* ಡಿಕೆಶಿ ಬಗೆಗಿನ ಸ್ವಪಕ್ಷದವರ ಹೇಳಿಕೆ
* ಕಾಂಗ್ರೆಸ್ ರಾಜಕಾರಣದಲ್ಲಿ ಅನೇಕ ಪ್ರಶ್ನೆಗಳು
* ಡಿಕೆಶಿ ಪರವಾಗಿ ನಿಲ್ಲದ ನಾಯಕರು
* ಸಿದ್ದು ಬಣದಿಂದ ನೋ ರಿಯಾಕ್ಷನ್ ತಂತ್ರ
ಬೆಂಗಳೂರು(ಅ. 16) ರಾಜಕಾರಣ ನಿಂತ ನೀರಲ್ಲ.. ಆರೋಪ-ಪ್ರತ್ಯಾರೋಪಗಳು ಇಲ್ಲಿ ಸಾಮಾನ್ಯ. ಆದರೆ ಅವರದ್ದೇ ಪಕ್ಷದವರಿಂದ ಗಂಭೀರ ಆರೋಪದಂತಹ ಮಾತು ಬಂದರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕತೆ ಹೀಗೆ ಆಗಿದೆ.
ಡಿ.ಕೆ ಶಿ ಬಗ್ಗೆ ಸಲೀಂ - ಉಗ್ರಪ್ಪ ಟಾಕ್ ದೊಡ್ಡ ಸುದ್ದಿಯಾಗಿ ಸಂಚರಿಸುತ್ತಲೇ ಇದೆ. ಆದರೆ ಘಟನೆ ನಂತರ ಡಿ. ಕೆ.ಶಿವಕುಮಾರ್ ಬೆಂಬಲಕ್ಕೆ ಕೈ ನಾಯಕರು ನಿಂತಿಲ್ಲ. ಡಿಕೆ ಶಿವಕುಮಾರ್ ಸಮರ್ಥಿಸಿಕೊಳ್ಳಲು ಹಿಂದೇಟು ಹಾಕ್ತಿದ್ದಾರಾ ಸಿದ್ದರಾಮಯ್ಯ? ಎನ್ನುವ ಪ್ರಶ್ನೆ ಮೂಡಿದೆ.
ಪರ್ಸಂಟೆಜ್ ರಾಜಕಾರಣ ಎಂದು ಆರೋಪಿಸಿ ಮಾತಾಡಿದ್ದ ಸಲೀಂ ಉಗ್ರಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವ ಸಿದ್ದರಾಮಯ್ಯ.. ಇದು ಕರ್ನಾಟಕ ಕಾಂಗ್ರೆಸ್ ನಲ್ಲಿನ ಎರಡು ಮುಖಗಳು ಎಂಬಂತೆ ಬಿಂಬಿತವಾಗುತ್ತಿವೆ.
ಸಿದ್ದರಾಮಯ್ಯ ಭೇಟಿ ಮಾಡಿದ ಕುಮಾರ್ ಬಂಗಾರಪ್ಪ
ಎರಡು ಮೂರು ಬಾರಿ ಮಾಧ್ಯಮಗಳಿಗೆ ಎದುರಾದರೂ, ಯಾವುದೇ ಪ್ರತಿಕ್ರಿಯೆ ನೀಡದೆ ಸಿದ್ದರಾಮಯ್ಯ ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದಾರೆ. ಅಧ್ಯಕ್ಷರ ವಿರುದ್ಧ ಪರ್ಸಂಟೇಜ್ ಆರೋಪದ ಬಗ್ಗೆ ಮಾಧ್ಯಮಗಳ ಪ್ರಶ್ನಿಸಿದ್ರೂ, ಕೈ ಸನ್ನೆ ಮೂಲಕ ಪ್ರತಿಕ್ರಿಯೆ ಕೊಡದೆ ತೆರಳುತ್ತಿದ್ದಾರೆ.
ಸಲಿಂ ಹೇಳಿಕೆಯಿಂದ ಪಕ್ಷದ ಅಧ್ಯಕ್ಷರಾಗಿ ಮುಜುಗುರಕ್ಕೊಳಗಾಗಿರುವ ಡಿಕೆಶಿ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಇನ್ನೊಂದು ಕಡೆ ಪಕ್ಷದ ಅಧ್ಯಕ್ಷರ ವಿರುದ್ಧ ಆರೋಪದ ಬಗ್ಗೆ ಸಿದ್ದು ಬಣದ ನಾಯಕರು ಮಾತನ್ನಾಡುತ್ತಿಲ್ಲ.
ಡಿಕೆಶಿ ಕುರಿತ ಉಗ್ರಪ್ಪ ಸಲಿಂ ಟಾಕ್ ಕೇಳಿ ಒಳಗೊಳಗೆ ಖುಷಿಯಾಗಿದ್ದಾರಾ ಸಿದ್ದರಾಮಯ್ಯ? ಎನ್ನುವುದು ರಾಜಕಾರಣದ ವಲಯದ ದೊಡ್ಡ ಚರ್ಚೆ. ಉಪಚುನಾವಣೆ ಸಂದರ್ಭದಲ್ಲಿ ಡಿ.ಕೆ ಶಿ. ಒಂಟಿಯಾಗಿ ಮಾಡಲು ಸಿದ್ದು ಬಣ ಈ ಅವಕಾಶವನ್ನೇ ಬಳಸಿಕೊಳ್ಳುತ್ತಿದೆಯಾ? ಎನ್ನುವ ಪ್ರಶ್ನೆಯೂ ಎದ್ದಿದೆ.
ಇನ್ನೊಂದು ಕಡೆ ಸಲೀಂ ಉಗ್ರಪ್ಪ ಅವರ ಟಾಕ್ ಲಾಭವನ್ನು ಬಿಜೆಪಿ ಪಡೆದುಕೊಳ್ಳುತ್ತಿದೆ. ಡಿಕೆಶಿ ಪರವಾಗಿ ಬಿಜೆಪಿ ದಾಳಿಯನ್ನು ಕೈ ನಾಯಕರು ಎದುರಿಸುತ್ತಿಲ್ಲ. ಇದು ಆಧಾರ ರಹಿತ ಎಂದು ರಾಮಲಿಂಗಾರೆಡ್ಡಿ ಮಾತ್ರ ಡಿಕೆಶಿ ಪರ ಬ್ಯಾಟ್ ಬೀಸಿದ್ದು ಬಿಟ್ಟರೆ ರಾಜ್ಯದ ಯಾವ ನಾಯಕರು ನಿಂತಿಲ್ಲ. ಕಾಂಗ್ರೆಸ್ ರಾಜಕಾರಣ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕಿದೆ.