೀಲಿಸಲಿ. 80 ಕಿ.ಮೀ. ವೇಗದಲ್ಲಿ ವಾಹನ ಚಾಲನೆ ಮಾಡಿದರೆ ಅಪಘಾತವಾಗಲಿದೆಯೇ ಎಂಬುದನ್ನು ಖುದ್ದು ನೋಡಲಿ ಎಂದರು.

ಬೈಯಪ್ಪನಹಳ್ಳಿ ಮಾದರಿಯಲ್ಲಿ ಮೈಸೂರು ರೈಲ್ವೆ ನಿಲ್ದಾಣ ವಿಸ್ತರಣೆ: ಬೆಂಗಳೂರಿನ ಬೈಯಪ್ಪನಹಳ್ಳಿಯ ರೈಲ್ವೆ ನಿಲ್ದಾಣ ಮಾದರಿಯಲ್ಲಿ ಮೈಸೂರು ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದ್ದು, ಸುಮಾರು .750 ಕೋಟಿ ವೆಚ್ಚದ ಕಾಮಗಾರಿ ಸೆಪ್ಟೆಂಬರ್‌ ವೇಳೆಗೆ ಆರಂಭವಾಗಲಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು. ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಬುಧವಾರ ಗತಿಶಕ್ತಿ ವಿಭಾಗ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ಮುಂದಿನ 20-30ವರ್ಷಗಳ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಬೈಯಪ್ಪನಹಳ್ಳಿ ಮಾದರಿಯಲ್ಲಿ ಮೈಸೂರು ರೈಲ್ವೆ ನಿಲ್ದಾಣ ವಿಸ್ತರಿಸುವ ಚಿಂತನೆ ಇದೆ. ಸೆಪ್ಟಂಬರ್‌ನಲ್ಲಿ .750 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಟಿಕೆಟ್‌ ಕೌಂಟರ್‌ ಸೇರಿ ಇತರ ಕಾಮಗಾರಿ ಆರಂಭವಾಗಲಿದೆ. ಈ ಪೈಕಿ .346.64 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣ ವಿಸ್ತರಣೆ ಕಾಮಗಾರಿ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಟೆಂರ್ಡ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆ. 30ಕ್ಕೆ ತಾಂತ್ರಿಕ್‌ ಬಿಡ್‌ ನಡೆದು, ನವೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.

ಕೇಂದ್ರವು ಲೋಕಸಭೆ ಚುನಾವಣೆಯಲ್ಲಿ ಸೋಲುತ್ತೇವೆಂಬ ಭಯದಿಂದ ಅಕ್ಕಿ ಕೊಡ್ತಿಲ್ಲ: ಸಚಿವ ಚಲುವರಾಯಸ್ವಾಮಿ

ಬೈಯಪ್ಪನಹಳ್ಳಿ ಮಾದರಿಯಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು. ಬೈಯಪ್ಪನಹಳ್ಳಿ, ಯಶವಂತಪುರ ಟರ್ಮಿನಲ್‌ ಮಾದರಿಯಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ಕಡೆಗಿನ ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ ನಿರ್ಮಿಸಲು ಚರ್ಚಿಸಲಾಗುತ್ತಿದೆ. ಮುಂದಿನ 2 ತಿಂಗಳಲ್ಲಿ ಡಿಪಿಆರ್‌ ಸಿದ್ಧಪಡಿಸಲಾಗುವುದು. ಇದಕ್ಕೆ ಹೆಚ್ಚುವರಿಯಾಗಿ .200 ಕೋಟಿ ಖರ್ಚಾಗಲಿದೆ ಎಂದರು. 16ರಿಂದ 20 ಕೊಠಡಿ ಇರುವ ಒಂದು ಫ್ಲಾಜಾ, ಸೂಪರ್‌ ಮಾರ್ಕೆಟ್‌, ಹೋಟೆಲ್‌ ಮೊದಲಾದ ವ್ಯವಸ್ಥೆ ಕಲ್ಪಿಸಲಾಗುವುದು. ಕೆಆರ್‌ಎಸ್‌ ರಸ್ತೆ ಬಳಿ ರೈಲ್ವೆ ಮೇಲ್ಸೇತುವೆ ವಿನ್ಯಾಸವು ಅನುಮೋದನೆ ಹಂತದಲ್ಲಿದೆ. ಕ್ರಾಫರ್ಡ್‌ ಹಾಲ್‌ ಪಕ್ಕದ ರೈಲ್ವೆ ಹಳಿ ಬಳಿಯಲ್ಲಿ ಸದ್ಯದಲ್ಲಿಯೇ ಅಂಡರ್‌ ಪಾಸ್‌ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌