ನರೇಂದ್ರ ಮೋದಿಗೆ ರಾಹುಲ್‌ ಗಾಂಧಿ ಸವಾಲಾಗಲು ಸಾಧ್ಯವೇ?: ಸ್ಮೃತಿ ಇರಾನಿ ವ್ಯಂಗ್ಯ

Published : Mar 28, 2023, 02:59 AM IST
ನರೇಂದ್ರ ಮೋದಿಗೆ ರಾಹುಲ್‌ ಗಾಂಧಿ ಸವಾಲಾಗಲು ಸಾಧ್ಯವೇ?: ಸ್ಮೃತಿ ಇರಾನಿ ವ್ಯಂಗ್ಯ

ಸಾರಾಂಶ

ಸಂಸದ ಸ್ಥಾನದ ಅನರ್ಹತೆ ವಿಚಾರ ಮುಂದಿಟ್ಟು ಜನತೆಯನ್ನು ವಿಚಲಿತಗೊಳಿಸುವ ಪ್ರಯತ್ನದಲ್ಲಿರುವ ರಾಹುಲ್‌ ಗಾಂಧಿ, ಸದಾ ಗೊಂದಲ, ಅನುಪಸ್ಥಿತಿ ವ್ಯಕ್ತಿತ್ವದೊಂದಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಸವಾಲಾಗಲು ಸಾಧ್ಯವೇ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ವ್ಯಂಗ್ಯವಾಡಿದ್ದಾರೆ.

ಬೆಂಗಳೂರು (ಮಾ.28) : ಸಂಸದ ಸ್ಥಾನದ ಅನರ್ಹತೆ ವಿಚಾರ ಮುಂದಿಟ್ಟು ಜನತೆಯನ್ನು ವಿಚಲಿತಗೊಳಿಸುವ ಪ್ರಯತ್ನದಲ್ಲಿರುವ ರಾಹುಲ್‌ ಗಾಂಧಿ, ಸದಾ ಗೊಂದಲ, ಅನುಪಸ್ಥಿತಿ ವ್ಯಕ್ತಿತ್ವದೊಂದಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಸವಾಲಾಗಲು ಸಾಧ್ಯವೇ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯವಾಡಿದ್ದಾರೆ.

ನಗರದ ಪಿಇಎಸ್‌ ವಿಶ್ವವಿದ್ಯಾಲಯ(PES University)ದಲ್ಲಿ ಏರ್ಪಡಿಸಿದ್ದ ಯುವ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ರಾಹುಲ್‌ ಗಾಂಧಿ(Rahul gandhi)ಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿಲ್ಲ. ಕೋರ್ಚ್‌ ತೀರ್ಪನ್ನು ಆಧರಿಸಿ ಸಭಾಪತಿಗಳು ಈ ನಿರ್ಣಯ ಕೈಗೊಂಡಿದ್ದಾರೆ. ಹಿಂದುಳಿದ ವರ್ಗವನ್ನು ದೂಷಿಸಿದ ಕಾರಣಕ್ಕಾಗಿ ಕೋರ್ಚ್‌ನಿಂದ ಈ ತೀರ್ಪು ಬಂದಿದೆ. ರಾಹುಲ್‌ ಕೇವಲ ಒಬ್ಬ ವ್ಯಕ್ತಿಯನ್ನು ಟೀಕಿಸಿಲ್ಲ, ಬದಲಾಗಿ ಒಂದೀಡಿ ಸಮುದಾಯವನ್ನು ಹೀಗಳೆದಿದ್ದಾರೆ. ನ್ಯಾಯಾಲಯ ತೀರ್ಪು ನೀಡಿದ ಬಳಿಕ ಅದರನ್ವಯವಾಗಿ ಸಭಾಪತಿಗಳು ಸಂವಿಧಾನಬದ್ಧವಾಗಿ ಕ್ರಮ ವಹಿಸಿದ್ದಾರೆ ಎಂದರು.

'ಡಾರ್ಲಿಂಗ್‌ ಮಾಡ್ಕೊಂಡು ಬೆಡ್‌ರೂಮ್‌ಗೆ ತಂದಿದ್ದಾರೆ..' ಸ್ಮೃತಿ ಇರಾನಿ ವಿರುದ್ಧ ಬಿವಿ ಶ್ರೀನಿವಾಸ್‌ 'ಸೆಕ್ಸಿಸ್ಟ್‌' ಹೇಳಿಕೆ!

ಕೆಳಹಂತದ ನ್ಯಾಯಾಲಯ ತೀರ್ಪು ನೀಡಿರುವ ಕಾರಣ ಅವರು ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿಚಾರಗಳು ಮುಂದೆ ಸುಪ್ರೀಂ ಕೋರ್ಚ್‌ಗೆ ಹೋದಲ್ಲಿ ಅವರು ತಮ್ಮನ್ನು ಮನ್ನಿಸುವಂತೆ ಕೇಳಿಕೊಳ್ಳಲೂಬಹುದು ಎಂದು ವ್ಯಂಗ್ಯವಾಡಿದರು.

ರಾಹುಲ್‌ ಗಾಂಧಿ ಇಂಗ್ಲೆಂಡ್‌ ನೆಲದಲ್ಲಿ ನಿಂತು ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದಾರೆ. ಅವರು ಸಂವಾದಕ್ಕಾಗಿ ದೇಶದ ಹಲವು ವಿಶ್ವವಿದ್ಯಾಲಯಗಳಿಗೆ ತೆರಳಿದಾಗ ಯಾವ ಸರ್ಕಾರ ವಿದ್ಯಾರ್ಥಿಗಳನ್ನು ಅವರ ಜೊತೆಗೆ ಮಾತನಾಡದಂತೆ ತಡೆದಿದೆ? ಭಯೋತ್ಪಾದಕ ಕಸಬ್‌ನನ್ನು ಕೂಡ ನಮ್ಮ ದೇಶ ಪ್ರಜಾಪ್ರಭುತ್ವದ ತಳಹದಿಯ ಕಾನೂನು ಪ್ರಕಾರವೇ ಶಿಕ್ಷಿಸಿದೆ. 2014ರಲ್ಲಿ ಬಿಜೆಪಿ ನರೇಂದ್ರ ಮೋದಿ ನೇತೃತ್ವದಲ್ಲಿ ಗೆಲವು ಸಾಧಿಸಿತ್ತು. ಆದರೆ, ನಾನು ಚುನಾವಣೆ ಸೋತಿದ್ದೆ. ಇದು ಪ್ರಜಾಪ್ರಭುತ್ವವಲ್ಲವೆ? ಎಂದು ಪ್ರಶ್ನಿಸಿದರು.

ಮೇಕಪ್​ಮ್ಯಾನ್​ ಮಾಡಿದ ಅವಮಾನ ನೆನೆದ ಸಚಿವೆ ಸ್ಮೃತಿ ಇರಾನಿ

ರಾಜ್ಯದಲ್ಲಿ ಕಾಂಗ್ರೆಸ್‌ ಉಚಿತ ಕೊಡುಗೆ ಕುರಿತು ಟೀಕಿಸಿದ ಸ್ಮೃತಿ ಇರಾನಿ, ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಅಮೇಠಿಯಲ್ಲಿ ಶೇ. 80ರಷ್ಟುಮನೆಗಳಿಗೆ ಶೌಚಾಲಯಗಳೇ ಇರಲಿಲ್ಲ. ನೆಹರು ಕಾಲದಿಂದ ಕೇವಲ ಭರವಸೆಯಾಗಿದ್ದ ಅಮೇಠಿ-ರಾಯ್‌ಬರೇಲಿ ರೈಲು ಮೋದಿ ಪ್ರಧಾನಿಯಾದ ಬಳಿಕ ಸಾಕಾರವಾಗುತ್ತಿದೆ. ಯಾರು ಸಂಸದ ಸ್ಥಾನದಿಂದ ಅನರ್ಹರಾಗಿರುತ್ತಾರೊ ಅವರು ಮಾತ್ರ ಸುಳ್ಳು ಭರವಸೆ ನೀಡಲು ಅರ್ಹತೆ ಪಡೆದಿರುತ್ತಾರೆ. ಅವರ ಭರವಸೆ ನಂಬಲರ್ಹವಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌