ಗರೀಬಿ ಹಠಾವೋದಿಂದ ಕಾಂಗ್ರೆಸ್‌ ನಾಯಕರ ಬಡತವನಷ್ಟೇ ದೂರ: ಬಿ.ವೈ.ವಿಜಯೇಂದ್ರ

Published : Mar 16, 2023, 02:00 AM IST
ಗರೀಬಿ ಹಠಾವೋದಿಂದ ಕಾಂಗ್ರೆಸ್‌ ನಾಯಕರ ಬಡತವನಷ್ಟೇ ದೂರ: ಬಿ.ವೈ.ವಿಜಯೇಂದ್ರ

ಸಾರಾಂಶ

ಕಾಂಗ್ರೆಸ್‌ ಗರೀಬಿ ಹಠಾವೋ ಎಂಬ ಘೋಷಣೆ ಮೊಳಗಿಸಿದರೂ ದೇಶದ ಜನರ ಬಡತನ ಹೋಗಲಿಲ್ಲ. ಅದರ ಬದಲಾಗಿ ಕಾಂಗ್ರೆಸ್‌ ಮುಖಂಡರ ಬಡತನ ಹೋಯಿತು ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ರಾಣಿಬೆನ್ನೂರು (ಮಾ.16): ಕಾಂಗ್ರೆಸ್‌ ಗರೀಬಿ ಹಠಾವೋ ಎಂಬ ಘೋಷಣೆ ಮೊಳಗಿಸಿದರೂ ದೇಶದ ಜನರ ಬಡತನ ಹೋಗಲಿಲ್ಲ. ಅದರ ಬದಲಾಗಿ ಕಾಂಗ್ರೆಸ್‌ ಮುಖಂಡರ ಬಡತನ ಹೋಯಿತು ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ನಗರದಲ್ಲಿ ಬುಧವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದು ಇಷ್ಟುವರ್ಷ ಕಳೆದರೂ ಜನರಿಗೆ ಸೂರು, ವಿದ್ಯುತ್‌, ನೀರು ಇರಲಿಲ್ಲ. ಆದರೆ ಮೋದಿ ಬಂದ ಮೇಲೆ ಎಲ್ಲವನ್ನೂ ಮಾಡಿದರು. 7.70 ಲಕ್ಷ ಮನೆ ನಿರ್ಮಿಸಬೇಕು ಎಂದು ಮೋದಿ ಗುರಿ ಇದೆ. ಈಗ 2.6 ಲಕ್ಷ ಕಟ್ಟಿದ್ದಾರೆ. 15 ಸಾವಿರ ಕಿಲೋಮೀಟರ್‌ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕನಸು ಕಂಡಿದ್ದಾರೆ. ಮೋದಿ ಅದಕ್ಕಾಗಿ ಕೋಟ್ಯಂತರ ಹಣ ಬಳಸಿದ್ದಾರೆ. ರಸಗೊಬ್ಬರ ಕಚ್ಚಾತೈಲ ಬಹಳ ದುಬಾರಿ ಆದರೂ ನಮ್ಮ ರೈತರಿಗೆ ಕಡಿಮೆ ಬೆಲೆಗೆ ಕೊಡುತ್ತಿದ್ದಾರೆ. ಯೂರಿಯಾ ಗೊಬ್ಬರ ದರ .1600 ಇದ್ದರೆ ರೈತರು ಕೇವಲ .200 ನೀಡಿದರೆ ಸಾಕು, ಬಾಕಿ ಹಣ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದರು.

ಅನಾಥ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರಕ್ಕೆ ಶಿಫಾರಸ್ಸು

ಬಿಎಸ್‌ವೈ ಹೋರಾಟ: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಬಿ.ಎಸ್‌. ಯಡಿಯೂರಪ್ಪ ಮಾಡಿದಷ್ಟುಹೋರಾಟಗಳನ್ನು ಯಾರೂ ಮಾಡಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಭದ್ರ ಅಡಿಪಾಯ ಹಾಕಿದರು. ತಮ್ಮ ಬಗ್ಗೆ ಟೀಕೆ ಮಾಡುವವರ ಬಗ್ಗೆ ಯಡಿಯೂರಪ್ಪ ಸುಮ್ಮನಿದ್ದಾರೆ, ಮೌನದಿಂದಿದ್ದಾರೆ ಎಂದರೆ ಅದು ಅವರ ದೌರ್ಬಲ್ಯ ಅಲ್ಲ. ಹಿಂದೆ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಾ? ಎಂದು ಕೇಳಿದ್ದರು. ಅದನ್ನೇ ಸವಾಲಾಗಿ ತೆಗೆದುಕೊಂಡು ಬಿ.ಎಸ್‌. ಯಡಿಯೂರಪ್ಪ ಪಕ್ಷವನ್ನು ಆಡಳಿತಕ್ಕೆ ತಂದರು. 

ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಇಲ್ಲದಿದ್ದರೂ ಜನರು ಅವರಿಗೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಅವರಿಗೆ 81 ವರ್ಷ ಆಗಿದ್ದರೂ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಆದರೂ ಪಕ್ಷ ಅಧಿಕಾರಕ್ಕೆ ತರುವೆ ಎನ್ನುತ್ತಿದ್ದಾರೆ. ಬೇರೆ ಯಾರಿಗಾದರೂ ಈ ಎದೆಗಾರಿಕೆ ಇದೆಯಾ? ಯಡಿಯೂರಪ್ಪ ಅವರ ಕನಸು ಮತ್ತೆ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಬೇಕು ಎಂಬುದು ಹೊರತು ಮಕ್ಕಳನ್ನು ಮಂತ್ರಿ ಮಾಡಬೇಕು ಎಂಬುದಲ್ಲ ಎಂದು ಸ್ಟಷ್ಟಪಡಿಸಿದರು.

ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕೋವಿಡ್‌ ಸಮಯದಲ್ಲಿ ಯಡಿಯೂರಪ್ಪ ಜನರ ರಕ್ಷಣೆ ಮಾಡಿದ್ದಲ್ಲದೆ ಕೋವಿಡ್‌ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಒಂದು ಲಕ್ಷ ರು. ಪರಿಹಾರ ನೀಡಿದರು. ಉಪ ಚುನಾವಣೆ ಸಮಯದಲ್ಲಿ ನೀಡಿದ ಎಲ್ಲ ಭರವಸೆ ಈಡೇರಿಸಿದ್ದು, ಚುನಾವಣೆ ಮಾತು ಕೊಟ್ಟಂತೆ .205 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ, ನಗರಾಭಿವೃದ್ಧಿಗೆ .45 ಕೋಟಿ ನೀಡಿ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. 2023ರ ಚುನಾವಣೆಯಲ್ಲಿ ನಗರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯನ್ನು ಹೆಚ್ಚಿಸಿ: ಸಂಸದ ಜಿ.ಎಂ.ಸಿದ್ದೇಶ್ವರ

ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪವನಕುಮಾರ ಮಲ್ಲಾಡದ, ವಿಪ ಮಾಜಿ ಸದಸ್ಯ ಎ.ಎಚ್‌. ಶಿವಯೋಗಿ, ಪ್ರಮುಖರಾದ ಡಾ. ಬಸವರಾಜ ಕೇಲಗಾರ, ಕೆ. ಶಿವಲಿಂಗಪ್ಪ, ಭಾರತಿ ಅಳವಂಡಿ, ಭಾರತಿ ಜಂಬಗಿ, ಎಸ್‌.ಎಸ್‌. ರಾಮಲಿಂಗಣ್ಣನವರ, ಮಲ್ಲಿಕಾರ್ಜುನ ಅಂಗಡಿ, ಪರಮೇಶಪ್ಪ ಗೂಳಣ್ಣನವರ, ದೀಪಕ ಹರಪನಹಳ್ಳಿ, ಪ್ರಕಾಶ ಶೃಂಗೇರಿ, ಪವನ ಮೇಟಿ, ಮಂಜುನಾಥ ಓಲೇಕಾರ, ರೂಪಾ ಬಾಕಳೆ, ಪ್ರಕಾಶ ಪೂಜಾರ, ಎ.ಬಿ. ಪಾಟೀಲ, ಪಾಂಡುರಂಗ ಗಂಗಾವತಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?
ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿವಾದ; ಬೆಳಗಾವಿಯಲ್ಲಿ ಡಿಕೆಶಿ ಅಲರ್ಟ್, ಆಪ್ತರ ಲಂಚ್ ಮೀಟಿಂಗ್!