ಬಿಜೆಪಿಯ ಮತ್ತೋರ್ವ MLAಗೆ ಸಿಡಿ ಭೀತಿ: ಕೋರ್ಟ್‌ನಿಂದ ತಡೆಯಾಜ್ಞೆ

By Suvarna NewsFirst Published Jul 30, 2021, 6:23 PM IST
Highlights

* ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಸಿಡಿ ಭೀತಿ
* ಮಾಧ್ಯಮಗಳಲ್ಲಿ ಸಿಡಿ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್‌ನಿಂದ  ತಡೆಯಾಜ್ಞೆ ತಂದ ಶಾಸಕ
* ಬೆಂಗಳೂರಿನ ಸಿವಿಲ್ ಕೋರ್ಟ್‌ನಿಂದ ತಡೆಯಾಜ್ಞೆ
 

ಬೆಂಗಳೂರು, (ಜು.30): ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಸಿಡಿ ಭೀತಿ ಎದುರಾಗಿದೆ.

ಹೌದು....ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾಗಿದ್ದ ರೇಣುಕಾಚಾರ್ಯ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಸಿಡಿ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್‌ನಿಂದ  ತಡೆಯಾಜ್ಞೆ ತಂದಿದ್ದಾರೆ.

ಶಾಸಕ ರೇಣುಕಾಚಾರ್ಯಗೆ ಶುರುವಾಯ್ತು ಸಿಡಿ ಭಯ..?
 
ರೇಣುಕಾಚಾರ್ಯ ತನ್ನ ವಿರುದ್ಧ ಸಿಡಿ ಪ್ರಸಾರ ಮಾಡದಂತೆ ಕೋರಿ ಅರ್ಜಿ ಸಲ್ಲಿಸಿದ್ದರಯ. ಇದಕ್ಕೆ ಬೆಂಗಳೂರಿನ ಸಿವಿಲ್ ಕೋರ್ಟ್​, ಸಿಡಿ ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯಗೆ  ಶುರುವಾಗಿದೆಯಾ ಎಂಬ ಚರ್ಚೆಗೆ ಅವರ ಇತ್ತೀಚಿನ ನಡೆ ಎಡಮಾಡಿಕೊಟ್ಟಿದೆ.

ಈ ಹಿಂದೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಿಡುಗಡೆಯಾಗಿತ್ತು. ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿಬಂತು. 

ಬಳಿಕ ಇತರೆ ಹಲವು ಮಾಜಿ ಸಚಿವರುಗಳ ಸಹ ಸಿ.ಡಿ ಭಯದಿಂದ ಕೋರ್ಟ್​ ಮೊರೆ ಹೋಗಿ ತಡೆಯಾಜ್ಞೆ ತಂದಿರುವುದನ್ನು ಇಲ್ಲಿ ಸ್ಮರಿಸಬಹುದು. ಇನ್ನು ಮಾಜಿ ಕೇಂದ್ರ ಸಚಿವ ಸದಾನಂದಗೌಡ ಅವರು ಸಹ  ಸಿಡಿ ಪ್ರಸಾರಕ್ಕೆ ತಡೆ ನೀಡುವಂತೆ ಸ್ಟೇ ತಂದಿದ್ದಾರೆ.

click me!