ಸಿಲಿಗುರಿ(ಡಿ.08): ಮುಖ್ಯಮಂತ್ರಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಯಯುವಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಓರ್ವ ಕಾರ್ಯಕರ್ತನ ಸಾವಿನಲ್ಲಿ ಅಂತ್ಯಗೊಂಡಿದೆ. ಪೊಲೀಸರ ಲಾಠಿ ಏಟಿಗೆ ಪಕ್ಷದ ಕಾರ್ಯಕರ್ತ ಉಲ್ಲೆನ್ ರಾಯ್ ಸಾವನ್ನಪ್ಪಿದ್ದಾನೆಂದು ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ್ದಾರೆ.

'ಒದಕಿ ಬಿದ್ದಾಗಲೇ ತೇಜಸ್ವಿ ಸೂರ್ಯನಿಗೆ ಸಂವಿಧಾನ ನೆನಪಾಗಿದ್ದು'

ಕಾರ್ಯಕರ್ತನ ಸಾವಿನ ಘಟನೆ ಹಿನ್ನೆಲೆಯಲ್ಲಿ ಮಂಗಳವಾರ 12  ಗಂಟೆಗಳ ಉತ್ತರ ಬಂಗಾಳಿ ಬಂದ್‌ಗೆ ಬಿಜೆಪಿ ಕರೆ ಕೊಟ್ಟಿದೆ. ಅಲ್ಲದೇ ರಾಜ್ಯದಲ್ಲಿ ಕಾನುನು ಸುವ್ಯವಸ್ಥೆ ಕುಸಿದು ಬಿದ್ದಿದ್ದು, ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. 

ದೀದಿ ಸರರ್ಕಾರದ ವಿರುದ್ಧ ಬಿಜೆಪಿ ವಿಧಾನಸಭೆಗೆ ಕಾಲ್ನಡಿಗೆ ಎಂಬ ಎರಡು ರ‍್ಯಾಲಿ ಹಮ್ಮಿಕೊಂಡಿತ್ತು. ಒಂದರ ನೇತೃತ್ವವನ್ನು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಹಿಸಿಕಜೊಂಡಿದ್ದರೆ ಮತ್ತೊಂದರ ನೇತೃತ್ವವನ್ನು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಹಿಸಿದ್ದರು.

ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್‌ನಲ್ಲೆ ಕೇಸ್!

ಆದರೆ ಬನಿಜೆಪಿ ಕಾರ್ಯಕರ್ತರ ತಡೆಯಲು ಪೊಲೀಸರು ಬ್ಯಾರಿಕೇಡ್ ಸೇರಿದಂತೆ ಭಾರೀ ಅಡೆತಡೆ ಹೇರಿದ್ದರು. ಆದರೆ ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್ ಮುರಿದು ಮುನ್ನುಗ್ಗುತ್ತಿದ್ದಂತೆಯೇ ಕಾರ್ತಯಕರ್ತರ ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿದ್ದಾರೆ. ಪೊಲೀಸರ ಅಶ್ರುವಾಯು ಸಿಡಿತದಿಂದಾಗಿ ತೇಜಸ್ವಿ ಕೆಲ ಹೊತ್ತು ಅಸ್ವಸ್ಥಗೊಂಡಿದ್ದರು.