
ಬೆಂಗಳೂರು, (ಡಿ.30) : ರಾಜ್ಯದ ವಿವಿಧ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು(ಡಿ.30) ಪ್ರಕಟವಾಗಿದ್ದು (Karnataka Local Body Election), ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್(Congress)ಹೊರಹೊಮ್ಮಿದ್ದು, ಆಡಳಿತರೂಢ ಬಿಜೆಪಿಗೆ(BJP) ಹಿನ್ನಡೆಯಾಗಿದೆ. ಇದು ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಈ ಫಲಿತಾಂಶದಿಂದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಫುಲ್ ಖುಷ್ ಆಗಿದ್ದಾರೆ.
Local Body Poll Result ಕಾಂಗ್ರೆಸ್ ಮೇಲುಗೈ, ಸಿಎಂ, ರಾಮುಲು, ಆಚಾರ್, ಸಿಂಗ್, ಜೊಲ್ಲೆಗೆ ಮುಖಭಂಗ
ಇನ್ನು ಈ ಬಗ್ಗೆ ಸಚಿವ ಕೆ.ಎಸ್,ಈಶ್ವರಪ್ಪ(KS Eshwarappa) ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಯ್ಯೋ ಮದುವೆ ಆಗಿ 25 ವರ್ಷ ಆದ ಮೇಲೆ ಗಂಡು ಮಗು ಹುಟ್ಟಿದ ರೀತಿಯಲ್ಲಿ ಕಾಂಗ್ರೆಸಿಗರು ಸಂಭ್ರಮ ಪಡುತ್ತಿದ್ದಾರೆ. ಇದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸಿಗರ ಸಂಭ್ರಮಾಚರಣೆಗೆ ವ್ಯಂಗ್ಯವಾಡಿದರು.
ಈ ಗೆಲುವನ್ನು ಇಟ್ಟುಕೊಂಡು ಬಿಜೆಪಿ ಬುಡ ಅಲ್ಲಾಡುತ್ತಿದೆ ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ. ಮದುವೆ ಆಗಿ 25 ವರ್ಷ ಆದ ಮೇಲೆ ಗಂಡು ಮಗು ಹುಟ್ಟಿದ ರೀತಿಯಲ್ಲಿ ಕಾಂಗ್ರೆಸಿಗರು ಸಂಭ್ರಮ ಪಡುತ್ತಿದ್ದಾರೆ. ನಾಮಕರಣ ಮಾಡಿ ಒಳ್ಳೆಯ ಹೆಸರನ್ನು ಇಡಿ. ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತೇನೆ ಎಂದರು.
ನಾವು ಎಲ್ಲೆಲ್ಲಿ ಗೆದ್ದಿದ್ದೇವೋ, ಅಲ್ಲೆಲ್ಲ ಅಭಿವೃದ್ಧಿ ಕಾರ್ಯ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರ ತರುವುದಕ್ಕೆ ಅಗತ್ಯವಾದ ಕೆಲಸ ಮಾಡುತ್ತೇವೆ ಎಂದು ಹೇಳಿದರು.
Election Result: ಗೆದ್ದ ಗಂಡ-ಹೆಂಡ್ತಿ, ಅಕ್ಕ-ತಂಗಿ, ಅತ್ತೆಯನ್ನು ಸೋಲಿಸಿದ ಸೊಸೆ, ಇಲ್ಲಿವೆ ಅಚ್ಚರಿ ರಿಸಲ್ಟ್
ಫಲಿತಾಂಶದ ಬಗ್ಗೆ ಸಿಎಂ ಹೇಳಿದ್ದೇನು?
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಬಿಜೆಪಿ ಯಾವತ್ತೂ ಗೆಲುವು ಸಾಧಿಸಿಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ ತಾಲೂಕಿನ ಬಂಕಾಪುರ ಪುರಸಭೆ ಹಾಗೂ ಹಾವೇರಿ ತಾಲೂಕು ಗುತ್ತಲ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಈ ಬಾರಿ ನಮ್ಮ ಸಾಧನೆ ಉತ್ತಮವಾಗಿದೆ ಎಂದು ತಿಳಿಸಿದರು.
ಹಲವು ಕಡೆ ಅಲ್ಪಸಂಖ್ಯಾತರು ಜಾಸ್ತಿ ಇದ್ದಾರೆ. ಹೀಗಾಗಿ ನಮಗೆ ದೊಡ್ಡ ಪ್ರಮಾಣದ ಯಶಸ್ಸು ಸಿಕ್ಕಿಲ್ಲ. ಈ ಬಾರಿ ಗದಗ ಮತ್ತಿತರ ಕಡೆ ಕೆಲವು ಪ್ರಯತ್ನಗಳನ್ನು ಮಾಡಿದ್ದರಿಂದ ಯಶಸ್ಸು ಸಿಕ್ಕಿದೆ. ಇನ್ನಷ್ಟು ಕೆಲಸ ಮಾಡಬೇಕು, ಮಾಡುತ್ತೇವೆ. ಯಾವುದೇ ಭೇದ ಇಲ್ಲದೇ ಎಲ್ಲ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.
ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಬಿಜೆಪಿ ಎಂದೂ ಗೆಲುವು ಸಾಧಿಸಿಲ್ಲ. ಅಲ್ಲಿ ಅಲ್ಪಸಂಖ್ಯಾತರು ಶೇ.65ರಷ್ಟು ಇದ್ದಾರೆ. ಇದನ್ನು ನಾನು ಹೇಳುವುದು ಸಮಂಜಸ ಅಲ್ಲ. ಅದೇ ಪರಿಸ್ಥಿತಿ ಗುತ್ತಲದಲ್ಲೂ ಇದೆ ಎಂದ ಅವರು, ಕಾಂಗ್ರೆಸ್‍ನವರಿಗೆ ಬುಡನೇ ಇಲ್ಲ. ಹೀಗಾಗಿ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಗ್ರಾ.ಪಂ., ಪಟ್ಟಣ ಪಂಚಾಯಿತಿಯಲ್ಲಿ ನಮ್ಮ ಸಂಖ್ಯೆ ಹೆಚ್ಚಿದೆ ಎಂದು ಸಮರ್ಥಿಸಿಕೊಂಡರು.
ಆಡಳಿತ ಪಕ್ಷದ ನಾಯಕರ ಕ್ಷೇತ್ರಗಲ್ಲೇ ಬಿಜೆಪಿಗೆ ಹಿನ್ನಡೆಯಾಗಿದ್ದು, ಸಚಿವರು ಹಾಗೂ ಬಿಜೆಪಿ ಶಾಸಕರಿಗೆ ಮತದಾರರು ಶಾಕ್ ಕೊಟ್ಟಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ(Basavaraj Bomai, ಸಚಿವರಾದ ಶ್ರೀರಾಮುಲು, ಶಶಿಕಲಾ ಜೊಲ್ಲೆ, ಹಾಲಪ್ಪ ಆಚಾರ್, ಆನಂದ್ ಸಿಂಗ್ ಸೇರಿದಂತೆ ಶಾಸಕರ ತವರು ಕ್ಷೇತ್ರಗಳಲ್ಲಿ ಬಿಜೆಪಿ ಮುಗ್ಗರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.