
ಗದಗ (ಜು.16): ಸಿಎಂ ತಮ್ಮ ರಿಯಲ್ ಎಸ್ಟೇಟ್ ದಂಧೆಗಾಗಿ ಕನಕಪುರಕ್ಕೆ ಏರ್ ಪೋರ್ಟ್ ತೆಗೆದುಕೊಂಡು ಹೊರಟಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ(BJP State president BY Vijayendra) ಆರೋಪಿಸಿದ್ರು..
ಗದಗನಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯಕ್ಕೆ ಎರಡನೇ ಏರ್ ಪೋರ್ಟ್ ಬೇಕು ಅಂತಾ ಅದನ್ನೂ ಕನಕಪುರಕ್ಕೆ ತೆಗೆದುಕೊಂಡಿದ್ದಾರೆ. ಕನಕಪುರದ ಬದಲು ತುಮಕೂತು ಆಸುಪಾಸು ಏರ್ ಪೋರ್ಟ್ ತಂದಲ್ಲಿ ಮಧ್ಯ ಕರ್ನಾಟಕಕ್ಕೆ ಲಾಭ. ಜೊತೆಗೆ ಉತ್ತರ ಕರ್ನಾಟಕಕ್ಕೂ ಲಾಭವಾಗಲಿದೆ. ಕೈಗಾರಿಗೆ ಬರುತ್ತೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ ಅಂತಾ ಅಭಿಪ್ರಾಯ ಪಟ್ಟರು.
ಇನ್ನು ಬಿಡದಿ ಟೌನ್ ಶಿಪ್ ಬಗ್ಗೆ ಮಾತ್ನಾಡಿದ ಬಿವೈವಿ, ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ರಿಪೇರಿ 24 ತಿಂಗಳು ಬೇಕಾಯ್ತು, ಆದ್ರೆ ಅಧಿಕಾರ ವಹಿಸಿಕೊಂಡು 24 ಗಂಟೆಯಲ್ಲೇ ಬಿಡದಿ ಫಲವತ್ತಾದ ಜಮೀನು ಕಿತ್ತುಕೊಳ್ಳುವ ದುಸ್ಸಾಹಸ ಮಾಡಿದ್ದಾರೆ ಅಂದ್ರು..
ರೈತರಿಂದ ಬಲವಂತವಾಗಿ ಜಮೀನು ಕಸೆಯುವುದಿಲ್ಲ ಅಂತಾ ಹೇಳ್ತಾರೆ ಸಿಎಂ ಹೇಳ್ತಾರೆ.. ಆದ್ರೆ ವಾಸ್ತವವಾಗಿ ರೈತರ ಮನೆಗೆ ರಾತ್ರಿ ಗೂಂಡಾಗಳು ನುಗ್ಗಿ, ಜಮೀನನ್ನ ಬಿಟ್ಟುಕೊಡಬೇಕು ಅಂತಾ ಧಮ್ಕಿ ಹಾಕ್ತಾರೆ ಅಂತಾ ರೈತರು ಹೇಳ್ತಿದ್ದಾರೆ.. ಆದ್ರೆ ಈ ಮಧ್ಯೆ ರೈತರು ಕೊಟ್ಟರೇ ಪಾತ್ರ ಜಮೀನು ಪಡೀತೆವೆ ಅಂತಾ ಸಿಎಂ ಕಪಟ ನಾಟಕ ಮಾಡ್ತಾರೆ ಅಂತಾ ಆಕ್ರೋಶಹೊರ ಹಾಕಿದ್ರು.. ಸಿಎಂ ಆದಮೇಲೂ ಡಿಕೆಶಿ ರಿಯಲ್ ಎಸ್ಟೇಟ್ ಧೋರಣೆಯಿಂದ ಹೊರಬರದಿರೋದು ಗೊತ್ತಾಗ್ತಿದೆ.. ನಾವು ಟೌನ್ ಶಿಪ್ ವಿರೋಧಿಸಲ್ಲ.. 70% ರೈತರು ಒಪ್ಪಿದಲ್ಲಿ ಮಾಡಬಹುದು ಎಂದರು.
ಡಿಕೆಶಿಯವ್ರೇ ರೈತರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡ್ಬೇಡಿ
ಸಿಎಂ ಬಂಧುಬಳಗವೇ ಬಿಡದಿಯಲ್ಲಿ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ ಅಂತಾ ರೈತರು ಮಾತನಾಡಿಕೊಳ್ಳುತ್ತಿದ್ದಾರೆ ಸಣ್ಣ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಅಂತಾನೂ ರೈತರು ಹೇಳ್ತಿದ್ದಾರೆ ಅಂತಾ ಹೇಳಿದ ಬಿವೈವಿ, ರೈತರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡ್ಬೇಡಿ ಅಂತಾ ಸಿಎಂಗೆ ಆಗ್ರಹಿಸುತ್ತೇನೆ.. ಕುಮಾರಸ್ವಾಮಿ ಕಾಲದಲ್ಲಿ ಆರಂಭವಾಗಿದೆ ಅಂತಾ ನೆಪವೊಡ್ಡಿ ಭೂಮಿ ಕಸೆಯಬೇಡಿ.. ಹೀಗೆ ಮಾಡಿದಲ್ಲಿ, ರೈತರ ಶಾಪಕ್ಕೆ ಸರ್ಕಾರ ಬಲಿಯಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ರು..
ರಾಜ್ಯದಲ್ಲಿ ಇಂಥ ಸಮಸ್ಯೆ ಇದ್ದರೂ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ.. ರಾಹುಲ್ ಗಾಂಧಿ ರೈತರ ಸಂಕಷ್ಟ ಅರಿಯಬೇಕು.. ರೈತರ ಪರ ನಿಲುವನ್ನ ರಾಹುಲ್ ಗಾಂಧಿಯವರೂ ತೆಗೆದುಕೊಳ್ಳಬೇಕು ಅಂತಾ ಆಗ್ರಹಿಸಿದ್ರು.. ಜೊತೆಗೆ ನಾಳೆ ಫ್ರೀಡಮ್ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಅಂತಾ ಹೇಳಿದ್ರು..
ರಾಜ್ಯದ ಕೃಷಿ ಸಚಿವರು ಯಾರು?
ಕೃಷಿ ಸಚಿವರೇ ಇಲ್ಲದಿರೋದು ರಾಜ್ಯದಲ್ಲಿ ಕೃಷಿಗೆ ಆಧ್ಯತೆ ಇಲ್ಲ ಎನ್ನುವುದನ್ನ ತೋರಿಸುತ್ತದೆ.. ಬೀಕರ ಬರ ಇದೆ.. ಬಿತ್ತನೆ ಮಾಡಿದರೂ ಮೊಳಕೆಯೊಡದಿಲ್ಲ.. ಆದ್ರೆ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರು ಸಿಎಂ ಸುಮ್ಮನಾಗಿದ್ದಾರೆ.. ಸಿಎಂ, ಸಚಿವರನ್ನ ಜಿಲ್ಲೆಗಳಿಗೆ ಕಳುಹಿಸಬೇಕು.. ವಾಸ್ತವಿಕ ಪರಿಸ್ಥಿತಿ ಅರಿತು ರಾಜ್ಯ ಸರ್ಕಾರ ಸ್ಪಂದಿಸಲಿ ಅಂತಾ ಇತ್ತಾಯಿಸಿದ ಬಿವೈವಿ, ಪತ್ರಬರೆದು ಸುಮ್ಮನೆ ಕೂತರೆ ರೈತರ ಕಣ್ಣೀರು ವರೆಸಿದಂತಾಗುವುದಿಲ್ಲ ಅಂತಾ ಹೇಳಿದ್ರು.
ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೀತಿದೆ.. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮತೀಯ ಶಕ್ತಿಗಳಿಗೆ ಸ್ವರ್ಗದ ಹಾಗಿದೆ.. ಕೊಲೆ ದೌರ್ಜನ್ಯ ನಡೆದರೂ ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡುತ್ತಿದೆ ಎನ್ನುವಂತಾಗಿದೆ. ಇತ್ತೀಚೆಗೆ ಹಾವೇರಿಯಲ್ಲಿ ಪಟಾಕಿ ಸಿಡಿಸಿದ್ದರು ಅಂತಾ ಹಿಂದೂಗಳ ಮೇಲೆ ಮಾರಣಾಂತಿ ಹಲ್ಲೆ ಮಾಡಿದ್ದರು ನಡೆದಿತ್ತು.. ರಟ್ಟಿಹಳ್ಳಿಯಲ್ಲಿ ಶಿವಾಜಿ ರಾವ್ ಎನ್ನುವವರ ಹತ್ಯೆಯಾಗಿರೋದನ್ನ ನೋಡಿದ್ದೇವೆ.. ಯಲ್ಲಾಪುರದ ದಲಿತ ಮಹಿಳೆ ಹತ್ಯೆ.. ಕೊಪ್ಪಳ ಹತ್ಯೆಯಾದ ಗವಿಸಿದ್ಧಪ್ಪನಿಗೆ ನ್ಯಾಯಕ್ಕಾಗಿ ತಂದೆ ತಾಯಿ ಪ್ರತಿಭಟಿಸಿದರೇ ಮೃತ ವ್ಯಕ್ತಿಯ ಮೇಲೆ ಪೋಕ್ಸೋ ಕೇಸ್ ದಾಖಲಿಸಲಾಗಿತ್ತು.
ಕಾಂಗ್ರೆಸ್ ಸರ್ಕಾರ ಸಚಿವರ ಹೇಳಿಕೆಗಳು ಮತೀಯ ಶಕ್ತಿಗಳಿಗೆ ಧೈರ್ಯ ತಂದುಕೊಡುತ್ತಿದೆ.. ಅಲ್ಪ ಸಂಖ್ಯಾತರ ಓಲೈಕೆ ರಾಜಕಾರಣ ವಿರೋಧಿಸಿ ಹಾವೇರಿಯಲ್ಲಿ ಹೋರಾಟ ಹಮ್ಮಿಕೊಂಡಿದ್ದೇವೆ ಅಂತಾ ಮಾಹಿತಿ ನೀಡಿದ್ರು.. ಎಸ್ ಐಆರ್ ನ್ನ ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿದ್ದಾರೆ..ಈ ಮಧ್ಯೆ ರಾಜ್ಯ ಸರ್ಕಾರ ಖಾಯಂ ನಿವಾಸಿ ಪತ್ರ ನೀಡುತ್ತಿರುವುದು ಖಂಡನಾರ್ಹ.. ನಿನ್ನೆ ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.