ಕೂಡ್ಲಿಗಿ (ಅ.25): ದೇಶದಲ್ಲಿ ಕಾಂಗ್ರೆಸ್ (Congress) ಅಸ್ತಿತ್ವವನ್ನು ಕಳೆದುಕೊಂಡಿದೆ. ಹೀಗಾಗಿ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗಳಲ್ಲಿ (By election) ಬಿಜೆಪಿ (BJP) ಅಂದಾಜು 20ರಿಂದ 25 ಸಾವಿರ ಮತಗಳ ಅಂತರದಿಂದ ಜಯ ಸಾಧಿಸುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಬಳ್ಳಾರಿ (Ballary) ಜಿಲ್ಲಾ ಬಿಜೆಪಿ (BJP) ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್ (DK shivakumar) ಅವರಲ್ಲಿ ಗುದ್ದಾಟ ಶುರುವಾಗಿದೆ. ಇದು ಬಿಜೆಪಿ (BJP) ವರವಾಗಲಿದೆ ಎಂದರು.
undefined
ಹಣ ಹಂಚುವುದು ಕಾಂಗ್ರೆಸ್ ಸಂಸ್ಕೃತಿ : ಡಾ. ಕೆ. ಸುಧಾಕರ್
ಸಿದ್ದರಾಮಯ್ಯ (Siddaramaiah) ಅವರು ಬಡವರಿಗೆ 10 ಕೇಜಿ ಅಕ್ಕಿ ನೀಡುವುದರ ಮೂಲಕ ಬಡವರ ಪರವಾಗಿದ್ದೇನೆ ಎಂದು ಭಾಷಣ ಮಾಡುತ್ತಾರೆ. 10 ಕೆಜಿ ಅಕ್ಕಿಯಲ್ಲಿ 7 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಟ್ಟಿದೆ ಎಂಬುದನ್ನು ಜನತೆ ಅರಿಯಬೇಕಿದೆ ಎಂದ ಅವರು, ನಾನು ಕೂಡ ರಾಜ್ಯದಲ್ಲಿ ಪ್ರವಾಸ (Tour) ಮಾಡಿ ಬಿಜೆಪಿಯನ್ನು (BJP) ಕಟ್ಟುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಕ್ಷೇತ್ರದಲ್ಲಿ ಗೋಪಾಲಕೃಷ್ಣ (Gopalakrishna) ಅವರನ್ನು ಸೋಲಿಸಿದರೂ ಪರವಾಗಿಲ್ಲ. ಆದರೆ ಬಿಜೆಪಿಯನ್ನು (BJP) ಸೋಲಿಸಬೇಡಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ನನ್ನ ಮೇಲಿನ ಕೋಪವನ್ನು ಪಕ್ಷದ ಮೇಲೆ ತೋರಿಸಿಕೊಳ್ಳಬೇಡಿ. 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದಿದ್ದೇನೆ. ಶಿಕ್ಷಣ ಹಾಗೂ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದರು.