ಈಗಾಗಲೇ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ನಾವು ಹೈಕಮಾಂಡ್‌ಗೆ ಕಳುಹಿಸಿದ್ದೇವೆ. ಅಲ್ಲಿ ಯಾರು ಫೈನಲ್ ಆಗುತ್ತಾರೋ ಆ ಅಭ್ಯರ್ಥಿಗಳನ್ನೇ ಲೋಕಸಭಾ ಕಣಕ್ಕೆ ಇಳಿಸಲಾಗುವುದು: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ(ಫೆ.06): ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಕುರಿತು ಈಗಾಗಲೇ ಪಟ್ಟಿ ಮಾಡಿ ಕಳಿಸಲಾಗಿದೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ನಾವು ಹೈಕಮಾಂಡ್‌ಗೆ ಕಳುಹಿಸಿದ್ದೇವೆ. ಅಲ್ಲಿ ಯಾರು ಫೈನಲ್ ಆಗುತ್ತಾರೋ ಆ ಅಭ್ಯರ್ಥಿಗಳನ್ನೇ ಲೋಕಸಭಾ ಕಣಕ್ಕೆ ಇಳಿಸಲಾಗುವುದು ಎಂದು ಹೇಳಿದರು.
BIG BREAKING : ರಮೇಶ್ ಜಾರಕಿಹೊಳಿ ಸಕ್ಕರೆ ಕಾರ್ಖಾನೆ ಮೇಲೆ ಸಿಐಡಿ ದಾಳಿ
ಪ್ರಕಾಶ ಹುಕ್ಕೇರಿ ಅವರ ಡಿ ಕೋಡ್ ನಮಗೆ ಗೊತ್ತಿದೆ:
ಪ್ರಕಾಶ ಹುಕ್ಕೇರಿ ಅವರು ಯಾವಾಗ ಸ್ಪರ್ಧಿಸುವುದಿಲ್ಲ ಅನ್ನುತ್ತಾರೋ ಆಗ ಅವರು ಖಂಡಿತ ಲೋಕಸಭಾ ಚುನವಾಣೆಗೆ ಸ್ಪರ್ಧಿಸುತ್ತಾರೆ. ಅವರು ಯಾವಾಗ ಸ್ಪರ್ಧಿಸುತ್ತೇನೆ ಅಂತಾ ಹೇಳುತ್ತಾರೋ ಅವಾಗ ಸ್ಪರ್ಧಿಸುವುದಿಲ್ಲ. ಪ್ರಕಾಶ ಹುಕ್ಕೇರಿ ಅವರ ಡಿ ಕೋಡ್ ನಮಗೆ ಗೊತ್ತಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಸನಿಹ ಬಂದಾಗ ಇಂತಹ ಸಮಾವೇಶ ಕಾಂಗ್ರೆಸ್ ಮಾಡುತ್ತಿದೆ. ಇದರ ಉದ್ದೇಶ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಜಾರಿಗೆ ತಂದ ಉತ್ತಮ ಗ್ಯಾರಂಟಿಗಳು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಇಂತಹ ಸಮಾವೇಶವನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಿಜೆಪಿಗೆ ಹೋಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸವದಿ ಅವರು ಬಿಜೆಪಿ ಹೋಗುವ ಪ್ರಶ್ನೆನೇ ಇಲ್ಲ ಎಂದು ಹೇಳಿದರು.
ಚಿಕ್ಕೋಡಿ ಬಿಜೆಪಿ ಟಿಕೆಟ್ ಮೇಲೆ ಲಿಂಗಾಯತ ಲೀಡರ್ಸ್ ಕಣ್ಣು; ಕತ್ತಿ, ಕೋರೆ, ಜೊಲ್ಲೆ ಯಾರ ಮುಡಿಗೇರಲಿದೆ ಕಮಲ?
ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ:
ಹೀಗಾಗಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ನಿಷ್ಠಾವಂತರಿಗೆ ಒಳ್ಳೆಯ ಅವಕಾಶಗಳಿವೆ. ಆದರೆ, ತಾಳ್ಮೆ ಇರಬೇಕಷ್ಟೇ ಎಂದ ಅವರು, ಸವದಿ ಅವರು ಕೂಡ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರಿಗೂ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶಗಳು ಕೂಡಿ ಬರಲಿವೆ ಎಂದರು.
ಕೇಂದ್ರ ಸರ್ಕಾರ ಅನುದಾನ ವಿಚಾರವಾಗಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ದೆಹಲಿಯಲ್ಲಿ ಫೆ.7 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಪ್ರತಿಭಟನೆಯಲ್ಲಿ ಸಿಎಂ- ಡಿಸಿಎಂ ಸೇರಿದಂತೆ ಎಲ್ಲ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ ಎಂದು ಸಚಿವರು ಹೇಳಿದರು.